;

ವೋಟರ ಐಡಿಗೆ ಆಧಾರ ಲಿಂಕ ಜೋಡಣೆಗೆ ಅಧಿಕಾರಿಗಳು ಆಸಕ್ತಿ, ಜನರು ನಿರಾಸಕ್ತಿ….!!!

ವೋಟರ ಐಡಿಗೆ ಆಧಾರ ಲಿಂಕ ಜೋಡಣೆಗೆ ಅಧಿಕಾರಿಗಳು ಆಸಕ್ತಿ, ಜನರು ನಿರಾಸಕ್ತಿ.

ಸಿಂಧನೂರು: ಅ.25.ಮತದಾರ ಪಟ್ಟಿಗೆ ಆಧಾರ ಕಾರ್ಡ(.ಲಿಂಕ ) ಜೋಡಣೆ ಮಾಡುವಂತೆ ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಆಸಕ್ತಿಯಿಂದ ಓಡಾಡಿ ಕೆಲಸ ಮಾಡುತ್ತಿದ್ದಾರೆ.ಆದರೆ ಜನ ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರಿಸದೆ ನಿರ್ಲಕ್ಷ್ಯ ಮಾಡುತ್ತಿರುವದು ಕಂಡು ಬಂದಿದೆ. ಇದರಿಂದ ವೋಟರ ಐಡಿಗೆ ಆಧಾರ ಲಿಂಕ ಮಾಡುವ ಕೆಲಸ ನಿಧಾನ ಗತಿಯಲ್ಲಿ ನಡೆಯುತ್ತಿದೆ.

ವೋಟರ ಐಡಿಗೆ ಆಧಾರ ಲಿಂಕ ಮಾಡಬೇಕು ಇಲ್ಲ ದಿದ್ದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವದಿಲ್ಲ ಆದ್ದರಿಂದ ನಿರ್ಲಕ್ಷ್ಯ ಮಾಡದೇ ಸಾರ್ವಜನಿಕರು ವೋಟರ ಐಡಿಗೆ ಆಧಾರ ಲಿಂಕ ಮಾಡುವಂತೆ ನಗರಸಭೆಯ ಕಸದ ವಿಲೇವಾರಿ ವಾಹನದ ಧ್ವನಿ ವರ್ಧಕ ಮೂಲಕ ಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ನಗರ ಸಭೆಯಿಂದ ಮಾಡಲಾಗುತ್ತಿದೆ.

ನಗರ ಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರ ಸೇರಿದಂತೆ ನಗರ ಸಭೆಯ ಅಧಿಕಾರಿಗಳು ಶಿಬ್ಬಂದಿಗಳು ಶಾಲಾ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಇಲಾಖೆಯ ಕೆಲಸಗಳನ್ನು ಬದಿಗೊತ್ತಿ ಮನೆ ಮನೆಗೆ ಬೇಟಿ ನೀಡಿ ವೋಟರ ಐಡಿಗೆ ಆಧಾರ ಲಿಂಕ ಮಾಡುವಂತೆ ಮನವಿ ಮಾಡಿದರು ಸಹ ಜನ ಮತ್ತು ಜನಪ್ರತಿನಿದಿಗಳು ಸ್ಪಂದನೆ ನೀಡದೆ ನಿರಾಸಕ್ತಿ ತೋರಿಸುತ್ತಿದ್ದಾರೆ.

ವೋಟರಐಡಿಗೆ ಆಧಾರ ಲಿಂಕ ಮಾಡುವಂತೆ ನಾನು ಸೇರಿದಂತೆ ಅಧಿಕಾರಿಗಳು ಶಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು ಇದರ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ನಗರದ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ನಗರ ಸಭೆಯ ಪೌರಾಯುಕ್ತ ಮಂಜುನಾಥ ಗುಂಡುರ ಹೇಳಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ಈಗ ವೋಟರ ಐಡಿಗೆ ಆಧಾರ ಲಿಂಕ ಮಾಡುವ ಕೆಲಸ ನಡೆಯುತ್ತಿದೆ ಅಧಿಕಾರಿಗಳು ನಿಮ್ಮ ಮನೆಯ ಬಾಗಿಲಿಗೆ ಬಂದಾಗ ಆಧಾರ ಕಾರ್ಡಕೊಟ್ಟು ಎಲ್ಲರು ತಪ್ಪದೆ ಕಡ್ಡಾಯವಾಗಿ ವೋಟರ ಐಡಿಗೆ ಆಧಾರ ನಂಬರ ಜೋಡಣೆ ಮಾಡಿಸಬೇಕು ಎಂದು ನಗರ ಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರ ನಗರದ ನಾಗರಿಕರಲ್ಲಿ ಮನವಿ ಮಾಡಿಕೊಂಡರು.

ನಗರದ ವಿವಿಧ ವಾರ್ಡಗಳಲ್ಲಿ ಬೇರೆ ಕಡೆ ವಾಸಿಸುವವರ ಹೆಸರುಗಳನ್ನು ನಗರದ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿ ತಮ್ಮ ಹಾಗೂ ತಮ್ಮ ಹಿಂಬಾಲಕರ ಗೆಲುವಿಗಾಗಿ ವಿವಿದ ರಾಜಕೀಯ ಪಕ್ಷಗಳ ಮುಖಂಡರು ಕರಾಮತ್ತು ನಡೆಸಿ ಅವರ ಗೆಲುವಿಗೆ ಇದೆ ಮತದಾರರು ಆಶರೆಯಾಗಿದ್ದಾರೆ ಈಗ ಆಧಾರ ಲಿಂಕ ಮಾಡಿದರೆ ಅವರು ವಾಸಮಾಡುವ ಮೂಲ ಸ್ಥಳದ ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು ಇಲ್ಲ ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು ಎರಡು ಕಡೆ ಹೆಸರು ಇರುವದಿಲ್ಲ ಲಿಂಕ ಮಾಡಿಸಿದರೆ ನಮಗೆ ಮುಂದೆ ಚುನಾವಣೆಯಲ್ಲಿ. ಗೆಲುವಿಗೆ ಕಷ್ಷ ವಾಗುತ್ತದೆ ಎಂಬ ಆತಂಕದಿಂದ ನಗರ ಸಭೆಯ ಸದಸ್ಯರು ಸೇರಿದಂತೆ ಇತರ ರಾಜಕೀಯ ಪಕ್ಷಗಳ ಮುಖಂಡರು ವೋಟರ ಐಡಿಗೆ ಆಧಾರ ಲಿಂಕ ಮಾಡುವ ಕೆಲಸದಲ್ಲಿ ಸಹಕರಿಸುತ್ತಿಲ ಇದರಿಂದ ಅದಿಕಾರಿಗಳ ಕೆಲಸ ವಿಳಂಬ ವಾಗುತ್ತಿದೆ ಎನ್ನಲಾಗುತ್ತಿದೆ ನಗರ ಸಭೆಯ ಸದಸ್ಯರು ಸಹಕರಿಸಿದಾಗ ಮಾತ್ರ ಆಧಾರ ಲಿಂಕ ಮಾಡುವ ಕೆಲಸ ಯಶಸ್ಸಿಯಾಗಲು ಸಾಧ್ಯ….

ವಿಶೇಷ ವರಧಿ : ದುಗ್ಗಪ್ಪ ಮಲ್ಲಾಪೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;