ದಲಿತ ವಿದ್ಯಾರ್ಥಿ ಪರಿಷತ್ ಯುವ ಜನರನ್ನು ಹೊಂದಿದೆ – ಮೌನೇಶ ಜಾಲವಾಡಗಿ.
ಸಿಂಧನೂರು : ಅ.13.ದಲಿತ ವಿದ್ಯಾರ್ಥಿ ಪರಿಷತ್ ಸಮಿತಿಯು ರಾಜ್ಯಮಟ್ಟದಲ್ಲಿ ಬಹುದೊಡ್ಡ ವಿದ್ಯಾರ್ಥಿ ಯುವ ಜನರನ್ನ ಹೊಂದಿರುವಂತ ಸಂಘಟನೆಯಾಗಿ ಹೊರ ಹೊಮ್ಮಿದೆ. ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಮೌನೇಶ ಜಾಲವಾಡಗಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂತನ ಸಿಂಧನೂರು ತಾಲೂಕು ಸಮಿತಿ ರಚನೆ ಮಾಡಿ ಆದೇಶ ಪತ್ರ ನೀಡಿ ಮಾತನಾಡಿದರು.
ವಿದ್ಯಾರ್ಥಿ ಯುವ ಜನರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವ ಸಂಘಟನೆಯಾಗಿದೆ. ಹಾಗೂ ವಿದ್ಯಾರ್ಥಿಗಳ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದೆ. ದಲಿತ ವಿದ್ಯಾರ್ಥಿ ಪರಿಷತ್ ಹತ್ತು ಹಲವು ವಿದ್ಯಾರ್ಥಿ ಪರ ಯುವಜನರ ಪರ ಕಾರ್ಯಕ್ರಮಗಳನ್ನ ರೂಪಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದೆ. ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಹೆಸರಿನಲ್ಲಿ ಈ ನಾಡಿನ ವಿದ್ಯಾರ್ಥಿ ಯುವ ಜನರಿಗೆ ಉಚಿತವಾಗಿ ಕೋಚಿಂಗ್ ಕೊಡಿಸುವುದು, ವಸತಿ ನಿಲಯದ ಸೌಲಭ್ಯವನ್ನು ಒದಗಿಸುವುದು, ಯುವ ಜನರಿಗೆ ನಾಯಕತ್ವದ ಗುಣಗಳನ್ನು ಬೆಳೆಸುವುದು, ಶೋಷಿತರ ನಿಜವಾದ ಇತಿಹಾಸವನ್ನು ಅವರಲ್ಲಿ ಮೈಗೂಡಿಸುವ ಹಾಗೂ ಶೋಷಣೆ ಮುಕ್ತ ಭವ್ಯ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿ ಯುವ ಜನರ ಪಾತ್ರ ಅಮೂಲ್ಯವಾದದ್ದು ಆದ್ದರಿಂದ ನಾವೆಲ್ಲ ಒಟ್ಟಾಗಿ ಈ ದೇಶದಲ್ಲಿ ಈ ನಾಡಿನಲ್ಲಿ ಸಮ ಸಮಾಜ ನಿರ್ಮಾಣ ಮಾಡೋಣ.

ನಾವೆಲ್ಲರೂ ಬದಲಾಗುವ ಹಾಗೂ ಬದಲಾಯಿಸುವ ನಿಟ್ಟಿನಲ್ಲಿ ಕಟ್ಟುವ ಸಂಕಲ್ಪ ಮಾಡೋಣ ಜೊತೆಯಾಗಿ ನಡೆಯೋಣ, ಅಂಬೇಡ್ಕರ ಆಶಯವನ್ನು ಎತ್ತಿ ಹಿಡಿಯೋಣ, ಅವರ ಆದರ್ಶವನ್ನು ನಾವೆಲ್ಲ ಪಾಲಿಸೋಣ ಎಂದು ಸಾರಿದರು.
ದಲಿತ ವಿದ್ಯಾರ್ಥಿ ಪರಿಷತ್ ನೂತನ ತಾಲೂಕು ಸಮಿತಿಯ ಸಂಚಾಲಕರಾಗಿ ವಿರುಪಣ್ಣ ರಾಮತ್ನಾಳ, ಸಹ ಸಂಚಾಲಕರಾಗಿ ರಶೀದ್ ಬನ್ನಿಗನೂರು, ಪ್ರಧಾನ ಕಾರ್ಯದರ್ಶಿಯಾಗಿ ರವಿಚಂದ್ರ ರೈತನಗರ ಕ್ಯಾಂಪ್, ಶಿವರಾಜ್ ಸಾಂಸ್ಕೃತಿಕ ಸಂಘಟನೆ ಕಾರ್ಯದರ್ಶಿ, ವಿಘ್ನೇಶ್ ಕೆಂಗಲ್ ಸಂಪರ್ಕ ಕಾರ್ಯದರ್ಶಿ, ರಮೇಶ್ ಖಜಾಂಚಿ ರಮೇಶ್ ರವುಡಕುಂದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೌನೇಶ ತುಗ್ಗಲದಿನ್ನಿ, ಜಿಲ್ಲಾ ಕಾರ್ಯದರ್ಶಿ ಚೆನ್ನಬಸವ ಯಾಪಲಪರ್ವಿ, ಹುಸೇನಪ್ಪ ಇರಕಲ್, ಸುರೇಶ ಎಲೆಕೂಡ್ಲಿಗಿ, ಅಶೋಕ ಸಾಗರ್ ಕ್ಯಾಂಪ್ ಭಾಷಾ ಸಾಬ್ ರೌಡಕುಂದ ಇದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
