;

ಶಾಂತಿ ರೀತಿಯ ರಂಜಾನ ಆಚರಣೆ ಮಾಡಿ – ತಹಸೀಲ್ದಾರ ಮಂಜುನಾಥ…!!!

ಶಾಂತಿ ರೀತಿಯ ರಂಜಾನ ಆಚರಣೆ ಮಾಡಿ – ತಹಸೀಲ್ದಾರ ಮಂಜುನಾಥ.

ಸಿಂಧನೂರ : ಏ 30 ಯಾವುದೇ ರೀತಿಯ ಗಲಾಟೆಗೆ ಅವಕಾಶ ಕೊಡದೆ ಶಾಂತಿಯುತವಾಗಿ ರಂಜಾನ ಹಬ್ಬವನ್ನು ಆಚರಿಸಬೇಕು ಎಂದು ತಹಸೀಲ್ದಾರ ಮಂಜುನಾಥ ಬೋಗಾವತಿ ಅವರು ಮುಸ್ಲಿಂ ಸಮಾಜದ ಮುಖಂಡರಿಗೆ ಹೇಳಿದರು.
ತಹಸೀಲ್ದಾರ ಕಚೇರಿಯಲ್ಲಿ ಕರೆದ ರಂಜಾನ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಳ ಹಾಗೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು, ಬಿಸಿಲು ಹೆಚ್ಚು ಇರುವ ಕಾರಣ ದಿಂದ ಬೇಗನೆ ಪ್ರಾರ್ಥನೆ ಮುಗಿಸಿ ಮನೆಗೆ ಹೋಗಬೇಕು ಎಂದು ಮನವಿ ಮಾಡಿಕೊಂಡರು.
ಈದ್ಗಾ ಮೈದಾನವನ್ನು ಸ್ವಚ್ಛ ಮಾಡಿ ಕುಡಿಯುವ ನೀರು ಶ್ಯಾಮಿಯಾನ, ಮ್ಯಾಟ್, ಆಸನಗಳ ವ್ಯವಸ್ಥೆ ಮೈಕ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯನ್ನು ತಾಲೂಕಾಡಳಿತದಿಂದ ನಮ್ಮ ಸಿಬ್ಬಂದಿಗಳು ಅನುಕೂಲ ಮಾಡಿಕೊಡುತ್ತಾರೆ ಎಂದರು.
ಬೆಳಗ್ಗೆ 9 ಗಂಟೆಗೆ ಎಲ್ಲರೂ ಈದ್ಗಾ ಮೈದಾನದಲ್ಲಿ ಬಂಧು ನಮಾಜ ಮುಗಿಸಿ ಮನೆಗೆ ತೆರಳಬೇಕು ಸಾಧ್ಯವಾದರೆ ನಾವು ಸಿಹಿಯಾದ ತಿನಿಸುಗಳನ್ನು ನಮಾಜಗೆ ಬಂದವರಿಗೆ ವಿತರಿಸಲಾಗುತ್ತದೆ ಶಾಂತಿಗೆ ಭಂಗ ಯಾಗದಂತೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ತಹಸೀಲ್ದಾರ ಮಂಜುನಾಥ ಬೋಗಾವತಿ ಹೇಳಿದರು.
ಸಭೆಯಲ್ಲಿ ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರ, ಮುಸ್ಲಿಂ ಸಮುದಾಯದ ಮುಖಂಡ ರಾದ ಹುಸೇನಸಾಬ, ಮೈನುದ್ದಿನ ಎತಮಾರಿ, ಆಸೀಪ್, ಜಾಕೀರ, ಖಾಜಿ ಜಾವೀದ, ಮಹಿಬೂಬಖಾನ, ಮಹ್ಮದ ಖಾಲಿದ್, ಅಲ್ಲಾಭಕ್ಸಿ, ಮುರ್ತಜಾ,ಖಾಜಿ ಅಬ್ದುಲ್ ವಸೀಮ ಆಹ್ಮದ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;