ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಜಮೀನಿನಲ್ಲಿ ಅನಧಿಕೃತ ಸಾಗುವಳಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಎಮ್.ಗಂಗಾಧರ್ ಅಗ್ರಹ :
ಸಿಂಧನೂರು : ಏಪ್ರಿಲ್ 21.ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ 8ಎಕರೆ, 21ಗುಂಟೆ ಜಮೀನು ಶಿವನಗೌಡ ತಂದೆ ಹನಮಪ್ಪ ಗೋರೆಬಾಳ ಎಂಬುವವರು, ಅನದಿಕೃತವಾಗಿ ಸಾಗುವಳಿ ಮಾಡುತ್ತಿದ್ದು ಕಾನೂನಿಗೆ ವಿರುದ್ಧವಾಗಿದೆ ಕಾರಣ ಪಂಚನಾಮೆ ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ರಾಜ್ಯ ಸಂಚಾಲಕ ಎಮ್. ಗಂಗಾಧರ್ ರವರು ಶಿರಸ್ತೇದಾರ ಮುಖಾಂತರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
2016-17ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಅನ್ವಯ ವಸತಿ ಶಾಲೆಗಳು ಇಲ್ಲದ ಹೋಬಳಿಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಮಂಜೂರು ಮಾಡಲಾಗಿದ್ದು, ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿಯು ಅವಶ್ಯಕತೆ ಇರುವುದರಿಂದ ಸರ್ಕಾರಿ ಭೂಮಿ ಇಲ್ಲದಿರುವ ಕಾರಣದಿಂದ ಖಾಸಗಿಯಾಗಿ ಶಿವನಗೌಡ ತಂದೆ ಹನಮಪ್ಪ ಇವರಿಂದ ಗೋರೆಬಾಳ ಗ್ರಾಮದ ಭೂಮಿ ಸರ್ವೆ ನಂ. 22/01 ಕ್ಷೇತ್ರ :08 ಎಕರೆ 21ಗುಂಟೆಯನ್ನು ಅಗಸ್ಟ್ 21-2018ನೇ ಇಸವಿಯಲ್ಲಿ ರಾಜ್ಯಪಾಲರು ಕರ್ನಾಟಕ ಸರ್ಕಾರ ಬೆಂಗಳೂರು ರವರ ಪರವಾಗಿ ಪ್ರಾಚಾರ್ಯರು ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ ಅವರ ಹೆಸರಿಗೆ ಖರೀದಿ ಪತ್ರ ಆಗಿದ್ದು ಷೆಡ್ಯೂಲ್ನಲ್ಲಿ ವಿವರಿಸಿದ ಭೂಮಿಯನ್ನು ರೂ. (ಒಂದು ಕೋಟಿ ಎಂಬತ್ತಾರು ಲಕ್ಷ ತೊಂಬತ್ತಾರು ಸಾವಿರ ) ರೂಪಾಯಿ ಸಂಪೂರ್ಣ ಖರೀದಿ ಹಣವನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ರಾಯಚೂರು ಮತ್ತು ಪ್ರಾಚಾರ್ಯರು ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ ಗೋರೆಬಾಳ ಹೆಸರಿನಲ್ಲಿ ದಿ. ಏಪ್ರಿಲ್ 16 ರಂದು ಹಣ ಚುಕ್ತಾ ಮಾಡಲಾಗಿದೆ. ಅಂದಿನಿಂದ ಷೆಡ್ಯೂಲ್ ನಲ್ಲಿ ದಾಖಲಾದ ಭೂಮಿಯು ಪ್ರಾಚಾರ್ಯರು ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯ ಸರ್ವ ಹಕ್ಕುಗಳಿಂದ ಮಾಲಿಕತ್ವ ಹಾಗೂ ಸ್ವಾಧೀನತೆ ಹೊಂದಿರುತ್ತದೆ.
