ಅಮೃತ ಯೋಜನೆಯಡಿ 40 ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ1 ಲಕ್ಷದಂತೆ ಬೀಜಧನ ಚೆಕ್ ವಿತರಣೆ.
ಸಿಂಧನೂರು: ಜೂನ್ 22. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಿಂದ ಬದುಕಲು ಸರ್ಕಾರಗಳು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ 75 ನೇ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ರಾಯಚೂರು, ತಾಲೂಕಾ ಪಂಚಾಯತಿ , ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಇಂದಿರಾಗಾಂಧಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಒಕ್ಕೂಟ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಅಮೃತ ಯೋಜನೆಯಡಿ 40 ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ1 ಲಕ್ಷದಂತೆ ಬೀಜಧನ ಚೆಕ್ ವಿತರಿಸಿ ಮಾತನಾಡಿದರು.

ಪುರುಷರಿಗಿಂತ ಮಹಿಳೆಯರಿಗೆ ಕುಟುಂಬದ ಜವಾಬ್ದಾರಿ ಇರುತ್ತದೆ. 40 ಗುಂಪುಗಳನ್ನು ಆಯ್ದುಕೊಂಡು ಗುಂಪಿಗೆ 1 ಲಕ್ಷ ರೂಗಳ ಗಳಂತೆ ಹೈನುಗಾರಿಕೆ, ಆಹಾರ ಪದಾರ್ಥಗಳ ತಯಾರಿಕೆ, ಟೇಲರಿಂಗ್ ಗೆ ಸಹಾಯ ಮಾಡಲಾಗುತ್ತದೆ.ನಿಮ್ಮ ಕಾಲಿನ ಮೇಲೆ ನೀವು ನಿಲ್ಲಬೇಕು. ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಬದ್ಧವಾಗಿದೆ. ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಸೌಲಭ್ಯಗಳು ದೊರೆಯುತ್ತವೆ.ರಾಜ್ಯದಲ್ಲಿ 7500 ಸಂಘಗಳಿಗಾಗಿ 75 ಕೋಟಿ ಧನ ಸಹಾಯ ನೀಡಲು ಸರ್ಕಾರದ ಉದ್ದೇಶವಾಗಿದೆ ಎಂದರು.
ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಮುಂದುವರಿಯಲು 1 ಲಕ್ಷ ರೂಗಳ ಆರ್ಥಿಕ ಸಹಾಯ ಮಾಡಲಾಗುತ್ತದೆ. ಹಾಗೂ ಮೂರು ದಿನಗಳ ತರಬೇತಿ ನೀಡಲಾಗುವುದು ಸದುಪಯೋಗ ಮಾಡಿಕೊಳ್ಳಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧೀಪ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಶ್ರೀದೇವಿ ಶ್ರೀನಿವಾಸ,ಅಶೋಕ ಎಂ, ವಿಜಯಲಕ್ಷ್ಮಿ, ಧರ್ಮನಗೌಡ ಮಲ್ಕಾಪೂರು, ಲಿಂಗನಗೌಡ, ವಿರಭದ್ರಗೌಡ,ಗ್ರಾ.ಪಂ.ಅಧ್ಯಕ್ಷರು ಪೂರ್ಣಿಮ, ಸೋಮಶೇಖರ, ದಸ್ತಗಿರಿ, ಮೇಲ್ವಿಚಾರಕರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
