;

ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣವಾಗಬೇಕು – ಅಮರೇಗೌಡ ಮಲ್ಲಾಪುರ…!!!

ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣವಾಗಬೇಕು – ಅಮರೇಗೌಡ ಮಲ್ಲಾಪುರ

ಸಿಂಧನೂರು:ಅ.11 ಭಾರತ ದೇಶವು ಪ್ಲಾಸ್ಟಿಕ್ ಮುಕ್ತ ದೇಶವಾಗಬೇಕು. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ ಅದರ ಬಳಕೆ ಕಡಿಮೆ ಆಗಬೇಕೆಂದು ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪುರು ಹೇಳಿದರು.

ದಿ. ಅಗಸ್ಟ್ 11 ರಂದು ತಾಲೂಕಿನ ದುಗ್ಗಮ್ಮನ ಗುಂಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನಗುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಸಿಂಧನೂರು ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರಿಸರಸ್ನೇಹಿ ಭಾರತ ಧ್ವಜದ ಬ್ಯಾಡ್ಜ್ ಗಳನ್ನು ಹಾಗೂ ನೋಟ್ ಬುಕ್ ಗಳನ್ನು ವಿತರಣೆ ಮಾಡಲಾಯಿತು.

ಜೀವಸ್ಪಂದನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅವಿನಾಶ್ ದೇಶಪಾಂಡೆ ಅವರು ಮಾತನಾಡಿ ಸೇವಾ ಮನೋಭಾವನೆಯಿಂದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ವತಿಯಿಂದ ಬ್ಯಾಡ್ಜ್ ಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಇನ್ನೂ ಹೆಚ್ಚಾಗಬೇಕೆಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರು ನಮ್ಮ ಶಾಲೆಗೆ ಆಗಮಿಸಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರಿಸರಸ್ನೇಹಿ ಬ್ಯಾಡ್ಜ್ ಹಾಗೂ ನೋಟ್ ಬುಕ್ ಗಳನ್ನು ವಿತರಿಸಿದ್ದು ತುಂಬಾ ಸಂತೋಷ. ಗ್ರಾಮೀಣ ಭಾಗದ ಶಾಲೆಗಳಿಗೂ ತಮ್ಮ ಸೇವಾ ಕಾರ್ಯ ವಿಸ್ತರಿಸಿದ್ದು ಸ್ವಾಗತಾರ್ಹ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.

ಶಾಲಾ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಸಂಸ್ಕಾರವನ್ನು ಹೆಚ್ಚಿಸಲು ಸ್ಕೌಟ್ ತರಬೇತಿ ಸಹಾಯಕ. ತರಬೇತಿ ಪಡೆದು ಶಾಲೆಯಲ್ಲಿ ಘಟಕವನ್ನು ನಡೆಸುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ವನಸಿರಿ ಫೌಂಡೇಶನ್ ತಾಲೂಕ ಅಧ್ಯಕ್ಷರಾದ ರಮೇಶ್ ಕುನ್ನಟಗಿ ಅವರು ಅಭಿಪ್ರಾಯಪಟ್ಟರು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೇವರಗುಡಿ ಗ್ರಾಮ ಪಂಚಾಯತನ ಅಧ್ಯಕ್ಷರಾದ ಬಸನಗೌಡ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಶಾಲೆಗೆ ಅಗತ್ಯವಾದ ಕಾರ್ಯಗಳನ್ನು ಗ್ರಾಮ ಪಂಚಾಯತ್ ವತಿಯಿಂದ ಮಾಡಿಕೊಡಲಾಗುವುದೆಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಸಮಾನತೆಯ ಭಾವನೆ ಬೆಳೆಸುವ ಕಾರ್ಯವನ್ನು ಸ್ಕೌಟ್ ಘಟಕ ಮಾಡುತ್ತಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲೆ ದೇವರ ಗುಡಿಯ ಮುಖ್ಯ ಗುರುಗಳಾದ ಜಗದೀಶ್ ನಂದಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮನೆಮನೆಗಳಲ್ಲಿ ಧ್ವಜಾರೋಹಣ ಮಾಡುವ ಕುರಿತಾಗಿ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಧ್ವಜದ ಕುರಿತಾಗಿ ಅದರ ಮಹತ್ವದ ಬಗ್ಗೆ ವಿವರ ನೀಡಲಾಯಿತು

ಸಮರಂಭದಲ್ಲಿ ಅತಿಥಿಗಳಾಗಿ ಗ್ರಾಮಪಂಚಾಯತ್ ಸದಸ್ಯ ಅಮರೇಶ, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಲಕ್ಷ್ಮಣ್, ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಯಮನಪ್ಪ, ರಂಜಾನ್ ಸಾಬ್, ಚೆನ್ನವೀರ ಗೌಡ ಹಾಗೂ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಎಸ್ ಸ್ಡಿ ಎಂ ಸಿ ಸದಸ್ಯರು ಪರಿಸರಸ್ನೇಹಿ ಬ್ಯಾಡ್ಜ್ ನೀಡಿದ ದಾನಿಗಳಿಗೆ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ವಿರುಪಾಕ್ಷಪ್ಪ ಫಕೀರಪೂರ ಅವರು ಸ್ವಾಗತಿಸಿದರು. ಕುಮಾರಿ ಮೋನಮ್ಮ ಪ್ರಾರ್ಥನೆ ಮಾಡಿದರು, ಕುಮಾರಿಭವಾನಿ ವಂದಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;