;

ಸೈನಿಕ ತೆರಿಗೆ ಪ್ರತ್ಯೇಕವಾಗಿ ಜಾರಿಯಾಗಬೇಕೆಂದು ಏಕಾಂಗಿಯಾಗಿ ಹೋರಾಟ ಯುವ ಸಾಹಿತಿ ಧನಂಜಯ…!!!

ಸೈನಿಕ ತೆರಿಗೆ ಪ್ರತ್ಯೇಕವಾಗಿ ಜಾರಿಯಾಗಬೇಕೆಂದು ಏಕಾಂಗಿಯಾಗಿ ಹೋರಾಟ
ಯುವ ಸಾಹಿತಿ ಧನಂಜಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ರಾಜ ವೀರ ಮದಕರಿ ನಾಯಕ ವೃತ್ತದಲ್ಲಿ ಸೈನಿಕ ತೆರಿಗೆಯನ್ನು ಪ್ರತ್ಯೇಕವಾಗಿ ಜಾರಿಯಾಗಬೇಕು ಎಂದು ಏಕಾಂಗಿಯಾಗಿ ಹೋರಾಟ ನಡೆಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿ ಭಾರತದ ರಾಷ್ಟ್ರ ಮಹಾ ಶಕ್ತಿಯ ನವ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ದೇಶವ್ಯಾಪಿ ಸೈನಿಕ ತೆರಿಗೆಯನ್ನು ಪ್ರತ್ಯೇಕವಾಗಿ ಜಾರಿಗೆ ತರಬೇಕು ಮತ್ತು ಸೈನಿಕ ನಿಧಿ ಹೆಸರಿನಲ್ಲಿ ವಿವಿಧ ಮೂಲಗಳಿಂದ ಸುಂಕ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು
ಪ್ರಸ್ತುತ ಚಾಲ್ತಿಯಲ್ಲಿರುವ ಈವರೆಗೆ ಎಲ್ಲ ತೆರಿಗೆಗಳನ್ನು ಹೊರತುಪಡಿಸಿ ಹೊಸದಾಗಿ ಸೈನಿಕರಿಗೆ ತೆರಿಗೆ ಎಂಬ ಮತ್ತೊಂದು ರೀತಿಯ ತೆರಿಗೆ ಯನ್ನು ಜಾರಿಗೆ ತರಬೇಕಿದೆ. ಮತ್ತು ಸರ್ಕಾರ ಸರ್ಕಾರಿ ಎತ್ತರವಾಗಿ ಪ್ರತಿ ನಿತ್ಯ ನಿರಂತರ ಕಾರ್ಯನಿರ್ವಹಿಸುವ ಪ್ರತಿಯೊಂದು ವಲಯ ಹಾಗೂ ಸೀಮಿತ ಅವಧಿ ನಡೆಸುವ ಅನೇಕ ಕಾರ್ಯಚಟುವಟಿಕೆಗಳಿಗೆ ಆ ಕ್ಷಣದಲ್ಲೇ ಪಾವತಿಸಿ ರಶೀದಿ ಕೊಡುವ ಮೂಲಕ ಇನ್ನೊಂದು ರೀತಿಯ ಸಂಕವನ್ನು ಸೈನಿಕನಿಗೆ ಎಂಬ ಹೆಸರಿನಲ್ಲಿ ದೇಶವ್ಯಾಪಿ ಜಾರಿಗೆ ತರಬೇಕಿದೆ. ಇದೇ ಸಂದರ್ಭದಲ್ಲಿ ಸೈನಿಕ ತೆರಿಗೆ ಮತ್ತು ಸೈನಿಕನಿಗೆ ಎಂಬ ಎರಡು ರೀತಿಯ ಹಣ ಸಂಗ್ರಹದ ವಿಧಾನವನ್ನು ದೇಶಾದ್ಯಂತ ಕೇಂದ್ರ ಸರ್ಕಾರವು ಪ್ರತಿಯೊಂದು ರಾಜ್ಯಗಳಿಗೂ ಶೀಘ್ರವಾಗಿ ಜಾರಿಗೊಳಿಸಬೇಕೆಂದು.
ನಮ್ಮ ಸೈನಿಕ ದೇಶ ಕಾಯುವ ರಕ್ಷಕ.ದೇಶದ ಗಡಿ ಸುಭದ್ರವಾಗಿ ಇದ್ದರೆ ಮಾತ್ರ ದೇಶದೊಳಗಿನ ಪ್ರತಿಯೊಂದು ಮನೆಯೂ ಸುರಕ್ಷಿತವಾಗಿರಲು ಸಾಧ್ಯ ನಮ್ಮ ಅಖಂಡ ಭಾರತ ದೇಶದಲ್ಲಿ ಗಡಿಯಲ್ಲಿ ಹಗಲಿರುಳು ಬೆಟ್ಟ ಕಾಡು ನದಿ-ಸಮುದ್ರ ದಂತಹ ದುರ್ಗಾ ಪ್ರದೇಶದಲ್ಲಿ ಚಳಿ ಮಳೆ ಗಾಳಿ ಹಿಮಾ ಬಿಸಿಲು ಇದ್ಯಾವುದನ್ನೂ ಲೆಕ್ಕಿಸದೆ ನಮ್ಮ ಪ್ರಾಣವನ್ನು ಒತ್ತೆಯಿಟ್ಟು ಹಸಿವು ಬಾಯಾರಿಕೆ ಗಮನವಿಲ್ಲದೇ ಶತ್ರುಗಳಿಗೆ ಬಂದೂಕಿನಿಂದ ಗುಂಡಿಗೆ ಗುಂಡು ಕೊಟ್ಟು ನಮ್ಮೆಲ್ಲರನ್ನು ಕಾಯುತ್ತಿರುವ ಮಹಾ ದೈವ ಸ್ವರೂಪಿ ಯೋಧರಿಗೆ ಅನಂತ ಕೃತಜ್ಞತೆಯನ್ನು ಪ್ರತಿಯೊಬ್ಬ ಭಾರತೀಯನು ಪ್ರತಿನಿತ್ಯ ಸಲ್ಲಿಸಬೇಕು.


ನಮ್ಮ ಚಿರ ಯವ್ವನದ ವಯಸ್ಸಿನಲ್ಲಿ ಬಂಧು ಬಳಗವನ್ನೆಲ್ಲ ತೊರೆದು ದೇಶಸೇವೆಯೇ ಈಶಸೇವೆ ಎಂದು ದೃಢಮನಸ್ಸಿನಿಂದ ಸರ್ವಸ್ವವನ್ನೂ ತ್ಯಾಗಮಾಡಿ ದೇಶದ ಉಳಿವಿಗಾಗಿ ಜೀವನವನ್ನು ಬಲಿದಾನ ಮಾಡಿದಂತಹ ಮಹಾನ್ ವೀರ ಯೋಧರಿಗೆ ಪ್ರತಿಯೊಬ್ಬ ನಾಗರಿಕರು ಸಹ ಸದಾಕಾಲ ಚಿರಋಣಿಯಾಗಿರಬೇಕು.
ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಅಂತಹ ತೆರಿಗೆ ಗಳಿಗೆ ಕಾಲದಲ್ಲಿ ಜೊತೆಗೆ ಸೈನಿಕರ ಎಂಬ ಮತ್ತೊಂದು ಕಾಲವನ್ನು ಹೊಸದಾಗಿ ಸೇರಿಸಿಕೊಂಡು ಎಲ್ಲಾ ತೆರಿಗೆಗಳು ಮಾಡುವಾಗ ಇದನ್ನು ಸಹ ಪ್ರತಿವರ್ಷವೂ ಪ್ರತಿಯೊಂದು ಕುಟುಂಬದಿಂದ ಇಂತಿಷ್ಟು ರೂಪಾಯಿ ನಿಗದಿಪಡಿಸುವಲ್ಲಿ ಮಾಡಬೇಕೆಂದು.
ಕೈಮುಗಿದು ಪ್ರಧಾನಮಂತ್ರಿಗಳಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಹೋರಾಟಗಾರರ ಧನಂಜಯ ಪತ್ರಿಕೆಯ ಮೂಲಕ ಮನವಿ ಮಾಡಿಕೊಂಡರು…

ವರದಿ. ವಿರೇಶ್. ಕೆ. ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;