ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆಯನ್ನು ತಕ್ಷಣ ನಿಲ್ಲಿಸುವಂತೆ ಮನವಿ.
ಕೂಡ್ಲಿಗಿ: ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಸೋಮವಾರ ರಾಜ್ಯದಲ್ಲಿ ಪಠ್ಯಕಮ ಪರಿಷ್ಕರಣೆಯನ್ನು ತಕ್ಷಣ ನಿಲ್ಲಿಸುವಂತೆ ತಹಸೀಲ್ದಾರ್ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ಕುರಿತಾಗಿ ಪಾಠಗಳನ್ನು ಸೇರಿಸುವುದು,ತಗೆದು ಹಾಕುವ ಆಟ ನಡೆದಿದ್ದು,ಇದನ್ನು ನಮ್ಮ ವೇದಿಕೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು,ಈ ಬೆಳವಣಿಗೆ ಆತಂಕವನ್ನುಂಟು ಮಾಡಿದೆ.ಇದು ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಅತ್ಯಂತ ವಿಷಾದಕರ ಸಂಗತಿಯಾಗಿದೆ.ಪಾಲಕರ,ಪೋಷಕರ ಅಭಿಪ್ರಾಯ ಪಡೆಯದೆ,ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶಿಕ್ಷಣದ ಜತೆಗೆ,ಭವಿಷ್ಯವನ್ನು ಬಲಿ ಕೊಡಲು ಹೊರಟಿರುವುದು ಖಂಡನೀಯವಾಗಿದೆ. ಮಕ್ಕಳ ಶಿಕ್ಷಣ ಮೌಲ್ಯಯುತ ವಾಗಿರುವ ಜತೆಗೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿರಬೇಕು.ನಮ್ಮ ಮಕ್ಕಳು ಸ್ವಾತಂತ್ರ್ಯ ಇತಿಹಾಸವನ್ನು ಅರಿತು,ತ್ಯಾಗ,ಬಲಿದಾನ ಹೋರಾಟಗಳ ಮೂಲಕ ಪಡೆದ ಈ ಮೌಲ್ಯಯುತ ಸ್ವಾತಂತ್ರ್ಯವನ್ನು ಗೌರವಿಸಲು ಅಗತ್ಯವಾದ ಜ್ಞಾನವನ್ನು ಕಟ್ಟಿಕೊಡಬೇಕು.ಜತೆಗೆ ಸ್ವಾತಂತ್ರ್ಯ ಚಳುವಳಿಯ ಅಂತಿಮ ಫಲಿತಾಂಶವಾಗಿ ರೂಪುಗೊಂಡ ಸಂವಿಧಾನವನ್ನು ಪೂರ್ಣವಾಗಿ ಜಾರಿಗೊಳಿಸುವ ಮೂಲಕ ಸಮ ಸಮಾಜವನ್ನು ಕಟ್ಟಿಕೊಳ್ಳಬೇಕು.ಜತೆಗೆ ಶಿಕ್ಷಣ ನಮ್ಮಲ್ಲಿರುವ ಹಲವು ಸಾಮಾಜಿಕ,ಆರ್ಥಿಕ ಹಾಗೂನಿರುದ್ಯೋಗದಂತಹ ಸಮಸ್ಯೆಗಳಿಗೆ ಪರಿಹಾರವಾಗಬೇಕು.ಆದರೆ ಈಗಿನ ಪರಿಷ್ಕರಣೆಯಲ್ಲಿ ಇದಾವುದು ಚರ್ಚೆಯಾಗುತ್ತಿಲ್ಲ.ಆ ಕಾರಣ ಪಠ್ಯಕ್ರಮ ಪರಿಷ್ಕರಣೆ ನಿಲ್ಲಿಸಿ,ಪಠ್ಯ,ಪುಸ್ತಕಗಳನ್ನು ಶೀಘ್ರವಾಗಿ ಒದಗಿಸಬೇಕು.ಹಿಂದಿನ ಪಠ್ಯಕ್ರಮ ಗಳನ್ನು ಮುಂದುವರಿಸಿ,ಮಕ್ಕಳ ಭವಿಷ್ಯದ ಕಡೆ ಗಮನಹರಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.ತಹಸೀಲ್ದಾರ್ ಟಿ.ಜಗದೀಶ್ ಮನವಿ ಸ್ವೀಕಾರ ಮಾಡಿದರು.ಶಾಲಾಭಿವೃದ್ದಿ ಮೇಲುಸ್ತುವಾರಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ,ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಸರೋಜ,ಲಕ್ಷ್ಮೀದೇವಿ,ಕರಿಬಸಪ್ಪ,ಟಿ.ಭಾಗ್ಯ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
