ಕಲಿಕಾ ಚೇತರಿಕೆ
ಶಾಲಾ ಪ್ರಾರಂಭೋತ್ಸವ ಸಭೆ
ಹೂವಿನ ಹಡಗಲಿ: 2022-23 ನೇ ಸಾಲಿನ
ಕಲಿಕಾ ಚೇತರಿಕೆ ಅರ್ಥಪೂರ್ಣ ಅನುಷ್ಠಾನಕ್ಕೆ ಮುಖ್ಯ ಗುರುಗಳು ಕಾರ್ಯನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎನ್ ಹಳ್ಳಿಗುಡಿ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ
ಶಾಲಾ ಪ್ರಾರಂಭೋತ್ಸವ
ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಶಾಲಾ ಪ್ರಾರಂಭೋತ್ಸವವನ್ನು
ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಿರಿ. ಕೊಠಡಿ, ಶಾಲಾ ಮೈದಾನ ಸ್ವಚ್ಛಗೊಳಿಸಿ
ದಾಖಲಾತಿ ಆಂದೋಲನ
ಪ್ರವೇಶ ಪ್ರಕ್ರಿಯೆ ಇಲಾಖೆಯ ಆದೇಶದಂತೆ
ಪೂರ್ಣಗೊಳಿಸಿರಿ ಎಂದರು.
ದಿನವಹಿ ಹಾಜರಾತಿ ಎಸ್ ಎ ಟಿ ಎಸ್ ನಲ್ಲಿ ನಮೂದಿಸಬೇಕು.
ಬಿಸಿಯೂಟ ಕ್ಷೀರಭಾಗ್ಯ ಯೋಜನೆ ಮಾಹಿತಿ
ಪಠ್ಯಪುಸ್ತಕ ವಿತರಣೆ
ದಾಖಲಿಸಬೇಕು ಎಂದು ತಿಳಿಸಿದರು.
ಶಿಕ್ಷಕ ಸಿಬ್ಬಂದಿ ಕರ್ತವ್ಯ, ಎಸ್ ಡಿ ಎಂ ಸಿ, ಸಮುದಾಯದ ಸಹಕಾರದಿಂದ ಇಲಾಖೆಯ ಆದೇಶದಂತೆ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮಹತ್ವದ ಜವಾಬ್ದಾರಿ ಮುಖ್ಯ ಗುರುಗಳ ಮೇಲಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ
ಹೆಚ್ ಕೆ ಚಂದ್ರಪ್ಪ, ತಾಲೂಕು ದೈಹಿಕ ಅಧೀಕ್ಷಕ
ಮುಸ್ತಫಾ, ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಪಿ ಪ್ರಕಾಶ್,
ಜಿಲ್ಲಾ ಉಪಾಧ್ಯಕ್ಷ
ಸಿ ಡಿ ಲಿಂಗಶೆಟ್ಟರ್
ಸುರೇಶ ಅಂಗಡಿ
ಇ ಸಿ ಓ ಮಲ್ಲಿಕಾರ್ಜುನ
ಮಿಟ್ಯಾನಾಯ್ಕ್
ಹಾಜರಿದ್ದರು.
ಸರ್ಕಾರಿ ಅನುದಾನಿತ
ಪ್ರೌಢಶಾಲಾ ಶಿಕ್ಷಕ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಗುರುತಿನ ಚೀಟಿ ವಿತರಿಸಲಾಯಿತು.
ಪ್ರೌಢಶಾಲಾ ಮುಖ್ಯ ಗುರುಗಳು ಸಭೆಯಲ್ಲಿ
ಭಾಗವಹಿಸಿದ್ದರು…

ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
