;

ರಸ್ತೆ ಪಕ್ಕದಲ್ಲಿರುವ ಗಿಡಗಳನ್ನು ರಕ್ಷಣೆ ಮಾಡಿದ – ಅಮರೇಗೌಡ ಮಲ್ಲಾಪೂರು…!!!

ರಸ್ತೆ ಪಕ್ಕದಲ್ಲಿರುವ ಗಿಡಗಳನ್ನು ರಕ್ಷಣೆ ಮಾಡಿ- ಅಮರೇಗೌಡ ಮಲ್ಲಾಪೂರು.

ಸಿಂಧನೂರು : ರೈತ ಬಾಂಧವರು ತಮ್ಮ ಹೊಲಗಳಲ್ಲಿ ಭತ್ತದ ಹುಲ್ಲು ಅಥವಾ ಕಸವನ್ನು ಸುಡುವಾಗ ‌‌ರಸ್ತೆ ಪಕ್ಕದಲ್ಲಿರುವ ಗಿಡಗಳನ್ನು ರಕ್ಷಣೆ ಮಾಡಿ ಎಂದು ವನಸಿರಿ ಪೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರು ರೈತರಲ್ಲಿ ಮನವಿ ಮಾಡಿದರು.

ಇಂದು ಮಾನ್ವಿ ತಾಲೂಕಿನ ಚಿಕಲಪರ್ವಿ ಗ್ರಾಮಕ್ಕೆ ಹೋಗುವ ರಸ್ತೆಯ ಉದ್ದಕ್ಕೂ ಸುಡುತ್ತಿರುವ ಗಿಡಗಳನ್ನು ನಂದಿಸಿ ವನಸಿರಿ ಅಮರೇಗೌಡ ಮಲ್ಲಾಪೂರ ಮಾತನಾಡಿದರು. ಗಿಡಗಳು ದಾರಿಯಲ್ಲಿ ಹೋಗುವಾಗ ಬಿಸಿಲಿನ ಬೇಗೆಯಿಂದ ನೆರಳು ಪಡೆಯಲು ಸಹಕಾರಿಯಾಗುತ್ತವೆ. ದಯವಿಟ್ಟು ಯಾರೂ ಕೂಡ ಸಸಿಗಳನ್ನ ಸುಡಬಾರದು ಮತ್ತು ಕಡಿಯಬಾರದು ಎಂದು ಸಂರಕ್ಷಣೆ ಮತ್ತು ಜಾಗೃತಿ ಮೂಡಿಸಿದರು,

ಇಂದು ಮಾನ್ವಿ ತಾಲೂಕಿನ ಚಿಕಲಪರ್ವಿ ಗ್ರಾಮಕ್ಕೆ ಹೋಗುವ ರಸ್ತೆಯ ಉದ್ದಕ್ಕೂ ಸಸಿಗಳನ್ನು ನೇಡಲಾಗಿದ್ದು, ಅಲ್ಲಿಯ ಕೆಲ ವ್ಯಕ್ತಿಗಳು ನೆಟ್ಟ ಗಿಡಗಳನ್ನು ಲೆಕ್ಕಿಸದೇ ದಾರಿಯುದ್ದಕ್ಕೂ ಬೆಂಕಿಹಚ್ಚಿ ಸುಡಲಾಗಿದೆ. ಇದರಿಂದ ದಾರಿಯಲ್ಲಿರುವ ಗಿಡಗಳಿಗೆ ಬೆಂಕಿ ತಗುಲಿದ್ದು, ಅಲ್ಲಿಗೆ ಸುದ್ದಿ ತಿಳಿದ ತಕ್ಷಣ ವನಸಿರಿ ತಂಡದ ಅದ್ಯಕ್ಷರು ಮತ್ತು ಅವರ ತಂಡದ ಸದಸ್ಯರು ಆಗಮಿಸಿ ಗ್ರಾಮಸ್ಥರ ಜೊತೆಗೂಡಿ ಅಲ್ಲಿಯೇ ಸಮೀಪದ ಕೆರೆಯಲ್ಲಿರುವ ನೀರು ಹೊತ್ತು ತಂದು ಸಸಿಗಳಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದರು.

ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ತಾಲೂಕು ಅರಣ್ಯಾಧಿಕಾರಿಗಳಿಗೆ ಪೋನ್ ಮೂಲಕ ಸಂಪರ್ಕಿಸಿ ಬೆಂಕಿ ಹಚ್ಚಿರುವುದನ್ನು ಅವರ ಗಮನಕ್ಕೆ ತಂದರು.ಮನವಿಗೆ ಸ್ಪಂದಿಸಿ ತಕ್ಷಣ ದೌಡಾಯಿಸಿದ ರಾಜೇಶ ನಾಯಕ ಅರಣ್ಯ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ರಸ್ತೆ ಪಕ್ಕದಲ್ಲಿ ನೆಡಲಾದ ಸಸಿಗಳನ್ನು ನಾವೆಲ್ಲರೂ ಕಾಪಾಡಬೇಕು ಅವುಗಳನ್ನ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಾಗೃತಿ ಮೂಡಿಸಿದರು. ಹಾಗೂ ಈ ಘಟನೆ ಬಗ್ಗೆ ತಕ್ಷಣ ನಮ್ಮ ಗಮನಕ್ಕೆ ತಂದ ವನಸಿರಿ ಫೌಂಡೇಶನ್ ಅದ್ಯಕ್ಷರಿಗೆ ಮತ್ತು ಸದಸ್ಯರಿಗೆ ದನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅರಣ್ಯ ಅಧಿಕಾರಿಗಳು, ಪರಿಸರ ಪ್ರೇಮಿ ರವಿಗೌಡ., ವನಸಿರಿ ಫೌಂಡೇಶನ್ ಸದಸ್ಯ ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಮತ್ತು ಪರಿಸರ ಪ್ರೇಮಿ ಶರಣಬಸವ,ಗಿಡಗಳ ಕಾವಲುಗಾರ,ಗ್ರಾಮದ ರೈತರು ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;