ಆಡಳಿತಾತ್ಮಕವಾಗಿ ಕಾರುಣ್ಯ ಆಶ್ರಮಕ್ಕೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಿದ್ಧ…!!!

ಆಡಳಿತಾತ್ಮಕವಾಗಿ ಕಾರುಣ್ಯ ಆಶ್ರಮಕ್ಕೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಿದ್ಧ—- ತಹಸೀಲ್ದಾರ ಮಂಜುನಾಥ ಭೋಗಾವತಿ —– ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ನೂತನವಾಗಿ ಒಳಬಳ್ಳಾರಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಆ ಸ್ಥಳಕ್ಕೆ ಸಿಂಧನೂರಿನ ತಹಸೀಲ್ದಾರರಾದ ಮಂಜುನಾಥ ಭೋಗಾವತಿ ಹಾಗೂ ಸಿಂಧನೂರು ನಗರ ಠಾಣೆಯ ಪಿಎಸ್ಐ ಗಳಾದ ಸೌಮ್ಯ ಹಿರೇಮಠ ಅವರುಗಳು ಭೇಟಿ ನೀಡಿ ಸ್ಥಳದಲ್ಲಿ ಮುಂದೆ ನಡೆಯುವ ಕಾಮಗಾರಿಗಳ ಬಗ್ಗೆ ಮಾಹಿತಿ ತೆಗೆದುಕೊಂಡರು. ಈ ಸಮಯದಲ್ಲಿ ಆಶ್ರಮಕ್ಕೆ ಸ್ಥಳದಾನ ಮಾಡಿದ ಬೂದಿ ಬಸವ ಸ್ವಾಮಿ ತಂದೆ ಸೂಗಯ್ಯ ಸ್ವಾಮಿಯವರಿಗೆ ತಾಲೂಕಾಡಳಿತ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಮಯದಲ್ಲಿ ಮಾತನಾಡಿದ ತಾಲೂಕ ದಂಡಾಧಿಕಾರಿಗಳಾದ ತಹಸಿಲ್ದಾರ್ ಮಂಜುನಾಥ ಭೋಗಾವತಿ ಆಡಳಿತಾತ್ಮಕವಾಗಿ ಕಾರುಣ್ಯ ಆಶ್ರಮಕ್ಕೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ತಾಲೂಕಾಡಳಿತ ವತಿಯಿಂದ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡುತ್ತೇವೆ ಕಾರುಣ್ಯ ಆಶ್ರಮದ ಸೇವೆ ದೇಶದಾದ್ಯಂತ ಹೆಸರುವಾಸಿಯಾಗಿರುವುದು ಸಿಂಧನೂರು ತಾಲೂಕಾಡಳಿತಕ್ಕೆ ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬ ದಾನಿಗಳು ಮುಂದೆ ಬಂದು ಸಹಾಯ ಸೇವೆ ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆಯಬೇಕು ಕೊರೋನ ಎನ್ನುವ ಮಹಾಮಾರಿಯಲ್ಲಿಯೂ ಸಹ ಈ ಟ್ರಸ್ಟ್ ವತಿಯಿಂದ ಜಾಗೃತಿ ಅರಿವು ಅಭಿಯಾನ ಹಾಗೂ ಸುಮಾರು ನಿರ್ಗತಿಕ ಜೀವಿಗಳಿಗೆ ಆಸರೆ ಯಾಗಿರುವುದು ನಮ್ಮೆಲ್ಲರ ಗಮನದಲ್ಲಿದೆ ಇಂದು ಭೂದಾನ ಮಾಡಿರುವ ಬೂದಿ ಬಸವ ಅವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಈ ಸಂಸ್ಥೆಗೆ ಕೈಜೋಡಿಸಬೇಕು ಎಂದು ಮಾತನಾಡಿದರು. ನಂತರ ಮಾತನಾಡಿದ ಸಿಂಧನೂರು ನಗರ ಠಾಣೆಯ ಪಿ.ಎಸ್.ಐ. ಗಳಾದ ಸೌಮ್ಯ ಹಿರೇಮಠ ಕಾರುಣ್ಯ ಆಶ್ರಮದಲ್ಲಿನ ಹಿರಿಯ ಜೀವಿಗಳಿಗೆ ಮಕ್ಕಳ ಮೊಮ್ಮಕ್ಕಳ ಪ್ರೀತಿಯನ್ನು ತೋರುತ್ತಿರುವ ಅಲ್ಲಿನ ಸಿಬ್ಬಂದಿಗಳ ಸೇವೆ ಶ್ಲಾಘನೀಯ.

ಇಂತಹ ಸೇವೆಗೆ ಭೂದಾನ ಮಾಡಿರುವ ಬೂದಿಬಸವ ಸ್ವಾಮಿ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬ ದಾನಿ ಮೈಗೂಡಿಸಿಕೊಂಡು ನೂತನವಾಗಿ ನಿರ್ಮಾಣವಾಗುತ್ತಿರುವ ಈ ಕಾರುಣ್ಯ ಸಂಸ್ಥೆಗೆ ಎಲ್ಲರೂ ಕೈಜೋಡಿಸಬೇಕು ದಾನಿಗಳು ಮುಂದೆ ಬಂದು ಈ ಸಂಸ್ಥೆಗೆ ಸಹಾಯ ಮಾಡಿದರೆ ಅವರ ತಂದೆತಾಯಿಗಳನ್ನು ಪೂಜಿಸಿದ ಹಾಗೆ ಎಂದು ಮಾತನಾಡಿ ಬೂದಿ ಬಸವ ಸ್ವಾಮಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.ಆ ಸ್ಥಳದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಎಲ್ಲಾ ಮಾಹಿತಿಗಳನ್ನು ವಿವರಿಸಿದರು. ಈ ಸಮಯದಲ್ಲಿ ಕಾರುಣ್ಯಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರ ಮಠ. ಭೂ ದಾನಿಗಳಾದ ಬೂದಿ ಬಸವ ಸ್ವಾಮಿ. ಬಾದರ್ಲಿ ವಿ. ಎಸ್. ಎಸ್. ಎನ್. ವ್ಯವಸ್ಥಾಪಕರಾದ ಚನ್ನಬಸವಸ್ವಾಮಿ ಹಸಮಕಲ್. ಗುತ್ತೇದಾರರಾದ ಕ್ರಾಂತಿ ಗೌಡ ಬಾದರ್ಲಿ. ವೀರೇಶ ಕುಂಬಾರ ಬಾದರ್ಲಿ. ವೀರಭದ್ರಗೌಡ ಗಿಣಿವಾರ. ನಾಗೇಶ ಸ್ವಾಮಿ ಕಾರುಣ್ಯ ಆಶ್ರಮ. ಮಹೇಶ ವಿಶ್ವಕರ್ಮ ಕಾರುಣ್ಯ ಆಶ್ರಮ. ಹಾಗೂ ಆಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend