;

ವಸತಿ ಸಚಿವ ಸೋಮಣ್ಣನವರ ಗೂಂಡಾಗಳಿಂದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, ಪೊಲೀಸರ ಕುಮ್ಮಕ್ಕು…!!!

ವಸತಿ ಸಚಿವ ಸೋಮಣ್ಣನವರ ಗೂಂಡಾಗಳಿಂದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, ಪೊಲೀಸರ ಕುಮ್ಮಕ್ಕು

ಬೆಂಗಳೂರು : ಜುಲೈ 14. ನಗರದ ವಿಜಯನಗರ ಟೋಲ್‍ಗೇಟ್ ಬಳಿ ವಸತಿ ಸಚಿವರಾದ ಸೋಮಣ್ಣನವರ ಬೃಹತ್ ಕಟೌಟ್ ಮತ್ತು ಫ್ಲೆಕ್ಸ್ ಗಳನ್ನು ಅಕ್ರಮವಾಗಿ ಕಾನೂನು ಉಲ್ಲಂಘಿಸಿ ನಿಲ್ಲಿಸುತ್ತಿರುವುದನ್ನು ಪ್ರಶ್ನಿಸಿದಕ್ಕೆ ಸೋಮಣ್ಣ ನವರ ಗೂಂಡಾ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲಿ ಕೆ.ಆರ್.ಎಸ್ ಪಕ್ಷದ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಕೆ.ಆರ್.ಎಸ್ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಎಲ್.ಜೀವನ್ ಅವರನ್ನು ಎಳೆದಾಡಿ, ಗುಂಪು ಕಟ್ಟಿಕೊಂಡು ಪೊಲೀಸರ ಮುಂದೆಯೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದು ರಾಜ್ಯದಲ್ಲಿನ ಗೂಂಡಾ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯ ದುಸ್ಥಿತಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಅಧಿಕಾರಿಗಳು ಮತ್ತು ಪೊಲೀಸರನ್ನು ಜನರ ಸುಲಿಗೆಗೆ ಬಿಟ್ಟು ಆಡಳಿತ ಪಕ್ಷವಾದ ಬಿಜೆಪಿಯ ರಾಜಕಾರಣಿಗಳು ಕೇವಲ ಜನರ ಹಣ ಕೊಳ್ಳೆ ಹೊಡೆಯುವುದು ಮತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ, ಜನರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇದ್ದು, ಕಂಗಾಲಾಗಿದ್ದಾರೆ.

ಈ ಅವ್ಯವಸ್ಥೆ, ಅಕ್ರಮ, ಭ್ರಷ್ಟಾಚಾರ ಮತ್ತು ಅನಾಚಾರಗಳನ್ನು, ಪೊಲೀಸರ ದರ್ಪ, ದೌರ್ಜನ್ಯಗಳನ್ನು ರಾಜ್ಯದೆಲ್ಲೆಡೆ ಕೆ.ಆರ್.ಎಸ್ ಪಕ್ಷದ ಸೈನಿಕರು ಧೈರ್ಯವಾಗಿ ಪ್ರಶ್ನಿಸುತ್ತಿದ್ದಾರೆ ಮತ್ತು ಎದರಿಸುತ್ತಿದ್ದಾರೆ. ರೌಡಿಗಳ, ಪುಂಡ ಮತ್ತು ಭ್ರಷ್ಟ ರಾಜಕಾರಣಿಗಳ ಹಾಗೂ ಪೊಲೀಸರ ಇಂತಹ ಕೃತ್ಯಗಳಿಗೆ ಕೆ.ಆರ್.ಎಸ್ ಪಕ್ಷದ ಸೈನಿಕರು ಹೆದರುವುದಿಲ್ಲ.

ತಕ್ಷಣವೇ ಮಾಗಡಿ ರಸ್ತೆ ಪೊಲೀಸರು, ತಮ್ಮ ಸಮ್ಮುಖದಲ್ಲಿ ಹಲ್ಲೆ ನಡೆಸಿದ ಬಿಜೆಪಿಯ ರೌಡಿಗಳನ್ನು ಬಂಧಿಸಬೇಕು ಎಂದು ಕೆ ಆರ್ ಎಸ್ ಪಕ್ಷ ತಾಲೂಕು ಸಮಿತಿ ಒತ್ತಾಯಿಸುತ್ತದೆ ಎಂದು ತಾಲೂಕು ಅಧ್ಯಕ್ಷ ನಿರುಪಾದಿ ಕೆ. ಪತ್ರಿಕೆ ಹೇಳಿಕೆ ನೀಡಿದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;