;

ಸೌಹಾರ್ದಯುತ ಬಾಳಿಗೆ ಸರಳ ವಿವಾಹವೇ ಶ್ರೇಷ್ಠ : ನಟ ಚೇತನ್ ಅಹಿಂಸಾ…!!!

ಸೌಹಾರ್ದಯುತ ಬಾಳಿಗೆ ಸರಳ ವಿವಾಹವೇ ಶ್ರೇಷ್ಠ : ನಟ ಚೇತನ್ ಅಹಿಂಸಾ

ರಾಮನಗರ : ಸೌಹಾರ್ದಯುತ ಬಾಳಿಗೆ ಸರಳವಿವಾಹ ಶ್ರೇಷ್ಠ ಎಂದು ನಟ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.

ಅವರು ರಾಮನಗರ ತಾಲೂಕಿನ ದೊಡ್ಡಮಣ್ಣುಗುಡ್ಡೆದೊಡ್ಡಿ ಗ್ರಾಮದಲ್ಲಿ 22/05/2022 ಭಾನುವಾರ  ಡಾ.ಬಿ.ಆರ್.ಅಂಬೇಡ್ಕರ್ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಡಿದ್ದ ಭಾನುವಾರ ವಿಶ್ವ ಮಾನವತಾವಾದಿ  ಅಂಬೇಡ್ಕರ್ ರ 131 ನೇ ಜಯಂತೋತ್ಸವ ಮತ್ತು ಅಂಬೇಡ್ಕರ್ ಹಬ್ಬ (ಜಯಂತಿ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ದೇಶ ಶಾಂತಿ ಮತ್ತು ಸೌಹಾರ್ದಕ್ಕೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ, ಆದರೆ ಪ್ರಸ್ತುತ ದಿನಗಳಲ್ಲಿ ಕೆಲ ಸಂಘಟನೆಗಳು ಸಮಾಜದಲ್ಲಿ ಕೋಮು ದ್ವೇಷ ಹರಡಿಸುತ್ತಿರುವುದು ದುರಂತ‌.

ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ವಿಚಾರಧಾರೆಗಳನ್ನ ಬದುಕಿನಲ್ಲಿ ಅಳವಡಿಸಿಕೊಂಡು ಸರಳವಿವಾಹ ವಾಗುತ್ತಿರುವ ಅಕ್ಷಯ್ ಗೌತಮ್ ಸುನಾಮಿಯಮಧ್ಯೆಅನಾಮಿಕ ಮತ್ತು ಮೇಘನರಿಗೆ ನನ್ನ ಅಭಿನಂದನೆಗಳು ಎಂದರು.

ಈ ವೇಳೆ ಸುರೇಶ್ ಗೌತಮ್ ಅವರು ಮಂತ್ರ ಮಾಂಗಲ್ಯ ಭೋಧಿಸಿದರು‌. ಅಕ್ಷಯ್ ಗೌತಮ್ ಕೋಟಿಗಾನಹಳ್ಳಿ ರಾಮಯ್ಯ ಅವರ ಅಂಬೇಡ್ಕರ್ ರಥ ಪದ್ಯ ಓದಿದರು, ಅಂಬೇಡ್ಕರ್ ವಿಚಾರಧಾರೆಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಂಡು ಸಾಗುತ್ತಿರುವ ಅಕ್ಷಯ್ ಗೌತಮ್ ಮತ್ತು ಮೇಘನ ಅಂಬೇಡ್ಕರ್ ಹಬ್ಬದಲ್ಲಿ ಸರಳವಿವಾಹವಾಗುವ ಮೂಲಕ ಹಾರ ಬದಲಿಸಿಕೊಂಡು ಬಾಳ ಪಾಯಣಕ್ಕೆ ಜೊತೆಯಾಗಿದ್ದಕ್ಕೆ ನೆರೆದಿದ್ದ ಜನರೆಲ್ಲ ಸಾಕ್ಷಿಯಾದರು..

ವರದಿ.ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;