ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ಜಾತ್ಯತೀತ ಜನತಾದಳ : ಎಚ್ ಡಿ ದೇವೇಗೌಡ
ಸಿಂಧನೂರು : ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಹಿತ ದೃಷ್ಟಿಗಿಂತ ದೇಶದ ಹಿತದೃಷ್ಟಿ ಮುಖ್ಯವಾಗಿದೆ.ಆದರೆ ಜಾತ್ಯತೀತ ಜನತಾದಳ ಪ್ರಾದೇಶಿಕ ಪಕ್ಷವಾಗಿದ್ದು, ದೇಶಕ್ಕಿಂತ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ತಿಳಿಸಿದರು.
ನಗರದ ಖಾಸಗಿ ಕಾರ್ಯಕ್ರಮದ ನಿಮಿತ್ಯ ಆಗಮಿಸಿ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದು ಮುಸ್ಲಿಂ ಧರ್ಮಗಳ ಮದ್ಯೆ ಕೆಲ ವಿಷ ಜಂತುಗಳು ಕೋಮು ಭಾವನೆಯ ವಿಷ ಬೀಜ ಬಿತ್ತಿ ಜಗಳ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಬೆಳಗಿನ ಜಾವ ಹಿಂದೂ ದೇವಸ್ಥಾನಗಳಲ್ಲಿ ಸುಪ್ರಭಾತ ಮುಸ್ಲಿಂ ಮಸೀದಿಗಳಲ್ಲಿ ಆಜಾನ್ ಹೇಳುವದು ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ,ಆದರೆ ಜನರ ನೆಮ್ಮದಿಯನ್ನು ಕೆಡಿಸಲು ಕೆಲವು ಪಟ್ಟಾಭದ್ರಾ ಹಿತಾಶಕ್ತಿಗಳು ಪ್ರಯತ್ನ ಮಾಡುತ್ತಿವೆ.ಇಷ್ಟು ದಿನ ಇಲ್ಲದೇ ಈಗ ಯಾಕೆ ಸೃಷ್ಟಿಯಾಯಿತು ? ಇದಕ್ಕೆ ಯಾರು ಉತ್ತರ ಕೊಡಬೇಕು ? ಇದನ್ನು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಹೆಚ್ಚು ಪ್ರಚಾರ ಮಾಡಿ ಇಂತಹ ವಾತಾವರಣ ಸೃಷ್ಟಿ ಮಾಡುತ್ತಿದಾರೆ. ಅದರಿಂದ ನಮಗೆ ಏನು ಲಾಭವಿಲ್ಲ ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ.ಈ ಹಿಂದೆ ಮಾಜಿ ಪ್ರಧಾನಿಗಳಾದ ಅಟಲ್ ವಾಜಪೇಯಿ,ನರಸಿಂಹರಾವ್, ಮನಮೋಹನ್ ಸಿಂಗ್ ಆಡಳಿತದಲ್ಲಿ ಇಂತಹ ಯಾವುದೇ ಸಮಸ್ಯ ಇರಲಿಲ್ಲ. ಈಗ ದೇಶದಲ್ಲಿ ಜಾತಿ ಜಾತಿಗಳ ಮದ್ಯ ವಿಷ ಬೀಜ ಬಿತ್ತಿ ಶಾಂತಿ ಕದಡಿಸುವ ಉದ್ದೇಶದಿಂದ ಈ ರೀತಿಯಾಗಿ ಸೃಷ್ಟಿ ಮಾಡುತ್ತಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಬಂದು 8ವರ್ಷಗಳು ಪೂರೈಸಿದರು, ಅವರಿಂದ ಅಶಾಂತಿಯನ್ನು ಬಿಟ್ಟು ಶಾಂತಿಗೆ ಪ್ರಯತ್ನಿಸಬೇಕಾಗಿತ್ತು.ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಪ್ರೀತಿ ವಿಶ್ವಾಸ ದಿಂದ ಬಾಳಿ ಬದುಕನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ರಾಜ್ಯ ಸರ್ಕಾರಕ್ಕೆ ನಮ್ಮ ರಾಜ್ಯದ ನೀರಿನ ಹಕ್ಕನ್ನು ತರಿಸಿಕೊಳ್ಳಲು ಯೋಗ್ಯತೆ ಇಲ್ಲಾ, ಉದಾಹರಣೆ ಮಹದಾಯಿ 13 ಟಿಎಂಸಿ ಟ್ರಿಬಿನ್ಹಲ್ ನಲ್ಲಿ ಅಲರ್ಟ್ ಮಾಡಲಾಗಿದೆ.5 ಟಿಎಂಸಿಗೂ ಹೆಚ್ಚು ನೀರನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆಯೇ ? ಗೋವಾ,ಕರ್ನಾಟಕ,ದೆಹಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ ಇದೇ ತರ ನಾನು 100 ಉದಾಹರಣೆ ಕೊಡುತೇನೆ ನಮಗೆ ಯೋಗ್ಯತೆ ಇದೆಯಾ ? ನಮಲ್ಲಿ ಆ ಶಕ್ತಿ ಇಲ್ಲಾ ಯಾಕೆ ? ಗೋವಾದಲ್ಲಿ ಎರಡು ಸಂಸದರುಗಳಿದ್ದಾರೆ. ಆದರೆ ಜೆಡಿಎಸ್ ಪಕ್ಷ ದಿಂದ ನಮ್ಮ ರಾಜ್ಯಗಳಲ್ಲಿ ನಮ್ಮ ನದಿಯ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಜನತಾ ಜಲಾದಾರೆ ಎಂಬ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಯಶಸ್ವಿಯಾಗಿ ಸಂಚಾರ ಮಾಡಿ ಅಂತಿಮ ಹಂತದ ಕಾರ್ಯಕ್ರಮವನ್ನು ಇದೇ ಮೇ 13 ರಂದು ಬೆಂಗಳೂರಿನ ನೆಲಮಂಗಲದಲ್ಲಿ ಸಮಾರೂಪ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಪಿಎಸ್ಐ ನೇಮಕಾತಿ ಹಗರಣದ ಕುರಿತು ಪತ್ರಕರ್ತರ ಪ್ರಶ್ನೆಗೆ ? ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರ ಬಳಿ ದಾಖಲೆಗಲಿದರೆ ಅವರೇ ಮಾಹಿತಿ ಕೊಡುತ್ತಾರೆ.ನನ್ನ 60 ವರ್ಷದಲ್ಲಿ ರಾಜಕೀಯ ಜೀವನದಲ್ಲಿ ನಾನು ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡುವದಿಲ್ಲವೆಂದರೂ.
ಸಂಸದೆ ಸುಮಲತಾ ಬಿಜೆಪಿಗೆ ಸೇರ್ಪಡೆಯಾಗುವ ಕುರಿತು ಪತ್ರಕರ್ತರ ಪ್ರಶ್ನೆಗೆ ? ಉತ್ತರ ನೀಡಲು ನಿರಾಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಾಸಕ ವೆಂಕಟರಾವ ನಾಡಗೌಡ, ರಾಜ ವೆಂಕಟಪ್ಪ ನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಿ, ಮುಖಂಡರಾದ ಸಿದ್ದು ಬಂಡಿ, ಕರಿಯಮ್ಮ ನಾಯಕ, ಬಸವರಾಜ ನಾಡಗೌಡ, ಶಿವಶಂಕರ ವಕೀಲ, ವೆಂಕಟೇಶ ನಂಜಲದಿನ್ನಿ, ನಾಗೇಶ ಹಂಚಿನಾಳ ಕ್ಯಾಂಪ್ ಸುಮಿತ್ ತಡ್ಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
