;

ಕಾಟ್ರಹಳ್ಳಿ ಮನೆಗೆ ನುಗ್ಗಿದ ಮಳೆ ನೀರು…!!!

ಕಾಟ್ರಹಳ್ಳಿ ಮನೆಗೆ ನುಗ್ಗಿದ ನೀರು

ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೊಬಳಿ ಬೆಳ್ಳಿಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟ್ರಹಳ್ಳಿ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಮಂಗಳವಾರ ಹಾಗೂ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಕಾಟ್ರಹಳ್ಳಿ ಗ್ರಾಮದ ದಲಿತ ಕಾಲೋನಿ ನಿವಾಸಿ ಎ.ಕೆ.ಕೆಂಚಮ್ಮ ಎಂಬುವವರ ಮನೆಗೆ ಮಳೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋದವು. ರಾತ್ರಿಯಿಡೀ ಪಾತ್ರೆಗಳು ಮತ್ತು ಇನ್ನಿತರೆ ಸಾಮಾಗ್ರಿಗಳನ್ನು ನಿಂತ ನೀರಿನಲ್ಲೆ ಹೊರ ಹಾಕಬೇಕಾಯಿತು. ಇಷ್ಟೆಲ್ಲ ಹಾನಿಯಾದರೂ ಸಂಬಂಧ ಪಟ್ಟ ಬೆಳ್ಳಿಗಟ್ಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ನಿವಾಸಿಗಳ ದೂರು. ಈಗಲಾದರೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;