;

ಸರ್ಕಾರಿ ಸೇವೆ ತೃಪ್ತಿ, ಸಮಾಜ ಸೇವೆಗೆ ಮನಸ್ಸು ತುಡಿತ-ಯಜಮಾನಪ್ಪ…!!!

ಸರ್ಕಾರಿ ಸೇವೆ ತೃಪ್ತಿ, ಸಮಾಜ ಸೇವೆಗೆ ಮನಸ್ಸು ತುಡಿತ-ಯಜಮಾನಪ್ಪ

ಗುಡೇಕೋಟೆ :-ಸರ್ಕಾರಿ ಸೇವೆ ನನಗೆ ಸಂತೃಪ್ತಿ ನೀಡಿದ್ದರೂ, ಸಮಾಜ ಸೇವೆಗೆ ಮನಸ್ಸು ತುಡಿಯುತ್ತಿದೆ ಎಂದು ಗುಡೇಕೋಟೆ ಕಂದಾಯ ಇಲಾಖೆಯ ನಿವೃತ್ತ ನಿರೀಕ್ಷಕರಾದ ಯಜಮಾನಪ್ಪ ನವರು ಹೇಳಿದರು.

ಅವರು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಮೊದಲಿಗೆ ರೇಷ್ಮೆ ಇಲಾಖೆಯಿಂದ ಹಿಡಿದು ಕಂದಾಯ ಇಲಾಖೆಯ ವರೆಗೆ ಹಂತ ಹಂತವಾಗಿ ಸುದಿರ್ಘ 42 ವರ್ಷಗಳ ವಯೋನಿವೃತ್ತಿ ಪಡೆದ ಕಾರಣ ತಾಲೂಕು ಆಡಳಿತ ಹಾಗೂ ಗುಡೇಕೋಟೆ ನಾಡ ಕಛೇರಿ ಆಶ್ರಯದಲ್ಲಿ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಹೃದಯಸ್ಪರ್ಶಿ ಬೀಳ್ಕೊಡುಗೆ ಪಡೆದು, ಅವರು ಮಾತನಾಡಿದರು.


ಸಾರ್ವಜನಿಕರ ಹಾಗೂ ಬಡಜನರ ಸೇವೆಗೆ ಸರ್ಕಾರಿ ನೌಕರಿ ಒಂದು ಬಹುದೊಡ್ಡ ಅವಕಾಶವಾಗಿದ್ದು, 1990 ರಲ್ಲಿ ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕಂದಾಯ ಇಲಾಖೆಯಲ್ಲಿ ಉಪತಹಸಿಲ್ದಾರ್,ಲೇಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಅಧಿಕಾರಿಯಂತಹ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಸಂತೃಪ್ತಿ ನನಗಿದೆ. ಸೇವೆಯಲ್ಲಿ ಪ್ರಾಮಾಣಿಕತೆ ಇದ್ದಲ್ಲಿ, ದಕ್ಷತೆ ತಾನೇ ತಾನಾಗಿಯೇ ಬರುತ್ತದೆ. ಮಾನಸಿಕ ನೆಮ್ಮದ್ದಿ ಇದ್ದಲ್ಲಿ ಸುಗಮ ಆಡಳಿತ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ನೌಕರರು ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಪಣ ತೊಡಬೇಕು. ಇದರ ಜೊತೆಗೆ ಮಾನವೀಯತೆಗೂ ಮೊದಲ ಆದ್ಯತೆ ನೀಡಬೇಕು. ಸೇವೆಯಲ್ಲಿ ತೃಪ್ತಿ ಇದ್ದರೂ, ಸಮಾಜ ಸೇವೆಗಾಗಿ ನನ್ನ ಮನಸ್ಸು ತುಡಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಯಾವುದೇ ತೊಂದರೆ ಇಲ್ಲದೆ ನಿವೃತ್ತರಾಗುವುದೇ ಒಂದು ದೊಡ್ಡ ಸಾಧನೆ ಎನ್ನುವಂತಾಗಿದೆ ಎಂದು ನಿವೃತ್ತ ಕಂದಾಯ ನಿರೀಕ್ಷಕ ಅಧಿಕಾರಿಯಂತಹ ಯಜಮಾನಪ್ಪ ಅವರು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೂಡ್ಲಿಗಿ ತಾಲೂಕು ದಂಡಾಧಿಕಾರಿ ಮತ್ತು ತಹಶೀಲ್ದಾರ್ ಟಿ.ಜಗದೀಶ್.ಅವರು ಮಾತನಾಡಿ, ಯಜಮಾನಪ್ಪ ನವರು ಹಿರಿಯರು ಇಲಾಖೆಯ ಅನುಭವಿಗಳು ಸರ್ಕಾರಿ ಸೇವೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದರೂ, ಸರಳತೆ ಹಾಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದರು. ಮಾತಿಗಿಂತ ಕೃತಿ ಲೇಸು ಎನ್ನುವ ಸಿದ್ದಾಂತದ ಮೇಲೆ ನಂಬಿಕೆ ಇಟ್ಟವರು.ಕಳೆದ ತಿಂಗಳು 18-062022ರಂದು ಅಪ್ಪೇನಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಅಭೂತಪೂರ್ವ ಯಶಸ್ವಿಯಲ್ಲಿ ಯಜಮಾನಪ್ಪ ಅವರ ಶ್ರಮ ಅತ್ಯಂತ ಮಹತ್ವದ್ದಾಗಿದೆ. ಗುಡೇಕೋಟೆ ಹೊಬಳಿ ವ್ಯಾಪ್ತಿಯ ಹಾಗೂ ಕಾನಹೋಸಳ್ಳಿ ಹೊಬಳಿ ವ್ಯಾಪ್ತಿಯ ಕೆಂಚಮಲ್ಲನಹಳ್ಳಿ.ಆಲೂರು.ಸ್ಥೇರಿದಂತೆ ಚಿರತಗುಂಡು.ಬೆಳ್ಳಿಗಟ್ಟೆ.ಗ್ರಾಮ ಲೇಕ್ಕಾಧಿಕಾರಿಯಾಗಿ ಮೊದಲಿಗೆ ಸೇವೆ ಸಲ್ಲಿಸಿ.ಗೋ ಶಾಲೆಯನ್ನು ಯಶಸ್ವಿಯಾಗಿ ಭೇಷ್ ಎಂಬ ಹೆಗ್ಗಳಿಕೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರ ವಿಶ್ರಾಂತ ಜೀವನ ಸುಖಕರವಾಗಿರಲಿ, ಅವರ ಮಹತ್ವಾಕಾಂಕ್ಷೆ ಈಡೇರಲಿ ಎಂದು ಶುಭ ಹಾರೈಸಿದರು


ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ 180 ರೂ ವೇತನ ಪಡೆದು 10ವರ್ಷಗಳು ತಮ್ಮ ಸೇವೆ ಪ್ರಾರಂಭಿಸಿದ ಯಜಮಾನಪ್ಪ ಅವರು1990 ರಲ್ಲಿ ರೇಷ್ಮೆ ಪ್ರವರ್ತಕರಾಗಿ ಸಂಡೂರು ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದ ನಂತರ ಖಾಯಂ ಸರ್ಕಾರಿ ನೌಕರನಾಗಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಗುಡೇಕೋಟೆ ಹೊಬಳಿ ಬೆಳ್ಳಿಗಟ್ಟೆ ಗ್ರಾಮಕ್ಕೆ ನೇಮಕವಾಗಿ ಆಯ್ಕೆಗೊಂಡು, ಉಪತಹಸಿಲ್ದಾರ್, ಲೇಕ್ಕಧಿಕಾರಿ, ಕಂದಾಯ ನಿರೀಕ್ಷಕ ಮುಂತಾದ ಹುದ್ದೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದನ್ನು ಇದೇ ಸಮಾರಂಭದಲ್ಲಿ ವಿವಿಧ ಅಧಿಕಾರಿಗಳು ಸ್ಮರಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಯಜಮಾನಪ್ಪ ಅವರ ಸೇವೆಯ ಬಗ್ಗೆ ಮಾತನಾಡಿದರು.ತಾಲೂಕು ಆಡಳಿತದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಭಾರ ಹೃದಯದಿಂದ ಬೀಳ್ಕೊಡಲಾಯಿತು.ಈ ವೇಳೆಯಲ್ಲಿ ಕೂಡ್ಲಿಗಿ ತಾಲೂಕಿನ ತಹಶೀಲ್ದಾರ್ ಆಧಿಯಾಗಿ ಉಪ ತಹಶೀಲ್ದಾರ್.ಹಾಗೂ ತಾಲೂಕಿನ ಎಲ್ಲಾ ಗ್ರಾಮ ಲೇಕ್ಕಾಧೀಕಾರಿಗಳು.ಗ್ರಾಮ ಸಹಾಯಕರು.ತಾಲೂಕು ಕಛೇರಿಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ತಾಂತ್ರಿಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;