ಸುಕನ್ಯಾ ಸಮೃದ್ಧಿ(ಭಾಗ್ಯ ಲಕ್ಷ್ಮಿ) ಯೋಜನೆಯ ಪಾಸ್ ಬುಕ್ ವಿತರಣೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ದಿನಾಂಕ 24/08/2022ರಂದು ಆಶ್ರಯ ಕಾಲೋನಿ(ಜನತಾ ಪ್ಲಾಟ್) ಇಟ್ಟಿಗಿಯಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ವಿತರಣೆ ಮಾಡಲಾಯಿತು. ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ‘ಸುಕನ್ಯಾ ಸಮೃದ್ಧಿ’ ಯೋಜನೆಯಾಗಿ ಬದಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2006-07ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಎಲ್ಐಸಿ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿತ್ತು. ಇದೀಗ ಈ ಯೋಜನೆಯನ್ನು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ ಯೋಜನೆ’ಗೆ ವರ್ಗಾಯಿಸಲಾಗಿದೆ.
ಇದುವರೆಗೆ ‘ಭಾಗ್ಯಲಕ್ಷ್ಮಿ’ ಯೋಜನೆಯಲ್ಲಿ ಬಾಂಡ್ ಪಡೆದವರಿಗೆ 18 ವರ್ಷಕ್ಕೇ ಮೆಚ್ಯೂರಿಟಿ ಹಣ ಸಿಗುತ್ತಿತ್ತು. ಇನ್ನು ಮುಂದೆ 21 ವರ್ಷದವರೆಗೆ ಕಾಯಬೇಕು. ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ‘ಸುಕನ್ಯಾ ಸಮೃದ್ಧಿ’ ಯೋಜನೆಯಾಗಿ ಬದಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2006-07ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು.ಹೊಸ ಯೋಜನೆಯ ವಿಶೇಷತೆಯನ್ನು ಶ್ರೀ ಮತಿ ಚಿಮ್ಮಳಮ್ಮರವರು(ಅಂಗನವಾಡಿಮೇಲ್ವಿಚಾರಕಿ)
ಹೊಸ ಯೋಜನೆ (ಸುಕನ್ಯಾ ಸಮೃದ್ಧಿ ಯೋಜನೆ)ಯಲ್ಲಿ ರಾಜ್ಯ ಸರಕಾರ ಪ್ರತಿ ಮಗುವಿಗೆ ವರ್ಷಕ್ಕೆ 3 ಸಾವಿರ ರೂ.ಗಳಂತೆ 15 ವರ್ಷಗಳ ಕಾಲ (45 ಸಾವಿರ ರೂ.) ಪಾವತಿಸುತ್ತದೆ. ಫಲಾನುಭವಿಗೆ 21 ವರ್ಷವಾದಾಗ 1.27 ಲಕ್ಷ ರೂ. ಸಿಗುತ್ತದೆ.ಸುಕನ್ಯಾ ಸಮೃದ್ಧಿ ಯೋಜನೆಗೆ ಸರಕಾರ ಹಣ ತುಂಬುತ್ತದೆ. ಪೋಷಕರು ಕನಿಷ್ಠ 6 ತಿಂಗಳಿಗೊಮ್ಮೆ ಆದರೂ ಅಂಚೆ ಕಛೇರಿಯಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗೆ ಕನಿಷ್ಠ 1000ರೂಗಳನ್ನಾದರು ಜಮಾ ಮಾಡಿ ಹೆಚ್ಚು ಹಣಗಳಿಸಬಹುದು. ಎಂದು ಅಂಗನವಾಡಿಯಲ್ಲಿ ಸೇರಿದ್ದ ಗ್ರಾಮದ ಜನತೆಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಇಟ್ಟಿಗಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಯುತ ಮಾದೂರು ಪ್ರಕಾಶ್ ಸರ್ ಹಾಗೂ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀ ಮತಿ ಚಂದ್ರಮ್ಮ & ಅಂಗನವಾಡಿ ಸಹಾಯಕಿ ಬಸಮ್ಮ ಭಾಗವಹಿಸಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
