;

ಜುಲೈ 13 ನಿಜ ಶರಣ ಹಡಪದ ಅಪ್ಪಣ್ಣ ಜಯಂತಿ, ವೃತ್ತದಲ್ಲಿ ಫಲಕ ಉದ್ಘಾಟನೆ…!!!

ಜುಲೈ 13 ನಿಜ ಶರಣ ಹಡಪದ ಅಪ್ಪಣ್ಣ ಜಯಂತಿ,
ವೃತ್ತದಲ್ಲಿ ಫಲಕ ಉದ್ಘಾಟನೆ.

ಸಿಂಧನೂರು :12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ ಯಾಗಿ ಅನುಭವ ಮಂಟಪದ ಆಧಾರ ಸ್ತಂಭವಾಗಿ ಸಮಸಮಾಜ ಕಟ್ಟಲು ಮತ್ತು ಕ್ರೂರ ಜಾತಿ ವ್ಯವಸ್ಥೆ,ಶೋಷಣೆ,ಮೂಡನಂಬಿಕೆಗಳ ವಿರುದ್ಧ ಹೋರಾಡಿದ ನಿಜಶರಣ ಹಡಪದ ಅಪ್ಪಣ್ಣನವರ 888ನೇ ಜಯಂತೋತ್ಸವವನ್ನು ಆಚರಿಸಲಾಗುವುದು ಎಂದು ಅಮರೇಶ ಕಾನಿಹಾಳ ಮಾತನಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜುಲೈ13 ರಂದು ಎಲ್ಲಾ ಸರಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಸರಕಾರ ಆದೇಶಿಸಿದೆ.ಅಂದು ತಾಲೂಕು ಹಡಪದ ಸಮಾಜದಿಂದ ಬೆಳಿಗ್ಗೆ 9.00 ಗಂಟೆಗೆ ಕೋರ್ಟ ಹಿಂಭಾಗದ ಚೌರಸ್ತೆ ಬಳಿ ಹಡಪದ ಅಪ್ಪಣ್ಣ ಜಯಂತಿಯಂದು ವೃತ್ತ ನಾಮಫಲಕ ಉದ್ಘಾಟನೆ ಮತ್ತು ಶರಣರ ಭಾವಚಿತ್ರ ಭವ್ಯ ಮೆರವಣಿಗೆ ಹಡಪದ ಅಪ್ಪಣ್ಣ ವೃತ್ತದಿಂದ ಬಸವ ಪ್ರಸಾದ ನಿಲಯದವರೆಗೆ ಸಕಲ ವಾಧ್ಯ ವೈಭವಗಳೊಂದಿಗೆ ನಡೆಯಲಿದೆ. ಈ ಒಂದು ಮೆರವಣಿಗೆಯಲ್ಲಿ ಶರಣೆಯರು ವಚನಕಟ್ಟು ತಲೆಯ ಮೇಲೆ ಹೊತ್ತುಕೊಂಡು ಭಾಗವಹಿಸುವರು. ಹಾಲಿ ಮತ್ತು ಮಾಜಿ ಸಂಸದರು, ಶಾಸಕರು,ಮಾಜಿ ಶಾಸಕರು, ನಗರಸಭೆ ಅಧ್ಯಕ್ಷರು, ಸರ್ವ ಸದಸ್ಯರು, ನಾಮ ನಿರ್ದೇಶನ‌‌‌‌ ಸದಸ್ಯರು, ಬಸವ ಕೇಂದ್ರ ,ಬಸವಪರ ಸಂಘಟನೆಗಳು,ತಾಲೂಕಿನ ವಿವಿಧ ಸಮುದಾಯದ ಮುಖಂಡರು, ಭಾಗವಹಿಸಲಿದ್ದು , ಹಡಪದ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿರೇಶ ಬಳಗನೂರು, ಸುರೇಶ ಗೊಬ್ಬರಕಲ್, ರಾಘವೇಂದ್ರ, ರಮೇಶ್, ಬೀಮಣ್ಣ ಬೆಳಗುರ್ಕಿ, ನಾಗರಾಳ, ಶರಣಪ್ಪ ಗೋರೆಬಾಳ, ಅಮರೇಶ ಬಸಾಪೂರು ಇನ್ನಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;