ನಾಗರಹುಣಸೆ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ
ಗುಡೇಕೋಟೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ನಾಗರಹುಣಸೆ ಗ್ರಾಮದಲ್ಲಿ ಇಂದಿಗೂ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲಾ. ಆದರೆ,ಮೊಹರಂ ಹಬ್ಬವನ್ನು ಕಳೆದ 70-80 ವರ್ಷಗಳಿಂದಲೂ ಆಚರಿಸುತ್ತಾ ಬರಲಾಗಿದೆ. ಹಿಂದೂಗಳೇ ದೇಣಿಗೆ ಸಂಗ್ರಹಿಸಿ ‘ಫಕೀರ್ ಸ್ವಾಮಿ'(ಪೀರಲಾ ಹಬ್ಬ).ದರ್ಗಾ ನಿರ್ಮಿಸಲಾಗಿದ್ದು, ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮ ಎಲ್ಲಾ ಸಮುದಾಯದವರ ಪಾಲಿಗೆ ಧಾರ್ಮಿಕ ಸಾಮರಸ್ಯದ ಸಂಕೇತದಂತಿದೆ.
ಪ್ರತಿ ವರ್ಷ ಗ್ರಾಮಸ್ಥರು ಹೊಸ ಇಸ್ಲಾಮಿಕ್ ವರ್ಷವನ್ನು ಸೂಚಿಸುವ ಮೊಹರಂ ಅನ್ನು ಆಚರಿಸುತ್ತಾರೆ.ಮೆರವಣಿಗೆ ನಂತರ ‘ಪಂಜಾ’ವನ್ನು ತಯಾರಿಸಿ ದರ್ಗಾದಲ್ಲಿ ಇಡಲಾಯಿತು. ವಿಶೇಷ ಪ್ರಾರ್ಥನೆ, ಪೂಜೆಗಳು ನಡೆದವು. ದರ್ಗಾ ನಿರ್ಮಾಣವಾದಾಗಿನಿಂದಲೂ ಹಿಂದೂ ಆರ್ಚಕರೊಬ್ಬರು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಅಲ್ಲಾಹುನಲ್ಲಿ ಅತ್ಯಂತ ನಂಬಿಕೆ ಇದ್ದು, ಪ್ರತಿನಿತ್ಯ ದರ್ಗಾದಲ್ಲಿ ಪ್ರಾರ್ಥನೆ ಮಾಡುತ್ತೇವೆ,ಪ್ರತಿ ವರ್ಷ ಮೊಹರಂ ಆಚರಿಸುತ್ತೇವೆ. ಈ ವರ್ಷ ಕೋವಿಡ್-19 ತೊಲಗಿದೆ ಎಂದು ಬಾವಿಸಿದ್ದೇವೆ ಸಮಾಜಕ್ಕೆ ರೈತರಿಗೆ ಧನ ಕರುಗಳಿಗೆ ಒಳ್ಳೆ ಮಳೆ ಬೆಳೆ ಕೋಟ್ಟು ಕಾಪಾಡಿ ಒಳ್ಳೆಯದಾಗಲಿ
ಎಂದು ಅಲ್ಲಾಹುನಲ್ಲಿ(ಹೋನ್ನೂರ ಸ್ವಾಮಿ)ಯಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಆರ್ಚಕ ಕೆ.ಜಯಪ್ಪ ಹೇಳಿದರು.
ಸುಮಾರು 800 ನೂರಕ್ಕೂ ಹೆಚ್ಚು ಜನಸಂಖ್ಯೆಯಿರುವ ನಾಗರಹುಣಸೆ ಗ್ರಾಮದಲ್ಲಿ ಅನೇಕ ದಶಗಳಿಂದಲೂ ಮೊಹರಂ ಆಚರಿಸುತ್ತಾ ಬರಲಾಗಿದೆ. ದೂರದ ಊರುಗಳಿಂದ ಬರುವ ದೇವಾಲಯಕ್ಕೆ ಆಗಮಿಸುವ ಭಕ್ತರು ಕೂಡಾ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ದರ್ಗಾಕ್ಕೆ ಭೇಟಿ ನೀಡುವ ಯಾವುದೇ ಭಕ್ತರ ಆಶಯಗಳು ಈಡೇರುತ್ತವೆ ಎಂಬ ಬಲವಾದ ನಂಬಿಕೆ ಇದೆ ಎಂದು ಗ್ರಾಮಸ್ಥ ಕೊಟ್ರಪ್ಪನವರ ನಾಗರಾಜ್ ತಿಳಿಸಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
