ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನ ಬರ್ಬರ ಕೊಲೆ
ಜಮಖಂಡಿ ಸಮೀಪದ ಕಡಪಟ್ಟಿ ಗ್ರಾಮದ ಬಳಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ದಿನಾಂಕ 29/04/2022 ಶುಕ್ರವಾರ ರಾತ್ರಿ ನಡೆದಿದ್ದು ಮರುದಿನ ಬೆಳಿಗ್ಗೆ ಬೆಳಕಿಗೆ ಬಂದಿದೆ .ರಾತ್ರಿ ಸಮಯದಲ್ಲಿ ಬಾರ್ ಒಂದರಲ್ಲಿ ಮಧ್ಯ ಸೇವನೆ ಮಾಡಲು ಹೋದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದ ವಿಷಯಕ್ಕೆ ಸಂಬಂಧಿಸಿ ಘಟನೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಕೊಲೆಯಾದ ವ್ಯಕ್ತಿ ರಮೇಶ ಭೀಮಪ್ಪ ಕವಟಗಿ ಮೂಲತಃ ಜಮಖಂಡಿ ತಾಲ್ಲೂಕಿನ ಮಧುರಖಂಡಿ ಗ್ರಾಮದ ನಿವಾಸಿಯಾಗಿದ್ದು ಮೂರ್ತಿಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದ ಎನ್ನಲಾಗುತ್ತಿದೆ.
ಕೊಲೆಯಾದ ವ್ಯಕ್ತಿ ಮೈಮೇಲೆ ಯಾವುದೇ ಬಟ್ಟೆಗಳು ಇಲ್ಲದೆ ನಗ್ನ ಸ್ಥಿತಿಯಲ್ಲಿ ತಲೆಗೆ ಕಲ್ಲಿನಿಂದ ಜಜ್ಜಿ ಕಬ್ಬಿನ ಗದ್ದೆಯ ಬದಿಯಲ್ಲಿ ಶವ ಪತ್ತೆಯಾಗಿದೆ.

ಕೊಲೆಯಾದ ವ್ಯಕ್ತಿಯ ತಲೆಯ ಮೇಲೆ ಕಲ್ಲಿನಿಂದ ಜೋರಾಗಿ ಜಜ್ಜಿದರಿಂದ ಬಲವಾಗಿ ಏಟು ಬಿದ್ದು ವ್ಯಕ್ತಿ ಸಾವನ್ನಪ್ಪಿದಾನೆ. ಕೊಲೆಯನ್ನು ಯಾವ ಉದ್ದೇಶಕ್ಕಾಗಿ ಮಾಡಲಾಗಿದೆ ಎಂದು ನಿಖರವಾದ ಮಾಹಿತಿಗಾಗಿ ಸಿಪಿಐ ಐ.ಎಮ್.ಮಠಪತಿ ಅವರು ಹಾಗೂ ಶಹರ ಠಾಣೆಯ ಪಿ.ಎಸ್.ಐ ಬಸವರಾಜ ಕೊಣ್ಣೂರ. ಗ್ರಾಮೀಣ ಠಾಣೆಯ ಪಿ.ಎಸ್.ಐ.ವಸಂತ ಬಂಡಗಾರ ಮತ್ತು ಸಿಬ್ಬಂದಿಗಳು ಆರೋಪಿಗಳ ಪತ್ತೆಗೆ ತನಿಖೆಯನ್ನು ಮುಂದುವರಿಸಿದ್ದಾರೆ.
ಬಾರ ಒಂದರಲ್ಲಿ ನಡೆದ ಗಲಾಟೆ ಘಟನೆಯ ಕುರಿತು ಸಿಸಿ ಟಿವಿಯಲ್ಲಿ ಸೆರೆಯಾದ ಚಿತ್ರೀಕರಣವನ್ನು ಸಿಪಿಐ ಐ.ಎಮ್ .ಮಠಪತಿ ಅವರು ಪರಿಶೀಲನೆ ಮಾಡಿ ತನಿಖೆಯನ್ನು ಮುಂದುವರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ..

ವರದಿ.
ಬಸವರಾಜ ನಂದೆಪ್ಪನವರ
ಜಮಖಂಡಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
