ಡಾಕ್ಟರೇಟ್ ಪದವಿಗೆ ಭಾಜನರಾದ ಮಾನಂಗಿ ಗ್ರಾಮದ ಮೋಹನ್‌ಕುಮಾರ್
ಚಿತ್ರದುರ್ಗ ತಾಲೂಕು, ಮಾನಂಗಿ ಗ್ರಾಮದ ತುಂಗಮ್ಮ ಹಾಗೂ ಕುಮಾರಪ್ಪ.ಕೆ.ಎಂ ದಂಪತಿಗಳ ಮಗನಾದ ಮೋಹನ್‌ಕುಮಾರ್.ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಕಾವ್ಯಶ್ರೀ.ಜಿ ಮಾರ್ಗದರ್ಶನದಲ್ಲಿ ಮೋಹನ್ ಕುಮಾರ್.ಕೆ ಮಂಡಿಸಿದ
“ಕನ್ನಡ ರಂಗಪತ್ರಿಕೆಗಳ ಸಾಂಸ್ಕೃತಿಕ ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ. ಏ.12 ರಂದು ಜರುಗಿದ ಕನ್ನಡ ವಿಶ್ವವಿದ್ಯಾಲಯದ 30 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕುಲಪತಿ ಸ.ಚಿ. ರಮೇಶ್ ಪದವಿ ಪ್ರದಾನ ಮಾಡಿದರು…

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
