;

ಅದ್ದೂರಿ ಸ್ವಾತಂತ್ರ್ಯ ದಿನೋತ್ಸವ ಆಚರಣೆ….!!!

ಅದ್ದೂರಿ ಸ್ವಾತಂತ್ರ್ಯ ದಿನೋತ್ಸವ ಆಚರಣೆ.

ದಿ :15/08/2022ರಂದು ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದ ಮುಖ್ಯ ಕೇಂದ್ರ ಬಿಂದು ಸರ್ಕಲ್ ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಧ್ವಜಾರೋಹಣವನ್ನು ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಚಲವಾದಿ ಪುಷ್ಪಾವತಿಮಹಾಬಲೇಶ್ವರಪ್ಪ ರವರು ನೆರವೇರಿಸಿದರು……

ಉಪಾಧ್ಯಕ್ಷರಾದ ಶ್ರೀ ಮದ್ದಾನಸ್ವಾಮಿಯವರು, ಸರ್ವ ಸದಸ್ಯರುಗಳು, ಗ್ರಾಮದ ಗಣ್ಯ ಮಾನ್ಯರುಗಳು, ಆರಕ್ಷಕ ಠಾಣೆ, ಆರೋಗ್ಯ ಇಲಾಖೆಯವರು, ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳು, ಶಾಲಾ ಮುಖ್ಯ ಗುರುಗಳು /ಶಾಲಾ ಸಹ ಶಿಕ್ಷಕರುಗಳು, ಎಲ್ಲಾ ಸಿಬ್ಬಂದಿಗಳು, ಗ್ರಾಮದ ಇತರೆ ಅಧಿಕಾರಿಗಳು,ಗ್ರಾಮದಲ್ಲಿ ಇರುವ ಹಿರಿಯ – ಕಿರಿಯರು ಎಲ್ಲಾ ಭಾರತೀಯ ಪ್ರಜೆಗಳಾದವರು ಪಾಲ್ಗೊಂಡು ತುಂಬಾ ಯಶಶ್ವಿ ಯಾಗಿಸಿದರು. ಇದೇ ಪ್ರಪ್ರಥಮವಾಗಿ ದೊಡ್ಡದಾದ ಬಾವುಟವನ್ನು ಇಟ್ಟಿಗಿ ಗ್ರಾಮ ಪಂಚಾಯತಿ & ಇತರೆ ಪ್ರಗತಿಪರ ಸಂಘಟನೆಗಳ ಸಂಯೋಗದಡಿ ಗ್ರಾಮದ ಕೇಂದ್ರ ಬಿಂಧುವಿನಲ್ಲಿ ನೆರವೇರಿಸಲಾಯಿತು……

ಇಟ್ಟಿಗಿ ಗ್ರಾ ಪಂ ವತಿಯಿಂದ ನೆಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನೆಡೆದ ಶಾಲಾಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವೀರ ಭಗತ್ ಸಿಂಗ್ ರವರ ಜೀವನಕುರಿತ ನಾಟಕ ಹೃದಯಸ್ಪರ್ಶಿಯಾಗಿತ್ತು…. ಹಾಗೆಯೇ ವಿವಿಧ ಶಾಲಾಮಕ್ಕಳಿಂದ ಹಲವಾರು ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಮೂಡಿ ಬಂದವು.ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಶಿಲ್ಪಿಗಳಿಗೆ, ಹೈನುಗಾರಿಕೆಯ & ಪ್ರಗತಿ ಪರ ರೈತರಿಗೆ ಹಾಗೂ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ, ಗ್ರಾ ಪಂ ಸದಸ್ಯರಿಗೂ ಸನ್ಮಾನ ಮಾಡಿ ಅಮೃತ ಮಹೋತ್ಸವದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;