3.5 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ.
ಸಿಂಧನೂರು :ಜು.12.ತಾಲೂಕಿನ ಕುರುಕುಂದಾ ಗ್ರಾಮದಿಂದ ಕೋಳಬಾಳ ದವರೆಗೆ 3.5 ಕೋಟಿ ರೂ.ವೆಚ್ಚದಲ್ಲಿ 3.5 ಕಿ.ಮೀ. ರಸ್ತೆಗೆ ಡಾಂಬರೀಕರಣ 3.60.ಮೆಟಲಿಂಗ್ ಕಾಮಗಾರಿಗೆ ಮಸ್ಕಿಯ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು 2021 – 22 ನೇ ಸಾಲಿನ ಪಿಡಬ್ಲ್ಯೂಡಿ ಹಾಗೂ ನೀರಾವರಿ ಇಲಾಖೆಯಿಂದ ಅನುದಾನ ಮಂಜುರಾಗಿದ್ದು ,ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಎರಡು ಗ್ರಾಮಗಳ ಮದ್ಯ ಇರುವ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿದ್ದು ರೈತರಿಗೆ ಅನುಕೂಲವಾಗುವ ರಸ್ತೆ ಇದಾಗಿದ್ದು,ಈ ಕಾಮಗಾರಿ ಶಿವುಕುಮಾರ ಎನ್. ಗುತ್ತೆದಾರರಿಗೆ ಟೆಂಡರ್ ಆಗಿದ್ದು ಅಧಿಕಾರಿಗಳು ಹಾಗೂ ಗುತ್ತೆದಾರರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು,ಕಾಲಮಿತಿಯೊಳಗೆ ಸಂಪೂರ್ಣವಾಗಿ ಕಾಮಗಾರಿ ಮುಗಿಸಿ ರೈತಾಪಿ ವರ್ಗ,ಕೃಷಿ ಕಾರ್ಮಿಕರಿಗೆ ರಸ್ತೆಯ ಅನುಕೂಲ ಮಾಡಿ ಕೊಡಬೇಕು. ರಸ್ತೆಯ ಎರಡೂ ಬದಿಗಳಲ್ಲಿ ರೈತರ ಜಮೀನುಗಳು ಇರುವುದರಿಂದ ರೈತರು ಕೂಡಾ ಗುತ್ತೆದಾರರಿಗೆ ಮತ್ತು ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.
ಮೂಲಭೂತ ಸೌಲಭ್ಯಗಳಿಂದ ವಂಚಿತವಾದ
ಕುರುಕುಂದಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಶಿವರಾಮನಗರ ಕ್ಯಾಂಪಿನಲ್ಲಿ ಸಿಸಿ ರಸ್ತೆ,ಚರಂಡಿ, ಕಾಲುವೆ ಹೂಳು ತೆಗೆಯುವುದು, ಕಾಲುವೆ ಸ್ವಚ್ಛಗೊಳಿಸದಿದ್ದರೆ ರೈತರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೆರೆ ಒಂದೇ ಇರುವುದರಿಂದ ಕೆರೆಯು ಕಸದಿಂದ ಮುಚ್ಚಿದ್ದು ಇದುವರೆಗೂ ಸ್ವಚ್ಛಗೊಳಿಸುವ ಕಾರ್ಯ ಇದುವರೆಗೆ ಮಾಡಿಲ್ಲಾ ದನಕರಗಳು ಹಾಗೂ ವಾಸಿಸುವ ನಿವಾಸಿಗಳಿಗೆ ಬಳಕೆಗೆ ನೀರಿನ ಅನುಕೂಲ ಮಾಡಿಕೊಡಬೇಕು, ಇನ್ನಿತರ ಸೌಲಭ್ಯಗಳ ವಂಚಿತ ಕ್ಯಾಂಪ್ ಆಗಿದೆ ಎಂದು ಗ್ರಾಮಸ್ಥರು ತಮ್ಮ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ಪತ್ರದ ಮೂಲಕ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಡೆಯಪ್ಪ ಚಿರತ್ನಾಳ, ಶಿವಪ್ಪ, ಬುಜ್ಜಪ್ಪ ರಡ್ಡಿ,ಅಮರೇಗೌಡ ತಿಡಿಗೋಳ, ಪಂಪಣ್ಣ ಹಲಗಿ ವೆಂಕನಗೌಡ ಕೋಳಬಾಳ, ಶರಣಪ್ಪ ಉಪ್ಪಲದೊಡ್ಡಿ,ರುದ್ರಗೌಡ , ವೀರಭದ್ರಗೌಡ,ಅಮರೇಶ ಹೊಸಮನಿ,ಬಿ.ಸೋಮಶೇಖರಗೌಡ, ಶೇಖರಯ್ಯಸ್ವಾಮಿ, ಭೀಮಣ್ಣ ,ನಾಗಪ್ಪ, ಪಂಪಣ್ಣ ಹಲಗಿ,ಟಿ.ಕೃಷ್ಣ ರೆಡ್ಡಿ , ಬಿ.ಹೆಚ್. ಚಿರತನಾಳ,ಡಿ.ಕೆ.ಸಿ,ಗಂಗಪ್ಪ, ಶಿವಪ್ಪ ,ಮುರಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
