;

ಕೂಡ್ಲಿಗಿ: ತಾಲೂಕು ಡಿಎಸ್ಎಸ್ ಸಂಘದ ವತಿಯಿಂದ ಶೋಷಿತರ ಸ್ವಾಭಿಮಾನ ಸಮಾವೇಶ ಪೂರ್ವಭಾವಿ ಸಭೆ…!!”

ಕೂಡ್ಲಿಗಿ: ತಾಲೂಕು ಡಿಎಸ್ಎಸ್ ಸಂಘದ ವತಿಯಿಂದ ಶೋಷಿತರ ಸ್ವಾಭಿಮಾನ ಸಮಾವೇಶ ಪೂರ್ವಭಾವಿ ಸಭೆ

ವಿಜಯನಗರ: ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು. ದಿನಾಂಕ ಮೇ 18ರಂದು ಡಾ ಬಿ.ಆರ್ ಅಂಬೇಡ್ಕರ್ ಭವನ ಮಿಲ್ಲರ್ಸ್ ರಸ್ತೆ ವಸಂತನಗರ ಬೆಂಗಳೂರು ನಲ್ಲಿ ನಡೆಯಲಿರುವ ಡಾ ಬಿಆರ್ ಅಂಬೇಡ್ಕರ್ ರವರ 131ನೇ ಜನ್ಮದಿನದ ಅಂಗವಾಗಿ ಶೋಷಿತರ ಸ್ವಾಭಿಮಾನ ಸಮಾವೇಶ ಕಾರ್ಯಕ್ರಮ ಕುರಿತು ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೂಡ್ಲಿಗಿ ತಾಲೂಕು ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ಕುರಿತು ಮಾತನಾಡಿ ದಲಿತ ಸಂಘರ್ಷ ಸಮಿತಿಯ ತಾಲೂಕು ಪದಾಧಿಕಾರಿಗಳು ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಮತ್ತು ದಲಿತ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್. ದುರುಗೇಶ್ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರಾದ ಗಂಗಣ್ಣ ಟಿ,ಹೊಸಹಳ್ಳಿ ಬಿ.ಟಿ ಗುದ್ದಿ ದುರುಗೇಶ್ , ಹಾಗೂ ಕೂಡ್ಲಿಗಿ ತಾಲೂಕು ಸಂಚಾಲಕರಾದ ಕೆ. ಪರಶುರಾಮ್ ಕಂದಗಲ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕರಾದ ಡಿ.ಎಂ ಈಶ್ವರಪ್ಪ, ಸಿದ್ದಾಪುರ ಕಾನಮಡುಗು ದುರುಗಪ್ಪ, ಮತ್ತು ಕುಮಾರ್ ಮಾಕನಡಕು ಅಜಯ್, ಮೂಗಪ್ಪ, ದುರುಗೇಶ ನಾಗರಹುಣಸೆ, ಪಕೀರಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;