ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರರ ಆಶೀರ್ವಾದವೇ ಸಿಂಧನೂರಿನ ಕಾರುಣ್ಯ ಆಶ್ರಮಕ್ಕೆ ಸ್ಪೂರ್ತಿ —- ಸಿಂಧನೂರು ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ಒಂದು ವಾರಗಳ ಹಿಂದೆ ಮಾನಸಿಕ ಅಸ್ವಸ್ಥೆಯಾಗಿ ದಾಖಲಾಗಿದ್ದ ರಾಜ್ ಬಿ ಗಂ/ ಖಾಸಿಂಸಾಬ್ ಸಾ/ ಮಿಂಚೇರಿ ತಾ/ ಜಿ/ಬಳ್ಳಾರಿ ವಯಸ್ಸು-68 ಎನ್ನುವ ವೃದ್ಧೆಯನ್ನು ರಕ್ಷಿಸುವಲ್ಲಿ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದಿದೆ. ಈಕೆಯನ್ನು ಸುಮಾರು ಒಂದು ವಾರಗಳಿಂದ ಚಿಕಿತ್ಸೆ ನೀಡುತ್ತಿರುವ ಡಾ.ನಾಗರಾಜ ಕಾಟ್ವಾ ಪೊಲೀಸ್ ಇಲಾಖೆಯ ಸಹಕಾರವನ್ನು ತೆಗೆದುಕೊಂಡು ಕಾರುಣ್ಯ ಆಶ್ರಮದ ಮಾಹಿತಿ ನೀಡಿದರು ತಕ್ಷಣ ಆಶ್ರಮದ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಆಕೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಾದ ಸೈಯದ್ ಸಜ್ಜಾದ ಇವರುಗಳ ಸಮಕ್ಷಮದಲ್ಲಿ ಆಶ್ರಮದ ಸಿಬ್ಬಂದಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ. ನಾಗೇಶ ಸ್ವಾಮಿ. ರೇಖಾ ಸುಕಾಲಪೇಟೆ ಆಶ್ರಮದ ವಾಹನದ ಮೂಲಕ ಆಶ್ರಮಕ್ಕೆ ಕರೆದುಕೊಂಡು ಒಂದು ಆಶ್ರಯ ನೀಡಿದ್ದಾರೆ ಸದ್ಯದ ಮಟ್ಟಿಗೆ ಈಕೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿರುವ ಪೊಲೀಸ್ ಇಲಾಖೆ ಹಾಗೂ ಕಾರುಣ್ಯ ಆಶ್ರಮ ಈಕೆಯನ್ನು ಸ್ವಂತ ಸ್ಥಳಕ್ಕೆ ಸೇರಿಸುವ ಪ್ರಯತ್ನದಲ್ಲಿದ್ದಾರೆ ಆದರೆ ಅಲ್ಲಿನ ಸ್ಥಳೀಯರನ್ನು ಕಾರುಣ್ಯ ಆಶ್ರಮದ ಸಿಬ್ಬಂದಿಗಳು ಸಂಪರ್ಕಿಸಿದಾಗ ಈಕೆಗೆ ದೂರದ ಸಂಬಂಧಿಗಳು ಮಾತ್ರ ಇರುವುದು ಗೊತ್ತಾಗಿದೆ.

ಈ ಸಮಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಸಿಂಧನೂರು ನಗರ ಅಲ್ಲದೆ ಬೇರೆ ಬೇರೆ ನಗರಗಳಲ್ಲೂ ಸಹ ಇಂಥ ವ್ಯಕ್ತಿಗಳನ್ನು ಗಮನಿಸಿ ಪೊಲೀಸ್ ಇಲಾಖೆ ಮಾಹಿತಿ ನೀಡುತ್ತದೆ ಇವರು ನಿಜವಾದ ಅನಾಥರು ಎಂದಾಗ ಮಾತ್ರ ಇವರಿಗೆ ಆಶ್ರಯ ನೀಡಲು ನಾವು ಸಿದ್ಧರಿದ್ದೇವೆ ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ವಚನದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರರ ಆಶೀರ್ವಾದವೇ ಸಿಂಧನೂರಿನ ಕಾರುಣ್ಯ ಆಶ್ರಮಕ್ಕೆ ಸ್ಪೂರ್ತಿ ಎಂದು ಪತ್ರಿಕಾ ಮಿತ್ರರೊಂದಿಗೆ ಭಾವನೆಗಳನ್ನು ಹಂಚಿ ಕೊಂಡರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
