ವಿಶ್ವನಾಯಕ ಡಾ.ಬಿ.ಆರ್. ಅಂಭೇಡ್ಕರ್ ಸೇನೆ (ರಿ) ತಾಲೂಕು ಸಮಿತಿ ರಚನೆ….!!!

ವಿಶ್ವನಾಯಕ ಡಾ.ಬಿ.ಆರ್. ಅಂಭೇಡ್ಕರ್ ಸೇನೆ (ರಿ) ತಾಲೂಕು ಸಮಿತಿ ರಚನೆ.

ಸಿಂಧನೂರು : ಇಂದು ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವನಾಯಕ ಡಾ.ಬಿ.ಆರ್. ಅಂಭೇಡ್ಕರ್ ಸೇನೆ (ರಿ) ತಾಲೂಕು ಸಮಿತಿಯನ್ನು ಸಂಸ್ಥಾಪಕ ರಾಜ್ಯಧ್ಯಕ್ಷರಾದ ಡಾ.ಶಿವರಾಜ ಕೆ.ಎನ್. ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ಬಸವರಾಜು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಸೇನಪ್ಪ ವಿರುಪಾಪೂರು ರವರ ಸಮ್ಮುಖದಲ್ಲಿ ತಾಲೂಕು ಸಮಿತಿ ರಚನೆ ಮಾಡಿ ಎಲ್ಲಾ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಿದರು.

ತಾಲೂಕು ಸಮಿತಿ ರಚನೆ : ತಾಲೂಕು ಅಧ್ಯಕ್ಷರು : ಹುಸೇನಪ್ಪ ವಿರುಪಾಪೂರು, ಉಪಾಧ್ಯಕ್ಷರು : ಶಶಿಕುಮಾರ್ ಹತ್ತಿಗುಡ್ಡ, ಪ್ರಧಾನ ಕಾರ್ಯದರ್ಶಿ : ಶಿವಕುಮಾರ ಕಟ್ಟಿಮನಿ, ಗೌರವಾಧ್ಯಕ್ಷ : ಅಣ್ಣಪ್ಪ ಪಾಟೀಲ್, ಅಲ್ಪಸಂಖ್ಯಾತ ಹಿಂದುಳಿದ ವರ್ಗ ಅಧ್ಯಕ್ಷರು : ರಾಜು ಇಂದ್ರನಗರ, ನಗರ ಘಟಕ ಅಧ್ಯಕ್ಷರು : ದುಗ್ಗಪ್ಪ ಹೊಸಮನಿ, ನಗರ ಘಟಕ ಪ್ರಧಾನ ಕಾರ್ಯದರ್ಶಿ : ಶರಣು ಸಿಂದ್ರಾಂಪೂರು, ಕಾರ್ಯಕಾರಣಿ ಸದಸ್ಯ : ಶ್ರೀಧರ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜು ವಿರುಪಾಪೂರು ಮಾತನಾಡಿ ಎಲ್ಲಾರು ಒಗ್ಗಟ್ಟಿನಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ದೌರ್ಜನ್ಯ ಅತ್ಯಾಚಾರದ ಬಗ್ಗೆ ದ್ವನಿ ಎತ್ತುವುದು,ಕಾನೂನು ಸುವ್ಯವಸ್ಥೆಯಲ್ಲಿ ಸಾಗುವುದು, ನಿರಂತರ ಅಂಬೇಡ್ಕರ್ ಅನುಯಾಯಿಗಳಾಗಿರುವುದು, ಶಿಸ್ತು ಮತ್ತು ಚಾರಿತ್ರೆ ಹೊಂದಿಕೊಳ್ಳುವುದು, ಇನ್ನೂ ಅನೇಕ ಸಂಘದ ಧೈಯೋದ್ದೇಶಗಳ ಬಗ್ಗೆ ನೂತನ ಪದಾಧಿಕಾರಿಗಳಿಗೆ ಮಾಹಿತಿ ತಿಳಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend