ಗಬ್ಬೆದ್ದು ನಾರುತ್ತಿರುವ ಜೇವರ್ಗಿ ಬಸ್ ನಿಲ್ದಾಣ ,ಇಲ್ಲಿನ ಶೌಚಾಲಯ
ಸಾಕ್ಷಾತ್ ನರಕದರ್ಶನ ! ಜೇವರ್ಗಿ :- ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೆ ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ. ಬಸ್ ನಿಲ್ದಾಣದಲ್ಲಿ ತಿರುಗಾಡುವಂತ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಕ್ಷಾತ್ ನರಕ ದರ್ಶನ !!
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಜೇವರ್ಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ .ಬಸ್ ನಿಲ್ದಾಣದ ಒಳಗಡೆ ಎಲ್ಲಿ ನೋಡಿದರಲ್ಲಿ ಕಸದ ರಾಶಿ ನೋಡಲು ಕಣ್ಣಿಗೆ ಕಾಣಿಸುತ್ತದೆ. ನರಕ ಎಂದರೆ ಯಾರು ನೋಡಿಲ್ಲವೋ ಅವರು ಜೇವರ್ಗಿ ಬಸ್ ನಿಲ್ದಾಣಕ್ಕೆ ಬಂದರೆ ಸಾಕ್ಷಾತ್ ದರ್ಶನವಾಗುತ್ತದೆ ! ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಸರಿಯಾದ ನಿರ್ವಹಣೆ ಹಾಗೂ ವ್ಯವಸ್ಥೆ ಇಲ್ಲ:
ಬಸ್ ನಿಲ್ದಾಣ ಇಷ್ಟೊಂದು ಗಬ್ಬುನಾರುವದಕ್ಕೆ ಜೇವರ್ಗಿ ಬಸ್ ಘಟಕದ ವ್ಯವಸ್ಥಾಪಕರು ಹಾಗೂ ಕಂಟ್ರೋಲರ ಮುಖ್ಯ ಕಾರಣ ಎಂದು ಸಾರ್ವಜನಿಕ ಆರೋಪಿಸುತ್ತಿದ್ದಾರೆ .ಆದರೆ ಶಿಕ್ಷೆ ಮಾತ್ರ ನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ.
ಸಾರ್ವಜನಿಕರ ನಿರೀಕ್ಷೆ:-
ಸುಮಾರು ಒಂದು ವರ್ಷದಿಂದ ಇದೇ ರೀತಿ ವಾತಾವರಣವಿದ್ದು ಈಗಲಾದರೂ ಸಂಬಂಧಪಟ್ಟಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದ ಟೆಂಡರ್ ದಾರರು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಶುದ್ಧ ಪರಿಸರ ನಿರ್ಮಾಣ ಮಾಡುವರೊ ಎಂದು ಕಾದು ನೋಡಬೇಕಿದೆ…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