ಸದರಿ ಖರೀದಿ ಪತ್ರದನ್ವಯ ಷೆಡ್ಯೂಲ್ ನಲ್ಲಿ ವಿವರಿಸಿದ ಭೂಮಿ ಖಾತೆ ಕಂದಾಯ ಇಲಾಖೆಯಲ್ಲಿ ನಮೂನೆ 15 ಪ್ರಪತ್ರ ಸಂಖ್ಯೆ 15 (148ನೇ ನಿಯಮ) ದ ಪ್ರಕಾರ 21-08-2018 ದಿಂದ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ (ಪ.ಜಾ.-825) ಹೆಸರಿನಲ್ಲಿ ವರ್ಗ ಮಾಡಿಸಿಕೊಂಡು ಭೂಮಿಯ ಜವಾಬ್ದಾರಿಯನ್ನು ಪಡೆದಿದೆ. ಸರಕಾರಿ ಮಾಲಿಕತ್ವದ ಸರ್ವೆ ನಂ 22/1/ ಕ್ಷೇತ್ರ 08ಎಕರೆ 21 ಗುಂಟೆ ಇದರಲ್ಲಿ (00-12 ಗುಂಟೆ ಖರಾಬ -ಬಿ) ಉಳಿದ 08 ಎಕರೆ 08 ಗುಂಟೆ ಸರಕಾರಿ ಭೂಮಿಯಲ್ಲಿ ಅಂದಾಜಿನ ಪ್ರಕಾರ 4 ರಿಂದ 5 ಎಕರೆ ಭೂಮಿಯಲ್ಲಿ ಶಿವನಗೌಡ ತಂದೆ ಹನಮಪ್ಪ ಗೋರೆಬಾಳ ಸಾಗುವಳಿ ಮಾಡಿರುತ್ತಾರೆ.
ಸದರಿ ಜಮೀನು ಸರಕಾರದ ಆಸ್ತಿಯಾಗಿರುತ್ತದೆ. ಸಾರ್ವಜನಿಕರು ಸದರಿ ಜಮೀನಿನಲ್ಲಿ ಒಕ್ಕಲುತನ ಅಥವಾ ಯಾವುದೇ ತರಹದ ಚಟುವಟಿಕೆಗಳನ್ನು ಮಾಡುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಅಂತವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕಾಗಿರುತ್ತದೆ. ಆದರೆ ಕಾಲೇಜಿನ ಪ್ರಾಂಶುಪಾಲರು ಕಂಡರೂ ಕಾಣದ ಹಾಗೆ ಕುಳಿತ್ತಿದ್ದಾರೆ. ಕಾರಣ ಸಂಬಂಧಿಸಿದ, ತಾಲೂಕಾ ದಂಡಾಧಿಕಾರಿಗಳು, ಕಂದಾಯ ಅಧಿಕಾರಿಗಳು ಸೂಕ್ತವಾದ ತನಿಖೆ/ಪಂಚನಾಮೆ ಮಾಡಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಮ್ಮ ಪಕ್ಷದ ಒತ್ತಾಯವಾಗಿದೆ. ಹಾಗೆಯೇ ಕಳೆದ 2018 ರಿಂದ ಇಲ್ಲಿವರೆಗೆಡಾ :ಬಿ.ಆರ್.ಅಂಬೇಡ್ಕರ್ ವಸತಿ ನಿಲಯಕ್ಕೆ ನೀಡಿದ ಜಮೀನಿನಲ್ಲಿ ಶಿವನಗೌಡ ತಂದೆ ಹನಮಪ್ಪ ಗೊರೆಬಾಳ ಎಂಬುವವರು ಅನಧಿಕೃತ ಸಾಗುವಳಿ ಮಾಡಿದವರ ಮೇಲೆ ಸೂಕ್ತ ಕಾನೂನು ಕಠಿಣ ಕ್ರಮ ಜರುಗಿಸಿ ಕೂಡಲೇ ಸದರಿ ಸ್ಥಳದಲ್ಲಿ ಅಂಬೇಡ್ಕರ್ ವಸತಿ ನಿಲಯವನ್ನು ನಿರ್ಮಾಣ ಮಾಡಬೇಕೆಂದು ನಮ್ಮ ಒತ್ತಾಯವಾಗಿದೆ. ಇಲ್ಲದೇ ಹೋದಲ್ಲಿ ಸಂಬಂಧಿಸಿದ ಇಲಾಖೆ ಮುಂದೆ ನಮ್ಮ ಪಕ್ಷದಿಂದ ವತಿಯಿಂದ ಪ್ರತಿಭಟನೆ ಹೋರಾಟವನ್ನು ಆಯೋಜಿಸಬೇಕಾಗುತ್ತದೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಾಬುಸಾಬ ಬೆಳ್ಳಟ್ಟಿ,ಹೆಚ್.ಆರ್.ಹೊಸಮನಿ, ಯಲ್ಲಪ್ಪ ಗೋಮರ್ಸಿ ಇದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
