ಸಿಂಧನೂರನಲ್ಲಿ ಕೆ. ಆರ್. ಎಸ್. ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ.
ಸಿಂಧನೂರು : ಜೂನ್ 13 ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕೆ. ಆರ್. ಎಸ್. ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಯುವಕರು ಜಿಲ್ಲಾಧ್ಯಕ್ಷ ವೆಂಕಟೇಶ ಮ್ಯಾಕಲದೊಡ್ಡಿ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಕೆ.ಆರ್.ಎಸ್. ಪಕ್ಷವು ಕರ್ನಾಟಕದಲ್ಲಿ ಸ್ವಚ್ಚ, ಪ್ರಾಮಾಣಿಕ, ಪ್ರಾದೇಶಿಕ, ಜನಪರ ರಾಜಕಾರಣಕ್ಕೆ ಹಾಗೂ ರೈತರ ಕೃಷಿಕರ್ಮಿಕರ ದೀನ ದಲಿತರ ,ಪರವಾಗಿ ಪ್ರತಿದಿನ ಹಲವಾರು ಹೋರಾಟಗಳನ್ನು ಮಾಡುತ್ತಾ ಭ್ರಷ್ಟಾಚಾರ , ಅನ್ಯಾಯ, ಆಕ್ರಮಣದ ವಿರುದ್ಧ ಕೆ. ಆರ್. ಎಸ್ ಪಕ್ಷದ ಹೋರಾಟವನ್ನು ನೋಡಿ ಅದರಿಂದ ಸ್ಪೂರ್ತಿಪಡೆದ ಯುವಕರ ತಂಡ ಇಂದು ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಲ್ಲಾಧ್ಯಕ್ಷ ವೆಂಕಟೇಶ ಎಮ್. ಮಾತನಾಡಿ ತಾಲೂಕಿನಲ್ಲಿ ಭ್ರಷ್ಟ ,ಅನೀತಿಯ,ದಬ್ಬಾಳಿಕೆಯ ರಾಜಕಾರಣ ನಡೆಯುತ್ತಿದೆ. ಪ್ರಸ್ತುತ 3 ಜೆಸಿಬಿ ಪಕ್ಷಗಳು ( ಕಾಂಗ್ರೆಸ್,ಬಿಜೆಪಿ,ಜೆಡಿಎಸ್) ಬ್ರಷ್ಟಾಚಾರದ ವಿರುದ್ಧ ಹೋರಾಟ ಮಾಡದೆ ಜಾತೀಯತೆ,ಧರ್ಮ ರಾಜಕಾರಣಕ್ಕೆ ಮುಂದಾಗಿರುವುದು ವಿಪರ್ಯಾಸ ಎಂದು ತಿಳಿಸಿದರು.
ಸಿಂಧನೂರು ತಾಲೂಕು ಅಧ್ಯಕ್ಷ ವೀರಭದ್ರಯ್ಯ ಎಸ್. ಮಾತನಾಡಿ 2023 ರ ಚುನಾವಣೆಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕೆ. ಆರ್. ಎಸ್. ಪಕ್ಷದ ಅಭ್ಯರ್ಥಿಯಾದ ನಿರುಪಾದಿ ಕೆ ಗೋಮರ್ಸಿ ಅವರನ್ನು ಗೆಲ್ಲಿಸಬೇಕು ಎಂದು ತಾಲೂಕಿನ ಜನತೆಗೆ ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ತಾಲೂಕು ಕಾನೂನು ಸಲಹೆಗಾರ ರಾಮಣ್ಣ ವಕೀಲರು ಹಾಗೂ ತಾಲೂಕ ಯುವ ಘಟಕದ ಅಧ್ಯಕ್ಷ ಸ್ವಾಮಿ ವಿವೇಕಾನಂದ ,ತಾಲೂಕ ಸಂಘಟನಾ ಕಾರ್ಯದರ್ಶಿ ಹುಸೇನಪ್ಪ ಬದರ್ಲಿ,ಮಸ್ಕಿ ತಾಲೂಕ ಅಧ್ಯಕ್ಷ ಮಲ್ಲಯ್ಯ ಸ್ವಾಮಿ ಹಾಗೂ ಪಕ್ಷದ ತಾಲೂಕಿನ ಎಲ್ಲ ಕಾರ್ಯಕರ್ತರು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
