ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಅಭಿನಂದನೆ ಕಾರ್ಯಕ್ರಮ.
ಸಿಂಧನೂರು : ಜುಲೈ. 7. ದಿವಂಗತ .ಕೆ.ನಾಗಪ್ಪ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ತಾಲೂಕಿನ ಗಾಂಧಿನಗರದ ಶಿವಾಲಯ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಅಭಿನಂದಿಸುವ ಕಾರ್ಯಕ್ರಮದ, ಜೊತೆಗೆ ಪ್ರತಿ ಗ್ರಾಮಗಳಲ್ಲಿ ವಿಶಿಷ್ಟ ಸೇವೆ,ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿಲಾಗುವುದು ಎಂದು ದಿ. ಕೆ ನಾಗಪ್ಪ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಬೀರಪ್ಪ ಶಂಭೋಜಿ ತಿಳಿಸಿದರು.
ನಗರದ ಕೆ. ಕರಿಯಪ್ಪ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿ ಮಾತನಾಡಿದ ಅವರು ಸದಾ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ದಲಿತರ ಪರ ಕಳಕಳಿ ಹೊಂದಿದವರು, ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದ, ತಮ್ಮ ಸಾಮಾಜಿಕ ಜೀವನದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಜನರಿಗೆ ಬೆಂಬಲವಾಗಿ ನಿಂತು ಪುರಸಭೆಯ ಅಧ್ಯಕ್ಷರಾಗಿ ಜನಪರ ಸೇವೆ ಸಲ್ಲಿಸಿದ ಸುಕಾಲಪೇಟೆಯ ದಿ.ಕೆ. ನಾಗಪ್ಪನವರು 18 ನೆ ಜೂನ್ 2022 ಕ್ಕೆ 20 ವರ್ಷಗಳು ಸಂದಿದವು. ಆದರೂ ಅವರ ಆದರ್ಶ ಜೀವನ ಸೇವಾ ಮನೋಭಾವನೆಯನ್ನು ಮರೆಯಲಾಗದು. ಅವರ ಸ್ಮರಣಾರ್ಥವಾಗಿ ಕೆ.ಕರಿಯಪ್ಪನವರು ಹಾಗೂ ಕುಟುಂಬದ ವರ್ಗದವರು ಅವರ ಅಭಿಮಾನಿಗಳು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. 2015 -2016 ನೇ ಸಾಲಿನಿಂದ ದಿ.ಕೆ. ನಾಗಪ್ಪ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ.
ಮಹಿಳೆಯರ ಸ್ವಾವಲಂಬನೆ ಜೀವನಕ್ಕಾಗಿ ಉಚಿತ ಹೊಲಿಗೆ ಯಂತ್ರಗಳ ವಿತರಣೆ, 500 ಬಡ ರೈತರಿಗೆ ಉಚಿತವಾಗಿ ಗನ್ ಪಂಪಗಳ ವಿತರಣೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಜೀವನ ಕೌಶಲ್ಯ ಮಾಹಿತಿ ನೀಡಿದ್ದು, ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕೋರೋನಾ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ , ಅಲೆಮಾರಿ ಜನರಿಗಾಗಿ ಗ್ರಂಥಾಲಯಕ್ಕೆ ೫೦ ಸಾವಿರ ಮೌಲ್ಯ ಪುಸ್ತಕ ವಿತರಣೆ, ಕೆ.ಎ.ಎಸ್. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದಿಸಿ ಗೌರವಿಸಲಾಗಿದೆ, ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಟಾಪ ವಿದ್ಯಾರ್ಥಿಳಿಗೆ ಪ್ರೋತ್ಸಾಹ ಪ್ರೇರಣೆ ನೀಡಲು ಗೌರಿವಿಸಿ ಅಭಿನಂದಿಸಲಾಗಿದೆ. ಕಳೆದ ವರ್ಷ ಟಾಪರ ವಿದ್ಯಾರ್ಥಿಗಳ ಮನೆ ಮನೆ ತೆರಳಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು ಹಿಗೇ ಹಲವು ಜನಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ .
ಈ ವರ್ಷವೂ ಕೂಡಾ ದಿನಾಂಕ 10 ಜುಲೈ 2022 ರಿಂದ ಬಸ್ಸಾಪೂರು, ಜಾಲಿಹಾಳ, ಗಾಂಧಿನಗರದ ಸಾಧಕರಿಗೆ ಸನ್ಮಾನಿಸಿ ನಂತರ ನಿರಂತರ 10 ದಿನಗಳ ವರೆಗೆ ತಾಲೂಕಿನ ಎಲ್ಲಾ ಗ್ರಾಮ, ಕ್ಯಾಂಪು ಹಾಗೂ 31 ವಾರ್ಡ್ ಗಳಲ್ಲಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಅಭಿನಂದಿಸುವ ಕಾರ್ಯಕ್ರಮದ, ಜೊತೆಗೆ ಪ್ರತಿ ಗ್ರಾಮಗಳಲ್ಲಿ ವಿಶಿಷ್ಟ ಸೇವೆ,ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಗೌರವಿಸುವ ದೇಶದಲ್ಲಿಯೇ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಮಾತನಾಡಿದ ಅಮರೇಶಪ್ಪ ಮೈಲಾರ, ಈ ಒಂದು ವಿನೂತನ ಕಾರ್ಯಕ್ರಮಕ್ಕೆ ಕನಕಗಿರಿ ಕ್ಷೇತ್ರದ ಮಾಜಿ ಸಚಿವ ಹಾಗೂ ಶಾಸಕ ಶಿವರಾಜ ತಂಗಡಗಿ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಎಚ್ ಆಂಜನೇಯ, ಜಿಲ್ಲೆಯ ಪ್ರಮುಖ ಮುಖಂಡರಾದ ಬಿ.ವಿ.ನಾಯಕ, ಬೋಸರಾಜ, ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನೇರವೆರಿಸಲಾಗುವುದು. ಉತ್ತಮ ಸೇವೆ ಸಲ್ಲಿಸಿದ ಕನಿಷ್ಟ 450 ರಿಂದ 500 ಜನರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಸುಮಾರು 15 ಸಾವಿರ ಜನ ಸೇರುವ ಸಾಧ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ ಕರಿಯಪ್ಪ, ಬಸವರಾಜ, ಹಸೇನಪ್ಪ ಸೋಲಂಗಿ, ಶ್ರೀನಿವಾಸ್ ವೈ, ರಾಜು ಅಡವಿಭಾವಿ, ಮಲ್ಲಮ್ಮ ಉಟಕನೂರು, ಭಾಗಿಯಾಗಿದ್ದರು..
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
