ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಿ ವಿದ್ಯಾರ್ಥಿಗಳಿಗೂ ಹಾಗೂ ಓಡಾಡುವ ಸಾರ್ವಜನಿಕರಿಗೂ ಅನುಕೂಲ ಮಾಡಿಕೊಡಬೇಕಾಗಿ ಚಿಕ್ಕಜೋಗಿಹಳ್ಳಿ ಗ್ರಾಮಸ್ಥರಿಂದ ಮನವಿ.
ಚಿಕ್ಕಜೋಗಿಹಳ್ಳಿ ಗ್ರಾಮದ ವಿದ್ಯಾರ್ಥಿ ನಿಲಯದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಳೆಗಾಲದಲ್ಲಿ ಮಳೆ ಬಂದ ಕೂಡಲೇ ರಸ್ತೆಯಲ್ಲಿ ಹರಿಯುವ ಮಳೆಯನೀರು ನಿಲಯದ ಮುಂಭಾಗದ ಪ್ರವೇಶದ್ವಾರದಲ್ಲಿ ನಿಲ್ಲುತ್ತದೆ ಈಗ ಮಳೆಗಾಲ ವಾಗಿದ್ದರಿಂದ ರಸ್ತೆಯಲ್ಲಿ ಹರಿಯುವ ಸಂಪೂರ್ಣ ನೀರು ಈ ಜಾಗದಲ್ಲಿ ನಿಂತು ಮುಂಭಾಗದಲ್ಲಿ ತಗ್ಗು ಗುಂಡಿಗಳು ಆಗಿದ್ದು ಕೆಸರುಗದ್ದೆ ಯಂತಾಗಿದೆ. ಈ ನೀರಿನಲ್ಲಿ ಕೆಲವು ಕ್ರಿಮಿಕೀಟಗಳು ಸೊಳ್ಳೆಗಳು ಉತ್ಪತ್ತಿಯಾಗಿದ್ದು ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಲೇರಿಯಾ ಟೈಫೈಡ್ ಅಂತ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಸುಮಾರು ವರ್ಷಗಳಿಂದ ಇಲ್ಲಿಯ ಪರಿಸ್ಥಿತಿ ಗೊತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ನೋಡಿದರೂ ನೋಡದ ಹಾಗೆ ಸುಮ್ಮನಾಗಿದ್ದಾರೆ. ಕಾರಣ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ವರದಿ ನೋಡಿದ ತಕ್ಷಣ ನಿಲಯದ ಮುಂಭಾಗದಲ್ಲಿ ಮಳೆಯ ನೀರು ನಿಲ್ಲದಂತೆ ಸಿಸಿ ರಸ್ತೆ ಅಥವಾ ಡಾಂಬರೀಕರಣ ಮಾಡಿ, ಶಾಲಾ ಮಕ್ಕಳು ಓಡಾಡುವುದಕ್ಕೂ, ಆರೋಗ್ಯದಿಂದ ಹಾಸ್ಟೆಲಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಆರೋಗ್ಯ ದೃಷ್ಟಿಯಿಂದ ಇಲ್ಲಿ ಆಗುವ ತೊಂದರೆಗಳನ್ನು ಸರಿಪಡಿಸಿ ಕಾಮಗಾರಿಯನ್ನು ದುರಸ್ತಿಗೊಳಿಸಿ ಬೇಕಾಗಿ ಮನವಿ ಮಾಡಿರುತ್ತಾರೆ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
