ಹರಪನಹಳ್ಳಿ: ಪಟ್ಟಣದ ಬಿಇಡ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯಾ ಪರಿಷತ್ ನ 108ನೇ ಸಂಸ್ಥಾಪನ ದಿನಾಚಹಾರಣೆಯನ್ನು ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು……….. ಹರಪನಹಳ್ಳಿ ಪಟ್ಟಣದ ತೆಗ್ಗಿನಮಠ ಸಂಸ್ಥೆಯ ಕಟ್ಟಿ ಸೇತುರಾಮಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ನ 108ನೇ ಸಂಸ್ಥಾಪನ ದಿನಾಚಹಾರಣೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಕನ್ನಡ ಅನ್ನ ಜೀವ ಹಾಗೂ ಭಾವ ಭಾಷೆಯಾಗಬೇಕು, ಕನ್ನಡ ಕೇವಲ ಸಂಗೀತ, ಸಾಂಸ್ಕೃತಿಕ ಹಾಗೂ ಸಮ್ಮೇಳನದಂತಹ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು ಎಂದು ಪುರಸಭೆಯ ಅದ್ಯಕ್ಷರಾದ ಮಂಜುನಾಥ್ ಇಜಾಂತಕರ್ ಅವರು ಹೇಳಿದರು. ಕನ್ನಡವನ್ನು ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಸರ್ವತೋಮುಖವಾಗಿ ಬೆಳಸಿಕೊಳ್ಳಬೇಕು ಎಂದರು. ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ಜಲ್ಲಾದ್ಯಕ್ಷರಾದ ಬಸವರಾಜ ಸಂಘಪ್ಪನವರು ಮಾತನಾಡಿ ಜಾಗತೀಕರಣದ ಪ್ರಭಾವದಿಂದ ಅನೇಕ ಶಾಲೆಗಳು ಮುಚ್ಚುವ ಸ್ಥಿತಿ ಎದುರಾಗಿದೆ,ಈ ನಿಟ್ಟಿನಲ್ಲಿ ನಮ್ಮ ಬಾಷೆ,ನೆಲ,ಜಲ,ಪ್ರೀತಿಸಿ ಅವುಗಳನ್ನು ಪ್ರತಿಯೊಬ್ಬರು ಉಳಿಸಲು ಮುಂದಾಗಬೇಕಿದೆ. ಎಂದು ಹೇಳಿದರು.ಮೈಸೂರು ರಾಜರ ದೂರದೃಷ್ಠಿಯ ಫಲವೇ ಇಂದು ಕನ್ನಡ ಸಾಹಿತ್ಯಾ ಪರಿಷತ್ ಹೆಮ್ಮರವಾಗಿ ಬೆಳೆದು ಬಂದಿದೆ ಇಲ್ಲಿಯವರೆಗೆ ಸುಮಾರು 3 ಲಕ್ಷಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದಿ ಅಖಿಲ ಭಾರತದಂತಹ ಸಮ್ಮೇಳನವನ್ನುನಡೆಸುವುದು ,ದೇಶವಿದೇಶಗಳಲ್ಲಿ ಕನ್ನಡದ ಇತಿಹಾಸವನ್ನು ಸೃಷ್ಠಿಸಿದ ಎಂದರು.
ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದೆ ಎಂದು ಪ್ರೋ,ಹೆಚ್,ಕೊಟ್ರೇಶ್ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚರ್ಯರು ಆದ ಟಿ,ಎಂ,ರಾಜಶೇಖರ ಮಾತನಾಡಿ ಕನ್ನಡಕ್ಕೆ ತನ್ನದೆ ಆದಾ ಇತಿಹಾಸವಿದ್ದು ,ಸಾಹಿತ್ಯ ಸಾಂಸೃತಿಕ,ಉಡಿಗೆ, ತೊಡಿಗೆಯಲ್ಲಿ ಜಗತ್ತಿನಲ್ಲಿಯೇ ಪ್ರಸಿದ್ದಿಯನ್ನೆ ಪಡೆದಿರುವುದು ಹೆಮ್ಮೆಯ ವಿಷಯ ಹಾಗೂ ಭಾರತೀಯ ಮೂಲನಿವಾಸಿ ದ್ರಾವಿಡರಾದ ನಾವುಗಳು ಭಾಷೆ,ನಡೆ,ನುಡಿ,ಸಂಸೃತಿಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದೇವೆ ಎಂದು ಅವರು ನಡೆದು ಬಂದ ದಾರಿಯನ್ನು ಸ್ಮರಿಸಿದರು.
ಕನ್ನಡ ಸಾಹಿತ್ಯಾ ಪರಿಷತ್ ನ ಅದ್ಯಕ್ಷರಾದ ಕೆ,ಉಚ್ಚೆಂಗೆಪ್ಪ ಅವರ ಅದ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಕನ್ನಡ ಸಾಹಿತ್ಯಾ ಪರಿಷತ್ತು ನಾದಿನಾದ್ಯಂತ ನಾಡು,ನುಡಿ,ನೆಲ ,ಜಲ, ಸಂರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುವುದರೂಂದಿಗೆ ಕನ್ನಡ ಸಾಹಿತ್ಯಾ ಪರಿಷತ್ತು ದಿಟ್ಟ ಹೆಜ್ಜೆ ಇಟ್ಟಿದೆ,ಈ ನಿಟ್ಟಿನಲ್ಲಿ ತಾವುಗಳು ಸಹಾ ಕಸಾಪ ಅಜೀವಾ ಸದಸ್ಯತ್ವವನ್ನುಪಡೆದುಕೊಂಡು . ಕನ್ನಡಪರ ಅನೇಕ ಮಹಾನೇಯರು ಹೋರಾಟಗಳನ್ನು ಮಾಡಿದ್ದಾರೆ ಅವರಂತೆಯೇ ನಾವುಗಳು ಸಹಾ ಹೋರಾಟಗಳಲ್ಲಿ ಭಾಗವಹಿಸಬೇಕು ಎಂದರು. ಟಿಎಂಎಇ ಸಂಸ್ಥೆಯ ಕಾರ್ಯದರ್ಶಿ ಟಿ,ಎಂ, ಚಂದ್ರಶೇಕರಯ್ಯ ಶಿಕ್ಣಣ ಕ್ಷೇತ್ರದಲ್ಲಿ .ಅಲದಹಳ್ಳಿ ಷಣ್ಮುಖಪ್ಪ ಕೃಷಿ ಕ್ಷೇತ್ರದಲ್ಲಿ ಹಾಗೂ ಕೆ,ಎಸ್ ವೀರಭದ್ರಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಸ್ವೀಕರಿಸಿ ಮಾತನಾದಿದರು. ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಆರ್ ,ಪದ್ಮರಾಜ್ ಜೈನ್. ಜಿ.ಮಹಾದೇವಪ್ಪ. ಎಸ್. ಮಕಬುಲ್ ಭಾಷ. ಪಿ.ಕರಿಬಸಪ್ಪ ಸಾರಿಗೆ ನಿರ್ವಾಹಕ ನಾಗರಾಜ, ಉಪನ್ಯಾಸಕ ಟಿ,ಎಚ್,ಗೀರಿಶ್ ಸಂತೋಷ್,ಕೆ,ಎಂ,ಲತಾ , ಬಸವಾಜ್ ಬಂಡಾರಿ, ಇಸ್ಮಾಹಿಲ್ ಎಲಿಗಾರ್ ಸೇರಿದಂತೆ ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
