ಕೂಡ್ಲಿಗಿ ತಾಲೂಕಿನ ಎಕ್ಕೆಗುಂದಿ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಹಬ್ಬವನ್ನು ಸಾಮರಸ್ಯ ಮತ್ತು ಭಾವೈಕ್ಯದ
ಸಂಕೇತವಾಗಿದೆ. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ
ಸಮುದಾಯದವರು ಹೊನ್ನೂರ ಸ್ವಾಮಿಯ ಹಬ್ಬ ಆಚರಣೆ ಯನ್ನು ಸಂಭ್ರಮದಿಂದ
ವೇಷಗಳನ್ನು ಧರಿಸಿ ರಸ್ತೆಗಳಲ್ಲಿ ಓಡಾಡಿ ಕುಣಿದು
ಕುಪ್ಪಳಿಸಿ ಅವರಿವರು ಕೊಟ್ಟ ಹಣವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿದರು. ಹೊನ್ನೂರ ಸ್ವಾಮಿ ದೇವಸ್ಥಾನದ ಮುಂದೆ ಅಲೆಗುಣಿ ತೊಡುವ ಮೂಲಕ ಏಳು ದಿನದ ಸವಾರಿ, ಕತ್ತಲರಾತ್ರಿ ಹಾಗೂ ಮೊಹರಂ ಕೊನೆ ದಿನ ದೇವರನ್ನು ಹೊತ್ತು ಕೆಂಡಹಾಯುವ ಪರಿಪಾಠವಿದೆ ಅನೇಕ ಭಕ್ತರ ಹರಕೆಯನ್ನು ಮಾತನಾಡದೆ ಸನ್ನೆಯಲ್ಲೇ ಹರಕೆ ತೀರಿಸುವ ದೈವ ಎಂದು ತಿಳಿದ ಭಕ್ತರು ದೇವರ ಹರಕೆ ಹೊತ್ತು ಅನೇಕ ವೇಷ ಭೂಷಣ ಧರಿಸಿ ಹಲಗೆ ಸದ್ದಿನಲ್ಲಿ ಕುಣಿದು ಕುಪ್ಪಳಿಸುತ್ತಾರೆ ಇನ್ನು ಕೆಲವರು ಅಲೆಕುಣಿಯಲ್ಲಿ ಹಾಕಿದ ಬೆಂಕಿಗೆ ಉಪ್ಪು ಹುಳ್ಳಿ ಕಟ್ಟಿಗೆ ತುಂಡುಗಳನ್ನು ಹಾಕಿ ಹರಕೆ ಕಟ್ಟಿಕೊಳ್ಳುತ್ತಾರೆ ಈ ಹಬ್ಬ ಮುಸ್ಲಿಂ ಸಮುದಾಯದ ಹಬ್ಬವಾದರೂ ಅನ್ಯ ಧರ್ಮದವರೇ ಹೆಚ್ಚಾಗಿ ಆಚರಿಸಲಿದ್ದಾರೆ.
ವರದಿ ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
