ಲಸಿಕೆಯಿಂದ ವಂಚಿತರಾದ ಗರ್ಭಿಣಿಯರಿಗೆ ಹಾಗೂ ೨ವರ್ಷದ ಒಳಗಿನ ಮಕ್ಕಳಿಗೆ “ಇಂದ್ರಧನುಷ್ ಲಸಿಕೆ ಅಭಿಯಾನ”.
ವಿಜಯ ನಗರ ಜಿಲ್ಲಾ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ದಿನಾಂಕ 9-5-2022ರಂದು ಸಮುದಾಯ ಆರೋಗ್ಯ ಕೇಂದ್ರದ.ಸಿಬ್ಬಂದಿಗಳಾದ ಸಿಸ್ಟರB.ಕವಿತ,ಆಶಾ ಕಾರ್ಯಕರ್ತೆಯರಾದ ಕಲ್ಪನಾ,ನಿರ್ಮಲಾ,ರಾಧಿಕಾ,ಹಳ್ಳಕ್ಕ ಇವರನ್ನೊಳಗೊಂಡ ತಂಡ ಬಳಿಗಾರ ಓಣಿಯ ಭಜನಾ ಸಂಘದಲ್ಲಿ ‘ಇಂದ್ರಧನುಷ್’ ಲಸಿಕಾ ಆಭಿಯಾನವನ್ನು ಆಯೋಜಿಸಲಾಗಿತ್ತು. ಪ್ರಧಾನ ಮಂತ್ರಿ ಮಿಷನ್ ಇಂದ್ರಧನುಷ್ ಅಭಿಯಾನವನ್ನು 2014ರ ಡಿಸೆಂಬರ್ 25 ರಂದು ಆರಂಭಿಸಲಾಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ. ಲಸಿಕೆ ಹಾಕದ ಮಕ್ಕಳಿಗೆ ಲಸಿಕೆ ಹಾಕುವುದು ಮತ್ತು 2022 ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸುವುದು ಮಿಷನ್ ಇಂದ್ರಧನುಷ್ನ ಮುಖ್ಯ ಉದ್ದೇಶವಾಗಿದೆ.ಇಂದ್ರಧನುಷ್ ಎಂದರೆ ಇದು ಮಳೆಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತದೆ. ಅಂದರೆ, ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳನ್ನು ಈ ಏಳು ಬಣ್ಣಗಳು ಪ್ರತಿನಿಧಿಸುತ್ತವೆ. ಹೀಗಾಗಿ ಮಾರಕ ರೋಗಗಳು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಯನ್ನು ವ್ಯಾಕ್ಸಿನೇಷನ್ ಮೂಲಕ ಮಾತ್ರವೇ ತಡೆ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಅಭಿವೃದ್ಧಿಯನ್ನು ವೇಗಗೊಳಿಸಲು ಈ ಯೋಜನೆಯನ್ನು ಪರಿಚಯಿಸಿದೆ. ಪ್ರಧಾನ ಮಂತ್ರಿ ಮಿಷನ್ ಇಂದ್ರಧನುಷ್ ಅಭಿಯಾನವು ಈ ಏಳು ರೋಗಗಳಿಗೆ ಲಸಿಕೆಯನ್ನು ಪಡೆಯುವ ಅಭಿಯಾನವನ್ನು ಹೊಂದಿದೆ. ಈ 7 ರೋಗಗಳನ್ನು ಲಸಿಕೆಯಿಂದ ಮಾತ್ರವೇ ತಡೆಯಬಹುದಾಗಿದೆ.ಆ ರೋಗಗಳೆಂದರೆ 1) ಒಣ ಕೆಮ್ಮು
2)ದಡಾರ
3)ಪೋಲಿಯೋ
4)ಡಿಫ್ತೀರಿಯಾ
5)ಹೆಪಟೈಟಿಸ್ ಬಿ
6)ಧನುರ್ವಾಯು
7)ಕ್ಷಯ ರೋಗ ಇಂತಹ ರೋಗಗಳಿಂದ ಮುಕ್ತವಾಗಿ ಜೀವನ ನಡೆಸಲು ಲಸಿಕೆಯನ್ನು ಹಾಕಿಸಿಕೊಳ್ಳುತ್ತಿರುವುದನ್ನು ಮೇಲೆನ ಪೋಟೋದಲ್ಲಿ ನೋಡಬಹುದು. ಸರ್ಕಾರದ ಲಸಿಕಾ ಅಭಿಯಾನವನ್ನು ಪಡೆದು ಸಾರ್ವಜನಿಕರು ರೋಗಮುಕ್ತ ಜೀವನ ನಡೆಸಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
