ಐತಿಹಾಸಿಕ ಮಹಾಲಿಂಗಪುರ ತಾಲೂಕು ಹೋರಾಟದಲ್ಲಿ 120ಕ್ಕೂ ಹೆಚ್ಚು ಟ್ರ್ಯಾಕ್ಟರ್,ರಿಕ್ಷಾ ಮೂಲಕ ರೈತರು ಭಾಗಿ
ಮಹಾಲಿಂಗಪುರ: ಕಳೆದ ಎಂಟು ದಿನಗಳಿಂದ ನಿರಂತರವಾಗಿ ಮಹಾಲಿಂಗಪುರ ತಾಲೂಕಿಗಾಗಿ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟಕ್ಕೆ ಮಹಾಲಿಂಗಪುರ ಸುತ್ತಲಿನ ಹಳ್ಳಿಗಳ ರೈತರು,ರೈತ ಸಂಘದ ಮುಖಂಡರು ಹಾಗೂ ಸ್ಥಳೀಯ ರಿಕ್ಷಾ ಚಾಲಕರು ತಮ್ಮ ತಮ್ಮ ವಾಹನಗಳೊಂದಿಗೆ ಹೋರಾಟಕ್ಕೆ ಬೆಂಬಲ ನೀಡಿ ಮಹಾಲಿಂಗಪುರ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ಮಾಡುವ ಮುಖಾಂತರ ತಾಲೂಕು ಹೋರಾಟಕ್ಕೆ ಒಕ್ಕರಲಿನಿಂದ ಬೆಂಲಿಸಿದರು.
ಸುಮಾರು ಎರಡು ಮೂರು ದಶಕಗಳಿಂದ ಪಟ್ಟಣವನ್ನು ತಾಲೂಕುವಾಗಿ ಘೋಷಿಸುವ ಬೇಡಿಕೆಯಾಗಿದ್ದ ಕಳೆದ ಎಂಟು ದಿನಗಳಿಂದ ತೀವ್ರಗೊಂಡಿದ್ದು ಮಹಾಲಿಂಗಪುರ ಮತ್ತು ಸುತ್ತಲಿನ ಹಳ್ಳಿಯ ಜನತೆ ಒಗ್ಗಟ್ಟಾಗಿ ಅನಿರ್ದಿಷ್ಟ ಹೋರಾಟವನ್ನು ತಾಲೂಕು ಘೋಷಿಣೆಯಾಗುವರೆಗೂ ನಿರಂತರವಾಗಿ ಹೋರಾಟವನ್ನು ಜೀವಂತವಾಗಿಡಲಾಗುವುದು ಎಂದು ಒಕ್ಕರಲಿನಿಂದ ನುಡಿದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
