;

ರುಧ್ರಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾಣದೆ ಗಬ್ಬೆದ್ದು ನಾರುತ್ತಿದೆ, ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು?????

ರುಧ್ರಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾಣದೆ ಗಬ್ಬೆದ್ದು ನಾರುತ್ತಿದೆ, ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು?????

ಬೆಳಗಾವಿ ಜಿಲ್ಲೆಯ ಸವದತ್ತಿ ( ಪರಸಘಡ )ತಾಲೂಕು ರುಧ್ರಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳನ್ನು ನೋಡಿದರೆ ಅಭಿವೃದ್ಧಿ ಕಾಣದೆ ಹಳ್ಳಿಯ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದಲ್ಲಿ ವಾಸಿಸುವ ರೈತರ ಸಂಚರಿಸಲು ತಮ್ಮ ಜಮೀನುಗಳಿಗೆ ಹೋಗಲು ಅಚ್ಚುಕಟ್ಟಾಗಿ ರಸ್ತೆ ಇಲ್ಲ ಊರಿಗೆ ಹೊಂದಿಕೊಂಡಿವ ರಸ್ತೆಯ ಸ್ಥಿತಿ ನೋಡಿ ರುದ್ರಪೂರ ಗ್ರಾಮ ಪಂಚಾಯತಗೆ ಹೊಂದಿರುವ ದುಂಡನಕೊಪ್ಪ ಗ್ರಾಮದ ಮಠದ ಹಿಂದೆ ಮೊಣಕಾಲಿನವರೆಗೆ ನೀರು ನಿಂತ್ತಿರುತ್ತದೆ ಹಿಂತಹ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ತಿರಿಗಿ ನೋಡದ,

ದುಂಡನಕೊಪ್ಪ ಗ್ರಾಮ ರುದ್ರಪೂರಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸುತ್ತ ಪಾಚಿ ಗಟ್ಟಿ ನೀರು ತುಂಬಲು ಬರುವ ಮಹಿಳೆಯರು, ವಯಸ್ಸಾದ ನೀರು ಹಿಡಿಯಲು ಬರುವವರು ಕಾಲು ಜಾರಿ ಬೀಳುವ ಸ್ಥಿತಿ,ಅಚ್ಚುಕಟ್ಟಾಗಿ ಚರಂಡಿ ನಿರ್ಮಿಸದೆ ಕಳಪೆಯಾಗಿ ನಿರ್ಮಿಸಿ ಚರಂಡಿಯ ನೀರು ರಸ್ತೆಯ ಮೇಲೆ ಹರಿದರು ಚರಂಡಿ ಸೋಚ್ಚ ಗೊಳಿಸದ ಗ್ರಾಮ ಪಂಚಾಯತ್ ಸಿಬ್ಬಂದಿಗಳು,

ದುಂಡನಕೊಪ್ಪ ಗ್ರಾಮದ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಇರುವ ನೀರಿನ ಟ್ಯಾಂಕನ ಮೇಲಚಂವಣಿ ಕಟ್ಟಾಗಿ ಬಿದ್ದಿದೆ ಇದನ್ನು ಸರಿಪಡಿಸಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದ್ದಾರೆ ಹಾಗೂ ಶಾಲೆಯ ಮುಖ್ಯ ಗುರುಗಳು ಸಮಸ್ಸೆಗಳ ಕುರಿತು ಗ್ರಾಮ ಪಂಚಾಯತಗೆ ಅರ್ಜಿ ನೀಡಿ ಎರಡು ತಿಂಗಳು ಕಳೆದರು ತಿರುಗಿ ನೋಡದ ಅಧಿಕಾರಿಗಳು.

ಈ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರುವ ಹಳ್ಳಿಯ ಸಮಸ್ಸೆಯ ಕುರಿತು ಖುದ್ದಾಗಿ ನಮ್ಮ “ಎಚ್ಚರಿಕೆ ತಂಡ “ಗ್ರಾಮಕ್ಕೆ ಭೇಟಿ ನೀಡಿದಾಗ ಈ ಗ್ರಾಮಗಳಲ್ಲಿ ಸಾವಿರಾರು ಸಮಸ್ಸೆ ಸರಮಾಲೆ ಕಾಣಿಸ್ತಾ ಇದೆ. ಗ್ರಾಮಗಳು ಅಭಿವೃದ್ಧಿ ಯಾಕೆ ಆಗಿಲ್ಲ ಅಂತ ವಿಚಾರಿಸಿದರೆ ಅಭಿವೃದ್ಧಿ ಅಧಿಕಾರಿ ಅನುದಾನ ಕಡಿಮೆ ಬರುತ್ತೆ ಗ್ರೇಡ್ 2 ಪಂಚಾಯತ್ ಹೇಳಿಕೆ ನೀಡಿದ್ದಾರೆ. ಆದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೆ (p d o)ಗುತ್ತಿಗೆದಾರರ ಹೆಸರಲ್ಲಿ ತಾಂವೆ ಕೆಲಸ ಮಾಡುತ್ತಾರೆ ಅಂತ ಗ್ರಾಮದ ಜನರು ನಮ್ಮ ಪತ್ರಿಕೆಗೆ ಹೇಳಿಕೊಂಡಿದೆ…

ವರದಿ. ಮಹಾಲಿಂಗ ಗಗ್ಗರಿ. ಟೈಮ್ಸ್ ಆಪ್ ಬಳ್ಳಾರಿ ಉಪಸಂಪಾದಕರು.. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *