ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯ…
ಹರಪನಹಳ್ಳಿ :-ಆ 14 ರಾಜ್ಯದಲ್ಲಿಯೇ ಅತ್ಯಂತ ಶೋಷಣೆಯ ಸ್ಥಿತಿಯನ್ನು ಅನ್ವಯಿಸುತ್ತಿರುವ ಮಡಿವಾಳ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ, ಹಿಂದುಳಿದಿದ್ದು ರಾಜ್ಯ ಸರ್ಕಾರ ಕೊಡಲೇ ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಬೇಕು ಎಂದು ಪುರಸಭೆ ಅಧ್ಯಕ್ಷ ಎಚ್ಎಂ ಅಶೋಕ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಡಿವಾಳ ಸಮಾಜ ನಗರ ಘಟಕದ ಪದಾಧಿಕಾರಿಗಳು ಮಹಿಳೆಯರು ಹಾಗೂ ಮುಖಂಡರು ಪುರಸಭೆ ಅಧ್ಯಕ್ಷರು ಅವರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿಯೇ ಬಟ್ಟೆಯ ಕೊಳೆಯನ್ನು ತೆಗೆಯುವ ಸಮಾಜ ಇದಾಗಿದ್ದು ದೇಶ ಹಾಗೂ ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಕ್ಷಯ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಿಗಳ ಮಲಮೂತ್ರ ಬಟ್ಟೆಗಳನ್ನು ಶುಚಿಯಾಗಿರುವ ಸಮಾಜದ ಅವರಿಂದ ನಡೆಯುತ್ತಿದೆ ಆದರೂ ಅವರನ್ನು ಅನೇಕ ಕಡೆಗಳಲ್ಲಿ ಇಂದಿಗೂ ಕಾಯಂ ನೌಕರರ ಎಂದು ಪರಿಗಣಿಸದೆರುವುದು ವಿಷಾದ ಸಂಗತಿಯಾಗಿದೆ ಎಂದು ಹೇಳಿದರು.
ಎಂಟು ದೇಶದಲ್ಲಿ 18 ರಾಜ್ಯಗಳಲ್ಲಿ ಮಡಿವಾಳ ಸಮಾಜವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿವೆ ನಾಲ್ಕು ರಾಜ್ಯಗಳಲ್ಲಿ ಇತರೆ ವರ್ಗ ಪಟ್ಟಿಯಲ್ಲಿದ್ದು ಅನೇಕ ವರ್ಷಗಳಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಹೋರಾಟಗಳನ್ನು ಮಾಡಿದರು ಯಾವುದೇ ಪಕ್ಷಗಳು ಗಮನ ಹರಿಸುತ್ತಿಲ್ಲ ಕೂಡಲೇ ರಾಜ್ಯ ಸರ್ಕಾರ ನಮ್ಮ ಸಮುದಾಯಕ್ಕೆ ಎಸ್ ಸಿ ಮೀಸಲಾತಿ ಕಲ್ಪಿಸಿ ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಡಿವಾಳ ಸಮಾಜದ ಮುಖಂಡರು ಮಹಿಳೆಯರು ತಾಲೂಕಿನಲ್ಲಿ ಸಮುದಾಯದ ಭವನ ಸೂಚಿತವಾದ ಬಿ ಕಾಟ್ ಮನೆಗಳು ಸೇರಿದಂತೆ ಇತರೆ ಮೂಲ ಸೌಕರ್ಯ ಕಲ್ಪಿಸಿ ಕೊಡುವಂತೆ ಪುರಸಭೆ ಅಧ್ಯಕ್ಷರಿಗೆ ಬೇಡಿಕೆ ಸಲ್ಲಿಸಿದರು. ತೆಕ್ಕೆ ಸ್ಪಂದಿಸಿದ ಅವರು ಶಾಸಕ ಜೀ ಕರುಣಾಕರ ರೆಡ್ಡಿ ಅವರಿಗೆ ಗಮನಕ್ಕೆ ತಂದು ಪಟ್ಟಣದಲ್ಲಿ ಸುಸಜ್ಜಿತವಾದ ದೋಭಿಘಾಟ್, ಸಮುದಾಯ ಭವನ, ಸಮುದಾಯಕ್ಕೆ ಸಿಎ ನಿವೇಶನ ವಸತಿ ನಿಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ನಗರ ಘಟಕದ ಅಧ್ಯಕ್ಷ ಚಂದ್ರಕಾಂತ್. ಭರಮಣ್ಣ, ಕಣಿವೆಹಳ್ಳಿ ಮಂಜುನಾಥ್,ಸಿದ್ದಪ್ಪ ರೆಡ್ಡಿ, ನಿಂಗಪ್ಪ,ಕೋಟೆಪ್ಪ,ಅಂಜಿನಪ್ಪ, ಮಜ್ಜಿಗೆರಿ ಬಸವರಾಜ್, ಕೃಷ್ಣಮೂರ್ತಿ,ಕರಿಬಸಪ್ಪ, ಹನುಮಂತಪ್ಪ,ರಮೇಶ್, ಬಸವರಾಜ್,ಪೃಥ್ವಿರಾಜ್, ರೇಖಾಮ್ಮ,ವಿಜಯಲಕ್ಷ್ಮಿ, ರೇಣುಕಮ್ಮ,ಸುಧಾ,ಗೀತಮ್ಮ, ಸುರೇಶ್,ಇತರರು ಭಾಗವಹಿಸಿದ್ದರು…

ವರದಿ.ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
