ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ನಿಂಬಳಗೆರೆ ಸರ್ಕಾರಿ ಪ್ರೌಢ ಶಾಲೆಯ 2020-21 ನೇ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು. ವಿಜಯನಗರ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ಯು.ಎಂ ಸಿದ್ಧಾರ್ಥ ಮತ್ತು ಎಂ.ಜಿ ಅಂಕಿತಾ ಹಾಗೂ ಕೂಡ್ಲಿಗಿ ತಾಲ್ಲೂಕಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಟಿ ರಂಜಿತಾ ಮತ್ತು ಎಸ್.ಎಂ ಪ್ರಿಯಾಂಕಾ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ್ ನಾಯ್ಕ್ ರವರು ಲ್ಯಾಪ್ ಟಾಪ್ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಜಿ ಪಕ್ಕಿರಪ್ಪ, ನಾಗರಾಜ್, ವಿದ್ಯಾರಣ್ಯ, ವೀರಭದ್ರಪ್ಪ, ಹಾಲಪ್ಪ, ಮಂಗಳಗೌರಮ್ಮ, ಶರ್ಮತ್ ಕಣದಮನಿ, ಬಣಕಾರ್ ಪತ್ರೇಶ, ಅಂಜಿನಮ್ಮ, ಶಿವಪುತ್ರ, ಗೌಡ್ರು ಸಿದ್ದೇಶ್, ಪಾಟೀಲ್ ಮಲ್ಲಪ್ಪ, ಸರ್ಪಭೂಷಣ ಮತ್ತು ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು….

ವರದಿ. ಧನಂಜಯ್. ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
