ಚನ್ನಳ್ಳಿ ಗ್ರಾ.ಪ.ಅಧ್ಯಕ್ಷರಾಗಿ ಅವಿರೋಧವಾಗಿ ಶಿವಮ್ಮ ಆಯ್ಕೆ.
ಸಿಂಧನೂರು.ಜೂನ್ 15.ಚನ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಬೆಂಬಲಿತ ಶಿವಮ್ಮ ಗಂಡ ಮೌಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಚಂದ್ರಶೇಖರ ಗ್ರೇಡ್ 2 ಅಧಿಕೃತವಾಗಿ ಘೋಷಣೆ ಮಾಡಿದರು.

ತಾಲೂಕಿನ ಚನ್ನಳ್ಳಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷರಾಗಿದ್ದ ಮಂಜುಳಾ ಗಂಡ ಶ್ರೀನಿವಾಸ, ಉಪಾಧ್ಯಕ್ಷರಾದ ಶ್ರೀದೇವಿ ಗಂಡ ದಶರಥರಡ್ಡಿ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆಯನ್ನು ದಿನಾಂಕ ಜೂನ್ 15 ರಂದು ನಿಗದಿಪಡಿಸಲಾಗಿತ್ತು. ನಾಮಪತ್ರ ಸ್ವೀಕರಿಸುವ ಸಮಯ 10:00 ಗಂಟೆಯಿಂದ ಗುಪ್ತ ಮತದಾನ ಮಧ್ಯಾಹ್ನ : 1-30 ಗಂಟೆಯ ವರೆಗೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಗೊತ್ತುಪಡಿಸಲಾಗಿತ್ತು, ಅಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಗಂಡ ಮೌಲಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಗಂಡ ರಾಜಸಾಬ ಅವರ ನಾಮಪತ್ರ ಹೊರತು ಪಡಿಸಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಶಿವಮ್ಮ ಮತ್ತು ರಾಜಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಪ್ರಕಟಿಸಿದರು.
ಒಟ್ಟು 21 ಸದಸ್ಯರನ್ನು ಹೊಂದಿದ್ದ ಪಂಚಾಯಿತಿಯಿದ್ದು 18 ಸದಸ್ಯರ ಬೆಂಬಲದಿಂದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶಿವಮ್ಮ ಮತ್ತು ರಾಜಮ್ಮ ಇವರನ್ನು ಗ್ರಾಮ ಪಂಚಾಯತ್ ಸದಸ್ಯರು ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಾಗಿ ಸನ್ಮಾನಿಸಿ ಗೌರವಿಸಿದರು.
ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಗೋವಿಂದ ರೆಡ್ಡಿ ಮೂಲಿಮನಿ, ಪಂಪಾರಡ್ಡಿ ಕೊಪ್ಪಳ, ನರಸಿಂಹರಡ್ಡಿ, ದೇವೇಂದ್ರಪ್ಪ ಮುನ್ನೂರು, ವೀರೇಶಪ್ಪ ಬಂಡಿ, ಶರಣಪ್ಪ ಗೋರೆಬಾಳ, ಶ್ರೀನಿವಾಸ ಬೋವಿ, ಮುತ್ತಪ್ಪ ಪತ್ನೂರು, ದುರುಗಪ್ಪ ಡಿ.ಡಿ. ಮಲ್ಲಾಪೂರು, ಗ್ರಾಮದ ಮುಖಂಡರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
