;

ತಾಲ್ಲೂಕಿನ ಇಬ್ಬರು ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ…!!!

ತಾಲ್ಲೂಕಿನ ಇಬ್ಬರು ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ…..

ಹರಪನಹಳ್ಳಿ :ಜೂನ್ 27 ಕರ್ನಾಟಕ ಸಂಸ್ಕೃತಿಕ ಪರಿಷತ್ ಸೃಷ್ಟಿ ಶಕ್ತಿ ಸಂಸ್ಥೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಹರಪನಹಳ್ಳಿ ತಾಲೂಕಿನ ಇಬ್ಬರು ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಿದ್ದಾರೆ.

ತಾಲೂಕಿನ ಬಾಗಳಿ ಗ್ರಾಮದ ಕಿಲು ಮೂಳೆ, ನಾಟಿ ವೈದ್ಯಕೀಯ ನೂತನ ವಿಜಯನಗರ ಜಿಲ್ಲೆಯಲ್ಲಿ ಓರ್ವ ನಾಟಿ ವೈದ್ಯರು ನಡೆದಾಡೋ ಆಸ್ಪತ್ರೆ ಅಂತಲೇ ಜನಜನಿತರಾಗಿದ್ದಾರೆ. ಎಂತಹ ಶಸ್ತ್ರ ಚಿಕಿತ್ಸೆಗೂ ಗುಣಮುಖವಾಗದ ನೋವು ಈ ನಾಟಿ ವೈದ್ಯನಿಂದ ಪರಿಹಾರವಾಗುತ್ತೆ. ಹೌದು, ಹೀಗೆ, ಮಸಾಜ್ ಮಾಡಿ, ಕೈ ಕಾಲಿಗೆ ಪಟ್ಟಿ ಹಾಕೋ ಇವರು ಬಿ.ಬಿ.ಹೊಸೂರಪ್ಪ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದವರು. ಮೂಳೆ- ಕೀಲು ನಾಟಿ ವೈದ್ಯರಾಗಿರೋ ಹೊಸೂರಪ್ಪ ಜನರ ನೋವು ಗುಣಪಡಿಸೋದ್ರಲ್ಲಿ ಎತ್ತಿದ ಕೈ. ಕೈ ಮೂಳೆ ಮುರಿತ, ಕಾಲು ಮುರಿತ, ಬೆನ್ನು ನೋವು, ಸೊಂಟ ನೋವು, ಕೀಲು ನೋವು ಅಂತ ಬಂದವರು ಎಲ್ಲರಿಗೂ ನೋವು ವಾಸಿ ಮಾಡಿದ್ದಾರೆ. ಮಸಾಜ್ ಮಾಡಿ ಪಟ್ಟಿ ಕಟ್ಟಿದ್ರೆ ಸಾಕು ಮೂರೇ ವಾರಗಳಲ್ಲಿ ಗುಣಮುಖವಾಗುತ್ತದೆ. ನಾಲ್ಕು ತಲೆಮಾರಿನಿಂದ ಹೊಸೂರಪ್ಪ ಕುಟುಂಬ ಈ ಕೆಲಸ ಮಾಡಿಕೊಂಡು ಬರುತ್ತಿದೆ. ಇವರ ನಾಟಿ ವೈದ್ಯಕೀಯ ಶಕ್ತಿ ಗಮನಿಸಿ ನಿತ್ಯ ನೂರಾರು ಜನ ಇವರ ಮನೆಗೆ ಬರ್ತಾರೆ. ಕೇವಲ ನೂರು ರೂಪಾಯಿ ಹಣ ಪಡೆದು ಅವರಿಗೆ ಒಳ್ಳೆಯ ಚಿಕಿತ್ಸೆ ನೀಡಿ ಅವರ ನೋವು ಗುಣಪಡಿಸುತ್ತಾರೆ. ಅಲ್ಲದೆ, ಗಿಡಮೂಲಿಕೆಗಳಿಂದ ಔಷಧ ತಯಾರಿಸಿ ನೀಡೊದ್ರಿಂದ ಇದುವರೆಗೂ ನೋವು ಕಡಿಮೆ ಆಗಿಲ್ಲ ಅಂತ ವಾಪಸ್ ಬಂದಿರೋ ಉದಾಹರಣೆನೇ ಇಲ್ಲ ಅಂತಾರೆ ಜನ. ಅಲ್ಲದೇ ಹೊಸೂರಪ್ಪ ಇದನ್ನ ದುಡ್ಡಿಗಾಗಿ ಮಾಡುತ್ತಿಲ್ಲ, ಬದಲಾಗಿ ಇದೊಂದು ಸಾಮಾಜಿಕ ಸೇವೆ ಅಂತ ಮಾಡುತ್ತಿದ್ದಾರೆ. ಇಷ್ಟೆ ಅಲ್ಲದೇ, ಹೊಸೂರಪ್ಪ ಬಾಗಳಿ ಗ್ರಾಮದ ಪ್ರಮುಖ ಕೂಡ ಹೀಗಾಗಿ, ಬಂದಿರೋ ಹಣದಲ್ಲಿ ಪ್ರತಿ ವರ್ಷ ಸಾಮೂಹಿಕ ಮದುವೆ, ದೇವಸ್ಥಾನ ಸೇರಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.

ನಂದಿಬೇವೂರು ಗ್ರಾಮದ ಜೋತಿಷ್ಯ ಹಾಗೂ ಪರಂಪರಿಕವಾಗಿ ಕಲಾ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಸಿ. ಎಂ. ಪಂಚಾಕ್ಷರಯ್ಯ ಅವರಿಗೆ ಪ್ರಶಸ್ತಿ. ಸ್ಪರಣಿಕೆ ನೀಡಿ ಸನ್ಮಾನಿಸಲಾಯಿತು….

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;