ಮೂಲ ಸೌಕರ್ಯ ಇಲ್ಲದೆ ಜಾನುವಾರು,ರೈತರು ಪರದಾಟ…!!!

ಮೂಲ ಸೌಕರ್ಯ ಇಲ್ಲದೆ ಜಾನುವಾರು,ರೈತರು ಪರದಾಟ


ಮಹಾಲಿಂಗಪುರ ಕೃಷಿ ಮಾರುಕಟ್ಟೆ ಅಂತರಾಜ್ಯಮಟ್ಟದಲ್ಲಿ ತನ್ನದೆಯಾದ ಹೆಸರು ಮಾಡಿದೆ ಆದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಹೆಸರು ಮರಿಚಿಕೆಯಾಗುಂತಾಗಿದೆ ಕಾರಣ ಪ್ರತಿ ವರ್ಷ ಬಸವ ಜಯಂತಿಯಿಂದ ಒಂದು ವಾರದಗಳ ಕಾಲ ಜಾನುವಾರುಗಳ ಜಾತ್ರೆ ನಡೆಯುತ್ತೆ ಕಳೆದ ಮೂರು ನಾಲ್ಕು ವರ್ಷದಿಂದ ಕೋರೊನಾ ಮಹಾಮಾರಿಯಿಂದ ತಟಸ್ಥವಾಗಿದ್ದ ಜಾತ್ರೆ ಈ ವರ್ಷ ಅದ್ದೂರಿಯಿಂದ ಆಚರಿಸಿ ಜಾನುವಾರಗಳ ವ್ಯಾಪಾರ ವಹಿವಾಟು ನಡೆಸುವ ಖುಷಿಯಿಂದ ಅಂತರ ಜಿಲ್ಲೆಗಳಿಂದ ಜಾನುವಾರುಗಳನ್ನು ತಂದ ರೈತರು ಇದೀಗ ಇಲ್ಲಿನ ಕೃಷಿ ಮಾರುಕಟ್ಟೆ ಅಧಿಕಾರಿಗಳಿಂದ ಗೋಳಾಡುವ ಸ್ಥಿತಿ ಉಂಟಾಗಿದೆ ವಾರವಿಡಿ ಇಲ್ಲಿ ಜಾನುವಾರಗಳ ವ್ಯಾಪಾರ ವಹಿವಾಟು ನಡೆಯುತ್ತವೆ ಈ ಕಾರಣದಿಂದ ರೈತರು ತಾತ್ಕಾಲಿಕ ವಾಸ್ತವ್ಯ ಹೂಡಿ ವಹಿವಾಟು ನಡೆಸುತ್ತಾರೆ.

ಆದರೆ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳೊಂದಿಗೆ ಬಂದಿರು ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಜಾತ್ರೆಯ ಮುಂಚಿತವಾಗಿ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕಾಗಿತ್ತು ಆದರೆ ದುರಾದೃಷ್ಟ ಕುಡಿಯುವ ನೀರು.ಮ, ರಾತ್ರಿ ಸಮಯದಲ್ಲಿ ಕರೆಂಟ್, ರೈತರಿಗೆ ವಸತಿ ವ್ಯವಸ್ಥೆ ಹೀಗೆ ಹಲವಾರು ಸೌಲಭ್ಯ ಒದಗಿಸದೆ ಇರುವ ಅಧಿಕಾರಿಗಳ ವಿರುದ್ಧ ರೈತರು ಮತ್ತು ಜಾನುವಾರು ವ್ಯಾಪಾರಸ್ಥರು ಕೃಷಿ ಇಲಾಖೆ ವಿರುದ್ಧ ಹೀಡಿಶಾಪ ಹಾಕುತ್ತಿದ್ದಾರೆ ಕತ್ತಲಲ್ಲಿ ಊಟ ಮಾಡುವಾಗ ಏನು ಕಾಣದೆ ಹುಳಾ ಹುಪ್ಪಡಿ ಬಂದು ತಿನ್ನುವ ಊಟದಲ್ಲಿ ಬಿದ್ದರು ಕಾಣದೆ ಹಾಗೆ ತಿನ್ನುತ್ತಿರು ದೃಶ್ಯಗಳು ಎಂತವರ ಮನ ಕುಲಕುವಂತೆ ಮಾಡುತ್ತಿದೆ ಕೂಡಲೇ ಸರ್ಕಾರ ಸಂಭಂದಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಇಲ್ಲನ ಜಾನುವಾರು ಮಾರುಕಟ್ಟೆಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend