ಜಾತ್ಯತೀತ ಜನತಾದಳದ ಜನತಾ ಜಲಧಾರೆ ಪೂರ್ವಭಾವಿ ಸಭೆ
ಸಿರುಗುಪ್ಪ ನಗರದ ಗುಂಡೂರಾವ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರಾದ ಮೀನಹಳ್ಳಿ ತಾಯಣ್ಣ ಇವರ ನೇತೃತ್ವದಲ್ಲಿ ತಾಲೂಕ ಅಧ್ಯಕ್ಷರಾದ ಶಿವನಾರಾಯಣ ಇವರ ಸಮ್ಮುಖದಲ್ಲಿ ಹಾಗೂ
ವಿಧಾನಸಭಾ ಆಕಾಂಕ್ಷಿ ಯಾದ ಪರಮೇಶ್ವರ್ ನಾಯಕ್ ಇವರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಮುಖ ನದಿಗಳಾದ ಗೋದಾವರಿ, ಕೃಷ್ಣಾ, ಕಾವೇರಿ,ಭೀಮಾ, ಕಾರಂಜಿ,ಮುಲ್ಲಾಮಾರಿ, ಅಮರ್ಜಾ, ಬೆನ್ನೆತೊರ, ಘಟಪ್ರಭಾ, ಮಲಪ್ರಭಾ,ಮಹಾದಾಯಿ,ತುಂಗಭದ್ರೆ,ಹೇಮಾವತಿ, ಕಬಿನಿ, ಹಾರಂಗಿ,ಕಾಳಿ, ಅಘನಾಶಿನಿ,ಶರಾವತಿ, ಚಕ್ರಾ,ವಾರಾಹಿ, ಮತ್ತು ನೇತ್ರಾವತಿ ಮುಂತಾದ ಪ್ರಮುಖ ನದಿಗಳು ಹುಟ್ಟಿ ಹರಿಯುತ್ತವೆ,ಇವುಗಳಲ್ಲಿ ಕೆಲವೊಂದು ಅಂತರ್ ರಾಜ್ಯ ಜಲ ವಿವಾದ ಸುಳಿಯಲ್ಲಿ ಸಿಕ್ಕಿ ರಾಜ್ಯಕ್ಕೆ ಅನ್ಯಾಯವಾಗಿದೆ ಮತ್ತು ಕೆಲವೊಂದು ಜಲವಿವಾದಗಳು ಸುಪ್ರೀಂಕೋರ್ಟ್ನಲ್ಲಿ ನೆರೆರಾಜ್ಯ ಕಾಲುವೆಗಳು ವಿತರಣಾ ನಾಲೆಗಳನ್ನು ಪುನಃಚೇತನ ಮತ್ತು ಆಧುನಿಕರಣಗೊಳಿ ಸದೆ ರೈತರಿಗೆ ಸದುಪಯೋಗ ಪಡೆಯಲು ಆಗಿಲ್ಲ ಆದ್ದರಿಂದ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಲು ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸದ್ಬಳಕೆ ಮಾಡಿ ಕರ್ನಾಟಕ ಜನತೆಗೆ ಜಲ ಶಾಮಲಾ ಸಸ್ಯಶಾಮಲ ವಾಗಿಸಲು ಜನತಾ ಜಲಧಾರೆ ರಥದ ಮುಖಾಂತರ ಎಲ್ಲಾ ನದಿಗಳ ನೀರಿನ ಕುಂಭಗಳನ್ನು ಹೊತ್ತು ಸಿರುಗುಪ್ಪದಲ್ಲಿ ಸುಮಾರು 50 ಮಹಿಳೆಯರು ಟಿಪ್ಪು ಸುಲ್ತಾನ್ ಸರ್ಕಲ್ ನಿಂದ ಕಮ್ಮವಾರಿ ಕಲ್ಯಾಣಮಂಟಪ ದವರೆಗೆ ಮೆರವಣಿಗೆಯ ಮುಖಾಂತರ ರೈತರಿಗೆ ನ್ಯಾಯ ಕೊಡಿಸಲುಜಾತ್ಯಾತೀತ ಜನತಾದಳ ಕಟಿಬದ್ಧವಾಗಿದೆ ಎಂದು ಪತ್ರಕರ್ತರ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷರು ಕಾರ್ಯಕರ್ತರೊಂದಿಗೆ ಚರ್ಚಿಸಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಸಿರುಗುಪ್ಪ ತಾಲೂಕಿನ ಜೆಡಿಎಸ್ ಪಕ್ಷದ ನಾಯಕರುಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ವಿರೇಶ್, ಎಚ್, ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
