ಆಂಗ್ಲಭಾಷೆ ಬಳಕೆಯ ನಾಮಫಲಕ ತೆರವು.
ಸಿಂಧನೂರು : ಜು.23 ನಗರದ ಪ್ರಮುಖ ಬೀದಿ ಮತ್ತು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕನ್ನಡ ನಾಮಫಲಕ ಇಲ್ಲದ ಆಂಗ್ಲ ಭಾಷೆಯ ನಾಮಫಲಕವನ್ನು ನಗರಸಭೆಯಿಂದ ತೆರವು ಕಾರ್ಯಾಚರಣೆ ಮಾಡಲಾಯಿತು.
ನಗರದಲ್ಲಿ ಕನ್ನಡ ನಾಮಫಕ ಇಲ್ಲದೆ ಆಂಗ್ಲ ನಾಮಫಲಕ ಹಾಕಿದರೂ 60% ಕನ್ನಡ ಪದ ಬಳಕೆ ಇರಬೇಕು ಎನ್ನುವ ಸರ್ಕಾರದ ಆದೇಶವಿದ್ದರು ಮನ್ನಣೆ ನೀಡುತ್ತಿಲ್ಲ,ತಮ್ಮ ಲಾಭಕ್ಕಾಗಿ, ವ್ಯಾಪಾರಕ್ಕೋಸ್ಕರ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ. ಕನ್ನಡ ಭಾಷೆ ಇಲ್ಲದೆ ಆಂಗ್ಲ ಭಾಷೆ ನಾಮಫಲಕವನ್ನು ತೆರವು ಗೊಳಿಸುವಂತೆ ಕನ್ನಡ ಪರ ಸಂಘಟನೆಗಳು ನಗರ ಸಭೆಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತರಾದ ಮಂಜುನಾಥ್ ಗುಂಡೂರು ರವರ ಆದೇಶದ ಮೇರೆಗೆ ಸಿಬ್ಬಂದಿಗಳು ನಗರದ ಮಹಾತ್ಮಗಾಂಧಿ ವೃತದಲ್ಲಿ ವಿ ಎಸ್ ಎಸ್ ಬ್ರಿಲಿಯಂಟ್ ಕಾಲೇಜ್ ಫಲಿತಾಂಶದ ಬ್ಯಾನರ್, ಬೃಂದಾವನ ಹೋಟೆಲ್, ಪೂರ್ವಿಕ ಮೊಬೈಲ್ ಶಾಪ್, ಟೈಟಾನ್ ಸನ್ ಗ್ಲಾಸ್,ಬಸ್ ನಿಲ್ದಾಣದ ಮುಂಭಾಗದ ಎದರುಗಡೆ, ರಾಯಚೂರು ರಸ್ತೆ ಸೇರಿದಂತೆ ಹಲವು ಕಡೆ ಹಾಕಿದ ಇಂಗ್ಲಿಷ್ ನಾಮಫಲಕವನ್ನು ತೆರವು ಗೊಳಿಸಿ ನಗರಸಭೆ ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಹೋದರು. ಇನ್ನು ಮುಂದೆ ಕನ್ನಡಕ್ಕೆ ಹೆಚ್ಚು ಒತ್ತು ಕೊಡದೆ ಆಂಗ್ಲ ಪದ ಬಳಕೆಯ ನಾಮಫಲಕವನ್ನು ಹಾಕಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣೆ ಪಡೆ ಜಿಲ್ಲಾ ಅಧ್ಯಕ್ಷರಾದ ಮೌನೇಶ್ ದೊರೆ ಮತ್ತು ಕಸ್ತೂರಿ ಕರ್ನಾಟಕ ಜನರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಸುರೇಶ ಕಟ್ಟಿಮನಿ ಸೇರಿದಂತೆ ನಗರ ಸಭೆ ಸಿಬ್ಬಂದಿಗಳು ಇಂಗ್ಲಿಷ್ ನಾಮಫಲಕ ತೆರವು ಕಾರ್ಯದಲ್ಲಿ ತೊಡಗಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
