;

ಶಾಸಕರಿಂದ ಕೃಷಿ ರೈತ ರಥಕ್ಕೆ ಚಾಲನೆ…!!!

ಶಾಸಕರಿಂದ ಕೃಷಿ ರೈತ ರಥಕ್ಕೆ ಚಾಲನೆ.

ಸಿಂಧನೂರು : ಜುಲೈ 13. ಹೊಸಳ್ಳಿ ಕ್ಯಾಂಪ್ ನಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‌ ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರು ಹಸಿರು ಬಾವುಟ ತೋರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸರ್ಕಾರವು ರೈತಾಪಿ ಜನರ ಹಿತದೃಷ್ಟಿಯಿಂದ ಹಲವಾರು ಯೋಜನೆ ಅನುಷ್ಠಾನಗೊಳಿಸಿದ್ದು ಅದರಲ್ಲಿ ಬೆಳೆ ಸಮೀಕ್ಷೆಯು ಅತ್ಯಂತ ಮಹತ್ವವಾಗಿದ್ದು. ಈಗ ರೈತಾಪಿ ಜನರೇ ತಮ್ಮ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ರೀತಿಯಲ್ಲಿ ಸರ್ಕಾರವು ಹೊಸ ಆ್ಯಪ್ ಅನುಷ್ಟಾನಗೊಳಿಸಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಧಿಕಾರಿಗಳು ಕೂಡ ರೈತರಿಗೆ ಸಲಹೆ ಸೂಚನೆ ನೀಡುವುದರ ಮೂಲಕ ಈ ಬೆಳೆ ಸಮೀಕ್ಷೆ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿಧ್ಯಝ್ಕೌ ಕಾರ್ಯೋನ್ಮುಖರಾಗಬೇಕು. ಒಂದು ವೇಳೆ ರೈತಾಪಿ ಜನರಿಗೆ ಸರಿಯಾದ ಮಾಹಿತಿ ನೀಡದಿದ್ದರೆ ಸೂಕ್ತ ಕನ‌‌‌‌ ಕ್ರಮ ಜರುಗಿಸಲಾಗುವುದು ಎಂದು ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅರುಣ್ ಹೆಚ್. ದೇಸಾಯಿ, ಕೃಷಿ ಅಧಿಕಾರಿ ಪ್ರಿಯಾಂಕ, ಹೊಸಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸಮಾಜ ಸೇವಕ ಅಶೋಕ ನಲ್ಲಾ, ಗ್ರಾಮಸ್ಥರು, ಅಧಿಕಾರಿಗಳು ಭಾಗವಹಿಸಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;