ಪೆನ್ನಳ್ಳಿ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಬಸವೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹಾರಕಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆನ್ನಳ್ಳಿ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಬಸವೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ ನೆರವೇರಿತು
ಕಣ್ವಕುಪ್ಪೆ ಗವಿಮಠದ ಡಾ. ಷ. ಬ್ರ.ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ
ಕಾಯಕ ನಿಷ್ಠೆ ಜೊತೆಗೆ ಸಹಬಾಳ್ವೆ ಯೊಂದಿಗೆ ಪ್ರತಿಯೊಬ್ಬರು ಜೀವನ ಸಾಗಿಸಬೇಕು. ಅಧ್ಯಾತ್ಮ ಸಂಸ್ಕೃತಿ-ಸಂಸ್ಕಾರ ವoತ ಸಮಾಜ ನಿರ್ಮಾಣವಾಗಬೇಕು. ಮನುಷ್ಯರು ಧರ್ಮದಲ್ಲಿ ಗೆ ನಡೆದರೆ ಧರ್ಮ ಎಂದಿಗೂ ಮನುಷ್ಯರನ್ನು ಕೈ ಬಿಡಲಾರದು ಎಂದರು ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಮನುಷ್ಯ ಸಮನಾಗಿ ಸ್ವೀಕರಿಸಬೇಕು.
ಎಂದು ತಿಳಿಸಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ. ಮಾತನಾಡಿದರು. ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ
. ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್ ಕೊಟ್ರೇಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಮಸಾಲಿ ಸಮುದಾಯದ ಅಧ್ಯಕ್ಷ ಹೆಚ್ ರೇವಣ್ಣ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೂಗಮ್ಮ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ ಶೇಖರಪ್ಪ. ವಾಣಿಜ್ಯ ತೆರಿಗೆ ಅಧಿಕಾರಿ ಶ್ವೇತ. ನಿವೃತ್ತ ಪ್ರಾಚಾರ್ಯರು ಮಹಾಲಿಂಗಪ್ಪ.ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ. ಪತ್ರಯ್ಯ ರಂಗನಾಥನ ಹಳ್ಳಿ . ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಹಾಗೂ ರಂಗನಾಥನ ಹಳ್ಳಿ ಹಾರಕಬಾವಿ. ಇಮಡಪುರ. ಬೆಳಕಟ್ಟೆ. ಹೊಸಹಳ್ಳಿ. ಎಂಬಿ, ಅಯ್ಯನಳ್ಳಿ ಬಸವೇಶ್ವರ ಸ್ವಾಮಿಯ ಭಕ್ತರು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
