ಕುರುಕುಂದಾ : ಭೋವಿ (ವಡ್ಡರ ) ಸಂಘ ಗ್ರಾಮ ಘಟಕದ ನೂತನ ಪದಾಧಿಕಾರಿ ಆಯ್ಕೆ.
ಸಿಂಧನೂರು: ತಾಲೂಕಿನ ಕುರುಕುಂದಾ ಗ್ರಾಮದ ಅಂಬೇಡ್ಕರ್ ಭವನದಲ್ಲಿ ತಾಲೂಕ ಅಧ್ಯಕ್ಷ ಲಕ್ಷ್ಮಣ್ ಭೋವಿ, ತಾಲೂಕು ಪದಾಧಿಕಾರಿಗಳು ನೇತೃತ್ವದಲ್ಲಿ ಗ್ರಾಮ ಘಟಕದ ನೂತನ ಪದಾಧಿಕಾರಿ ಆಯ್ಕೆಯ ಕಾರ್ಯಕ್ರಮದಲ್ಲಿ ಶ್ರೀ ಸಿದ್ದರಾಮೇಶ್ವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ದುರುಗಪ್ಪ ಹಂಚಿನಾಳ ಮಾತನಾಡಿ ನಮ್ಮ ಭೋವಿ ಸಮಾಜದವರು ಆರ್ಥಿಕವಾಗಿ ,ಶೈಕ್ಷಣಿಕ ವಂಚಿತರಾಗಿದ್ದು ತೀರಾ ಹಿಂದುಳಿದ ಸಮಾಜವಾಗಿದೆ.ಬಡತನದಿಂದ ತುಳಿತಕ್ಕೆ ಒಳಗಾದವರು ಸರಕಾರಿ ಸೌಲಭ್ಯಗಳನ್ನು ವಂಚಿತರಿಗೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವುದರ ಜೊತೆಗೆ ಮುಂದಿನ ಪೀಳಿಗೆಯ ನಮ್ಮಂತೆ ಬಡತನ ನಮ್ಮ ಮಕ್ಕಳಿಗೆ ಬೇಡ ಅವರಿಗೆ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿ ನಮ್ಮ ಕಸುಬು ನಮ್ಮಗೆ ಸಾಕು
ಸಮಾಜದ ಏರುಪೇರುಗಳು ಸಹಜ ಯಾರನ್ನು ಶತ್ರುಗಳಂತೆ ಕಾಣಬೇಡಿ ಸಮಾಜದ ಏಳಿಗೆಗಾಗಿ ಸೇರಿ ಶ್ರಮಿಸೋಣ ಎಂದು ಹೇಳಿದರು.
ನಂತರ ಭೋವಿ ಸಮಾಜದ ನೂತನ ಪದಾಧಿಕಾರಿಗಳಾದ ಕುರುಕುಂದಾ ಗ್ರಾಮ ಘಟಕದ ಅಧ್ಯಕ್ಷರಾಗಿ ದುರುಗಪ್ಪ ಕುಷ್ಟಗಿ ,ಗೌರವಾಧ್ಯಕ್ಷರಾಗಿ ತಿಮ್ಮಣ್ಣ ಬಂಡಿ,ಕಾರ್ಯಾಧ್ಯಕ್ಷರು ಹನುಮೇಶ ತಿಡಿಗೋಳ,ಉಪಾಧ್ಯಕ್ಷ ಆಮರೇಶ ಕ್ಯಾಡ್ಯಾವು,ಪ್ರಧಾನ ಕಾರ್ಯದರ್ಶಿ ಯಮನೂರಪ್ಪ ನಂದಿಹಳ್ಳಿ,ಸಹಕಾರ್ಯದರ್ಶಿ ನಾಗರಾಜ ಕುಷ್ಟಗಿ ,ಖಜಾಂಚಿ ರಮೇಶ ಉಮಲೂಟಿ,ಸಂಘಟನಾ ಕಾರರು ಮುದಿಯಪ್ಪ ,ಹಂಚಿನಾಳ ರಮೇಶ,ಸದಸ್ಯರಾದ ಮಂಜುನಾಥ ಕ್ಯಾಡ್ಯಾವು,ದುರುಗಪ್ಪ ತಲೆಖಾನ,ನಾಗಪ್ಪ ಕೋಳಬಾಳ,ಯಮನೂರಪ್ಪ ಗುಡದಮ್ಮ ಕ್ಯಾಂಪ್ ,ರಾಜೇಶ್ ಎಸ್.ಹಾಗೂ ಸಮಾಜದ ಹಿರಿಯರು ,ಯುವಕರು ಸೇರಿದಂತೆ ಅನೇಕ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
