;

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ -ಶ್ರೀಧರ ಮಿತ್ರ*

ಕೂಡ್ಲಿಗಿ :ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಾಗೂ ಭವಿಷ್ಯದ ಪ್ರತಿಯೊಂದು ಕ್ಷಣಗಳನ್ನು ಸುಂದರಗೊಳಿಸುವಲ್ಲಿ ಶಿಕ್ಷಕರ ಪಾತ್ರ ತುಂಬಾ ಅಪಾರವಾದದ್ದು ಎಂದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಧರ ಮಿತ್ರ ನುಡಿದರು.

ಅವರು ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಎಸ್, ವಿರೂಪಾಕ್ಷ ಮೂರ್ತಿ ಶಿಕ್ಷಕರ ವಯೋ ನಿವೃತ್ತಿ ಪಡೆದ ಪ್ರಯುಕ್ತ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿರೂಪಾಕ್ಷ ಮೂರ್ತಿ ಸಂಡೂರು ತಾಲೂಕು ಸೇರಿದಂತೆ ಕೂಡ್ಲಿಗಿ ತಾಲೂಕಿನ ಬಿ ಆರ್ ಸಿ, ಕೆಂಗಲಹಟ್ಟಿ ಕುಪ್ಪಿನಕೆರೆಯಲ್ಲಿ ಸೇವೆ ಸಲ್ಲಿಸಿ ಮಕ್ಕಳಿಗೆ ಹಾಗೂ ಪೋಷಕರ ವರ್ಗದವರಿಗೂ ಮೆಚ್ಚುಗೆಯ ಶಿಕ್ಷಕರಾಗಿದ್ದು, ಅವರ ಕಾರ್ಯ ವೈಖರಿ ಶಿಕ್ಷಕ ವರ್ಗಕ್ಕೆ ಆದರ್ಶವಾಗಿದೆ. ಎಂದು ಮುಖ್ಯ ಗುರುಗಳು ಡಿ, ಕೃಷ್ಣಪ್ಪ ಮಾತನಾಡಿದರು. ಈ ಸಂದರ್ಭದಲ್ಲಿಸನ್ಮಾನಿತ ವಿರೂಪಾಕ್ಷ ಮೂರ್ತಿ,ಇ ಸಿ ಓ ಅಧಿಕಾರಿಗಳು ನಾಗರಾಜ್, ಮಂಜುನಾಥ, ಸಿ ಆರ್ ಪಿ ಅಧಿಕಾರಿಗಳಾದ ಸಂದೀಪ್, ಅಜ್ಜಪ್ಪ, ತಾ, ಪಂ, ಮಾಜಿ ಸದಸ್ಯ ಚಿನ್ನಾಪ್ರಾಪ್ಪ, ಪೋಷಕ ಪ್ರತಿನಿಧಿ ಶ್ರೀಮತಿ ಶಿಲ್ಪಾ ಶ್ರೀಧರಮಿತ್ರ ಸೇರಿದಂತೆ ಶಿಕ್ಷಕರಾದ ರಫೀಕ್ ಅಹಮದ್, ಪಿ, ರಮೇಶ್, ಶಿಕ್ಷಕಿಯರಾದ ಅನ್ನಪೂರ್ಣ, ನೀಲಂಬಿಕೆ, ಕಾವ್ಯ, ಸುನೀತಾ, ಬಿಸಿಯೂಟ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;