ಕಾರುಣ್ಯ ಸಂಸ್ಥೆಯ ವತಿಯಿಂದ ಪರಿಸರ ಪ್ರೇಮಿ ಸುರೇಶ ನೆಕ್ಕಂಟಿ ಕರುನಾಡ ವೃಕ್ಷ ರಕ್ಷಕ ರಾಜ್ಯ ಪ್ರಶಸ್ತಿಗೆ ಭಾಜನ…
ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ “ವಿಶ್ವ ತಾಯಂದಿರ ದಿನಾಚರಣೆ”ಯ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ಔಷಧಿ ವಿತರಣೆ ಮತ್ತು ಶ್ರೀರಾಮ ನೆಕ್ಕಂಟಿ ಮತ್ತು ಅಜಯ್ ಕರಟೂರಿ ಅಖಿಲಾ ಕರಟೂರಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಆಶ್ರಮಕ್ಕೆ ದೊಡ್ಡಮಟ್ಟದ ಅಡುಗೆ ಪಾತ್ರೆಗಳು ಆಶ್ರಮಕ್ಕೆ ಫ್ಯಾನ್ ಗಳ ಮತ್ತು ಅಗತ್ಯ ವಸ್ತುಗಳ ಕಾರ್ಯಕ್ರಮ ವಿವಿಧ ಗಣ್ಯರ ಹಾಗೂ ಸಮಾಜ ಸೇವಕರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಬಿಸಿಲನಾಡನ್ನು ಹಸಿರ ನಾಡು ಮಾಡಲು ಹೊರಟು “ಗಿಡ ಬೆಳೆಸಿ ನಾಡು ಉಳಿಸಿ” ಎನ್ನುವ ಅಭಿಯಾನದ ಮೂಲಕ ತನ್ನ ಇಡೀ ಜೀವನವನ್ನೇ ಸಮಾಜಸೇವೆ ಪರಿಸರ ಸೇವೆಗಾಗಿ ಮುಡಿಪಾಗಿಟ್ಟಿರುವ ಸಿಂಧನೂರಿನ ಜನರ ಪ್ರೀತಿಗೆ ಪಾತ್ರರಾಗಿರುವ ಸುರೇಶ ನೆಕ್ಕಂಟಿಯವರಿಗೆ ಕಾರುಣ್ಯ ಸಂಸ್ಥೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ “ಕರುನಾಡ ವೃಕ್ಷ ರಕ್ಷಕ” ಎನ್ನುವ ಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ನಿರಂತರ ಅನಾಥ ಜೀವಿಗಳಿಗೆ ಆಸರೆಯಾಗಿ ವಿವಿಧ ಪರ ಸಮಾಜ ಸೇವೆಗಳಲ್ಲಿ ಭಾಗಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ದೀಪಾ ದೀಪಕ್ ಇವರಿಗೆ ಕಾರುಣ್ಯ ಸಂಸ್ಥೆ ವತಿಯಿಂದ “ಕಾರುಣ್ಯ ಆರೋಗ್ಯ ಮಾತೆ” ಎನ್ನುವ ಗೌರವಾನ್ವಿತ ಬಿರುದನ್ನು ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಧನೂರಿನ ಸಮಾಜಸೇವಕರು ಪರಿಸರ ಪ್ರೇಮಿಗಳು ಖ್ಯಾತ ನೇತ್ರ ತಜ್ಞರಾದ ಡಾ.ಚನ್ನನಗೌಡ.ಆರ್.ಪಾಟೀಲ್ ಇಂದು ಸುರೇಶ ನೆಕ್ಕಂಟಿಯವರ ಪರಿಸರ ಕಾರ್ಯಕ್ರಮಗಳನ್ನು ಹಾಗೂ ಸಮಾಜಪರ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಸಮಾಜ ನಮಗೇನು ಮಾಡಿದೆ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎನ್ನುವ ವಾಗ್ದಾನ ದೊಂದಿಗೆ ಸೇವೆ ಮಾಡುವ ಇಂತಹ ಪುಣ್ಯಾತ್ಮ ನಮ್ಮೊಂದಿಗಿರುವುದು ನಮ್ಮ ಅದೃಷ್ಟ ಅದೇ ರೀತಿ ನಮ್ಮಕಾರುಣ್ಯ ಸಂಸ್ಥೆಯು ಕೂಡ ಇಂತಹ ಸಮಾಜಸೇವಕರ ಮಾರ್ಗದರ್ಶನದಿಂದ ಇಂದು ರಾಜ್ಯಾದ್ಯಂತ ಹೆಸರುವಾಸಿಯಾಗಿದೆ ನಮ್ಮ ನಗರದಲ್ಲಿ ಸ್ವಂತ ನೀರಿನ ಟ್ಯಾಂಕರ್ ಅನ್ನು ಖರೀದಿ ಮಾಡಿ ದಿನಾಲು ಗಿಡಗಳಿಗೆ ನೀರುಣಿಸಿ ಸುಮಾರು 4 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಬಿಸಿಲ ನಾಡನ್ನು ಹಸಿರು ನಾಡು ಮಾಡಲು ಹೊರಟ ನೆಕ್ಕಂಟಿ ಕುಟುಂಬ ಹಾಗೂ ಕರಟೂರಿ ಕುಟುಂಬ ಮತ್ತು ಇಂದು ಕಾರುಣ್ಯ ಆಶ್ರಮದಲ್ಲಿನ ಎಲ್ಲಾ ಹಿರಿಯ ಜೀವಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಔಷಧಿಗಳನ್ನು ವಿತರಿಸಿ ಸೊಳ್ಳೆ ಪರದೆಗಳನ್ನು ವಿತರಿಸಿರುವ ಡಾ. ದೀಪಾ ದೀಪಕ್ ಇವರೆಲ್ಲರಿಗೂ ಕಾರುಣ್ಯ ಕುಟುಂಬದಲ್ಲಿ ಆಶ್ರಯ ಪಡೆದಿರುವ ಜೀವಿಗಳ ಆಶೀರ್ವಾದ ಸದಾವಕಾಲ ಇರುತ್ತದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿಶ್ವನಾಥ ಚೌಧರಿ ವಿಜಯ ಕಲರ್ ಲ್ಯಾಬ್ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಶರಣು. ಪಾ.ಹಿರೇಮಠ ಹಿರಿಯ ಪತ್ರಕರ್ತರು ಹಾಗೂ ಗೌರವಾಧ್ಯಕ್ಷರು ಕಾರುಣ್ಯ ಆಶ್ರಮ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಡಾ. ನವೀನ ದಂತವೈದ್ಯರು ಹಾಗೂ ಸ್ಥಾಪಕರು ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಡಾ. ನಾಗವೇಣಿ. ಎಸ್.ಪಾಟೀಲ್ ಸಮಾಜಸೇವಕರು.ಅವಿನಾಶ ದೇಶಪಾಂಡೆ ಸಮಾಜ ಸೇವಕರು. ಅಶೋಕ ನಲ್ಲ ಕಾರ್ಯದರ್ಶಿಗಳುಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್. ವೀರೇಶ ಯಡಿಯೂರ ಮಠ ಕಾರ್ಯಾಧ್ಯಕ್ಷರು ಕಾರುಣ್ಯ ಆಶ್ರಮ. ಬೈಲಪ್ಪ ಪೊಲೀಸ್ ಅಧಿಕಾರಿಗಳು ಕೊಪ್ಪಳ. ಮುರಳಿಕೃಷ್ಣ ಕರಟೂರಿ. ಚನ್ನ ವೀರನಗೌಡ ಸಮಾಜ ಸೇವಕರು. ಶಿವ ಶರಣಯ್ಯಸ್ವಾಮಿ ಸಮಾಜಸೇವಕರು. ಅಶ್ವಿನಿ ಸುರೇಶ ನೆಕ್ಕಂಟಿ. ಸುಜಾತ ಹಿರೇಮಠ ಕಾರುಣ್ಯ ಆಶ್ರಮ. ಚನ್ನಬಸಯ್ಯ ಸ್ವಾಮಿ ಕಾರುಣ್ಯ ಆಶ್ರಮ ಹಾಗೂ ಸುರೇಶ ನೆಕ್ಕಂಟಿ ಅಭಿಮಾನ ಹಾಗೂ ಸ್ನೇಹಬಳಗದವರು ಉಪಸ್ಥಿತರಿದ್ದರು…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
