ಬೃಹತ್ ಬೇಡ ಜಂಗಮರ ಸಂವಿಧಾನಬದ್ಧ ಹಕ್ಕೊತ್ತಾಯಕ್ಕಾಗಿ
ಹಾಗೂ “ಸತ್ಯ ಪ್ರತಿಪಾದನಾ ಸತ್ಯಾಗ್ರಹ” ಹೋರಾಟ ಬೆಂಗಳೂರು ಚಲೋ ದಿನಾಂಕ 30-06-2022 ರ ಗುರುವಾರ ಬೆಳಿಗ್ಗೆ 9ಗಂಟೆಗೆ ಬೆಂಗಳೂರು ನಗರದಲ್ಲಿರುವ
ಫ್ರೀಡಂ ಪಾರ್ಕ್ ಬೆಂಗಳೂರು ನಲ್ಲಿ ರಾಜ್ಯದ ಎಲ್ಲ ಪೂಜ್ಯ ಹರ ಗುರು ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಹಾಗೂ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಬಿ ಡಿ ಹಿರೇಮಠ ಹಿರಿಯ ನ್ಯಾಯವಾದಿಗಳು ಹಾಗೂ ಹೋರಾಟಗಾರ ರವರ ಸಾರಥ್ಯದಲ್ಲಿ ಮತ್ತು ಸಮಾಜದ ಹಿರಿಯರ ನೇತೃತ್ವದಲ್ಲಿ ಬೃಹತ್ ಬೇಡಜಂಗಮ ಸಂವಿಧಾನಬದ್ಧ ಹಕ್ಕೊತ್ತಾಯಕ್ಕಾಗಿ ಹಾಗೂ “ಸತ್ಯ ಪ್ರತಿಪಾದನಾ ಸತ್ಯಾಗ್ರಹ”ವನ್ನು ಹಮ್ಮಿಕೊಳ್ಳಲಾಗಿದೆ . ಕಾರಣ ಹೈದರಾಬಾದ್ ಕರ್ನಾಟಕ ಪ್ರದೇಶದ (ಕಲ್ಯಾಣ ಕರ್ನಾಟಕ) ಎಲ್ಲಾ ಸಮಸ್ತ ಬೇಡಜಂಗಮ ಸಂಘಟನೆಗಳ ಸರ್ವ ಪದಾಧಿಕಾರಿಗಳು ಬೇಡಜಂಗಮ ಬಂಧು ಭಗಿನಿಯರು ಒಟ್ಟಿಗೆ ಸೇರಿ ಬೇಡ ಜಂಗಮ ಸಮಾಜದ ಬಲ ತೋರಿಸಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವ ದಿಸೆಯಲ್ಲಿ ಸಮಾಜದ ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ “ಸತ್ಯ ಪ್ರತಿಪಾದನಾ ಸತ್ಯಾಗ್ರಹ”ವನ್ನು ಯಶಸ್ವಿಗೊಳಿಸಬೇಕೆಂದು ಹೈದ್ರಾಬಾದ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ(ರಿ) ಪ್ರಾದೇಶಿಕ ಕಚೇರಿ ಕಲ್ಬುರ್ಗಿಯ ಅಧ್ಯಕ್ಷ ರಾದ ಅಮರೇಶ ರಾವುರ ಮಠ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಎಂ.ಬಿ. ಕಳ್ಳಿಮಠ ಮತ್ತು ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಕಲಬುರಗಿ ಜಿಲ್ಲೆಯ ಅಧ್ಯಕ್ಷರಾದ ಶಂಭುಲಿಂಗಯ್ಯ ಮಠಪತಿ ರವರು ಈ ಮನವಿ ಮೂಲಕ ವಿನಂತಿಸಿಕೊಳ್ಳಲಾಗಿದೆ …

ವರದಿ. ಬಸವರಾಜ್. ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
