ಮೇ.16 ಡೆಂಗೀ ದಿನಾಚರಣೆ.ತಹಶೀಲ್ದಾರ ಮಂಜುನಾಥ…!!!

ಮೇ.16 ಡೆಂಗೀ ದಿನಾಚರಣೆ.ತಹಶೀಲ್ದಾರ ಮಂಜುನಾಥ.

ಸಿಂಧನೂರು. ಮೇ.13.ಮೇ 16 ರಂದು ಡೆಂಗೀ ದಿನಾಚರಣೆ ಆಚರಿಸಲಾಗುತ್ತಿದೆ ಅಂದು ಬೆಳಿಗ್ಗೆ ನಗರದ ಸರ್ಕಾರಿ ಆಸ್ಪತ್ರೆ ಮುಂದೆ ಮಾಜಿ ಸಚಿವ ಶಾಸಕ ವೆಂಕಟರಾವ್ ನಾಡಗೌಡ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಹಶೀಲ್ದಾರ ಮಂಜುನಾಥ ಭೋಗವತಿ ತಿಳಿಸಿದರು.
ನಗರದ ತಹಶೀಲ ಕಾರ್ಯಾಲಯದಲ್ಲಿ ಡೆಂಗೀ ದಿನಾಚರಣೆ ಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ವರ್ಷ ಕ್ಕಿಂತ ಈ ವರ್ಷ ಡೆಂಗೀ ಪ್ರಕರಣ ಗಳ ಸಂಖ್ಯೆ ಕಡಿಮೆ ಇದ್ದು ಕೇವಲ ನಾಲ್ಕು ಪ್ರಕರಣಗಳು ಕಂಡುಬಂದಿವೆ.
ಈಗ ಮಳೆಗಾಲ ಬರುವುದರಿಂದ ಮನೆ ಮುಂದೆ ಹಾಗೂ ಅಕ್ಕಪಕ್ಕದಲ್ಲಿ ನೀರು ನಿಂತು ಮಲಿನ ವಾದರೆ ಸೊಳ್ಳೆಗಳು ಉತ್ಪತ್ತಿ ಯಾಗಿ ಡೆಂಗೀ ಪ್ರಕರಣ ಗಳು ಲಕ್ಷಣಗಳು ಉಂಟು.ಆದರಿಂದ ನೀರು ನಿಂತು ಮಾಲಿನವಾಗದಂತೆ ಜನ ನೋಡಿಕೊಳ್ಳಬೇಕು ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು,ಗ್ರಾಮ ಪಂಚಾಯಿತಿ ಪಿಡಿಓ ನವರು ನಗರಸಭೆ,ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸ್ವಚ್ಛತೆ ಬಗ್ಗೆ ಹಾಗೂ ಡೆಂಗೀ ರೋಗ ಲಕ್ಷಣಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸಿ ಡೆಂಗೀ ಮುಕ್ತ ತಾಲೂಕನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕ ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ ,ತುರ್ವಿಹಾಳ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಜಿ ಬಾಬು ,ಡಾ.ಆಂಜನೇಯ, ಡಾ.ದಾವಲಸಾಬ್, ಡಾ.ಗುರು ಬಸವ, ಡಾ.ಜೀವನೇಶ್ವರಯ್ಯ,ಸಿಡಿಪಿಓ ಇಲಾಖೆ ಮೇಲ್ವಿಚಾರಕಿ ಸರಸ್ವತಿ, ಅರಣ್ಯ ಇಲಾಖೆ ಮಲಕಜಮ್ಮ,ಎಫ್ ಎ ಹಣಗಿ,ರಂಗನಾಥ ಗುಡಿ,ನಗರಸಭೆಯ ಕಿಶನ್ ರಾವ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend