;

ಆಹುತಿಗಾಗಿ ಕಾದುಕುಳಿತಿದೆ ವಿದ್ಯುತ್ ಪರಿವರ್ತಕ, ಕಣ್ಣಿದ್ದು ಕುರುಡಾದರ ಜೆಸ್ಕಾಂ ಅಧಿಕಾರಿಗಳು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಶ್ರೀಊರಮ್ಮ ದೇವಿ ಹೊಂಡದ ಬಳಿ ಇರುವ ವಿದ್ಯುತ್ ಪರಿವರ್ತಕ ಆಪತ್ತನ್ನ ಆಹ್ವಾನಿಸುತ್ತಿದೆ. ನಾಗರೀಕರು ಅತಿಹೆಚ್ಚಾಗಿ ಸಂಚರಿಸುವ ರಸ್ತೆ ಇದಾಗಿದ್ದು,ಹೊಸಪೇಟೆ ರಸ್ತೆಯಿಂದ ಬಳ್ಳಾರಿ ರಸ್ತೆ ಕಡೆಗೆ ಮತ್ತು ಶಾಲಾ ಕಾಲೇಜ್ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ವಿಪರ್ಯಾಸವೆಂದರೆ ರಸ್ತೆಗೆ ಹೊಂದಿಕೊಂಡಿರುವಂತೆ ಇರುವ ವಿದ್ಯುತ್ ಪರಿವರ್ತಕ, ಸಾರ್ವಜನಿಕರಿಗೆ ಹಾಗೂ ಮಕ್ಕಳು ಜೀವಿಗಳ ಪಾಲಿಗೆ ಜವರಾಯನಂತೆ ಕಾದಿದೆ. ಕಾರಣ ಕಂಬಗಳಲ್ಲಿ ಅಳವಡಿಸಿರುವ ವಿದ್ಯುತ್ ಭಾರೀ ಗಾತ್ರದ ತಂತಿಗಳು ನೆಲಕ್ಕೆ ತಾಗುವಂತಿವೆ,ಅವುಗಳ ಮೇಲಿೆುವ ಪ್ಲಾಸ್ಟಿಕ್ ಹಾಗುಾ ಲಬ್ಬರ್ ಸಂಪೂರ್ಣ ಕಿತ್ತುಹೋಗಿದೆ. ಭಾರೀ ಪ್ರಮಾಣ ವಿದ್ಯುತ್ ಸರಬರಾಜಾಗುವ ಈ ದಪ್ಪತಂತಿಗಳು ಮಕ್ಕಳಿಗೆ ಹಾಗೂ ಪ್ರಾಣಿಗಳಿಗೆ ಸುಲಭವಾಗಿ ತಾಗುವಂತಿವೆ. ವರ್ಷಗಳಿಂದಲೂ ಈ ದುರಾವಸ್ಥೆಯಲ್ಲಿದ್ದು,ಜೆಸ್ಕಾಂ ಮಾತ್ರ ತನಗೆ ಸಂಬಂಧಿಸಿದಲ್ಲ ಎನ್ನೋ ರೀತಿಯಲ್ಲಿ ವರ್ತಿಸುವತ್ತಿದೆ. ಜೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿಯೇ ಸಂಚರಿಸುತ್ತಾರೆ, ಆದರೆ ಈ ದುರಾವಸ್ಥೆ ಸರಿಪಡಿಸುವಲ್ಲಿ ಮುಂದಾಗಿಲ್ಲ ಇದು ಜೆಸ್ಕಾಂ ಇಲಾಖೆಯ ಸಾಮಾಜಿಕ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವರ್ಷದಿಂದಲೂ ಈ ವಿದ್ಯುತ್ ವರ್ತಕಕ್ಕೆ ಅಳವಡಿಸಿರುವ ವಿದ್ಯುತ್ ತಂತಿಗಳು ವಿದ್ಯುತ್ ಪ್ರವಹಿಸಿ,ದಾರಿ ಹೋಕರನ್ನು ಬಲಿ ತೆಗೆದು ಕೊಳ್ಳಲು ಬಾಯಿ ತೆರೆದು ಜವರಾಯನಂತೆ ಕಾದು ಕುಳಿತಿವೆ. ಕಂಡೂ ಕಾಣ ಜೆಸ್ಕಾಂ ಇಲಾಖೆ ಕಂಡೂ ಕಾಣದಂತಿದ್ದು, ನಿರ್ಲಕ್ಷ್ಯ ತೋರಿದ್ದು ಪರೋಕ್ಷವಾಗಿ ಜವರಾಯನ ಏಜೆಂಟರಾಗಿ ವರ್ತಿಸುತ್ತಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಆರೋಪಿಸಿದೆ. ನಿನ್ನೆ ತಾನೇ ಕಂಬದ ಹತ್ತಿರ ಹಾದು ಹೋದ ಪಶುವೊಂದು ವಿದ್ಯುತ್ ತಂತಿ ತಗುಲಿ ಪ್ರಾಣ ಕಳೆದು ಕೊಳ್ಳೊದರಲ್ಲಿತ್ತು,ಅದೃಷ್ಟ ವಶಾತ್ ಪಾರಾಗಿದೆ ಇಲ್ಲಿ ಶಾಲಾ ಕಾಲೆಜುಗಳಿಗೆ ಮಕ್ಕಳು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು ಜೀವ ಹನಿ ಸಂಭವಿಸುವ ಸಾಧ್ಯತೆ ಇದೆ. ರಸ್ತೆಯಲ್ಲಿ ಸಂಚರಿಸುವ ನಾಗರೀಕರಲ್ಲಿ ತುಂಬಾ ಆತಂಕ ಸೃಷ್ಟಿಯಾಗಿದೆ,ಕಾರಣ ಶೀಘ್ರವೇ ವಿದ್ಯತ್ ಪರಿವರ್ತಕವನ್ನು ರಸ್ತೆಯಿಂದ ತುಂಬಾ ಅಂತರದಲ್ಲಿರುವಂತೆ ಸ್ಥಳಾಂತರಿಸಬೇಕು. ತುರ್ತಾಗಿ ವಿದ್ಯತ್ ಪರಿವರ್ತಕಕ್ಕೆ ಅಳವಡಿಸಿರುವ ತಂತಿಗಳನ್ನ ಬದಲಿಸಬೇಕು, ಕೈಗೆಟುಕದ ರೀತಿಯಲ್ಲಿ ಬಹು ಅಂತರಕ್ಕೆ ಅವುಗಳನ್ನ ಅಳವಡಿಸಬೇಕಿದೆ. ನಿರ್ಲಕ್ಷ್ಯ ತೋರಿದರೆ ಆಪತ್ತು ಖಂಡಿತ ಜರುಗುವ ಆಪತ್ತಿಗೆ ಜೆಸ್ಕಾಂ ಇಲಾಖಾಧಿಕಾರಿ ನೇರ ಹೊಣೆಹೊರಬೇಕಾಗುತ್ತೆ, ಕಾರಣ ಶೀಘ್ರವೇ ದುರಸ್ಥಿಗೊಳಿಸಬೇಕೆಂದು ಸಾರ್ವಜನಿಕರು ನಾಗರೀಕರು, ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ವಿವಿದ ಸಂಘಟನೆಗಳ ಪದಾಧಿಕಾರಿಗಳು ಜೆಸ್ಕಾಂ ಇಲಾಖೆಗೆ ಈ ಮೂಲಕ ಆಗ್ರಹಿಸಿದ್ದಾರೆ…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;